For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ ಮಯೂರಿ

  |

  ನಟಿ ಮಯೂರಿ ಮಾಡಿರುವುದು ಕೆಲವೇ ಸಿನಿಮಾಗಳಾದರೂ ಒಳ್ಳೆ ಒಳ್ಳೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆಯೇ ನಾಗತಿಹಳ್ಳಿ ಚಂದ್ರಶೇಖರ್ ಅಂತಹ ಹಿರಿಯ ನಿರ್ದೇಶಕರ ಜೊತೆಗೆ ಕೆಲಸ ಮಾಡುವ ಅವಕಾಶ ಅವರಿಗೆ ಸಿಕ್ಕಿತ್ತು.

  ಹಾಗೆ ನೋಡಿದರೆ, ಮಯೂರಿ ಸ್ಟಾರ್ ಹೀರೋಗಳಿಗೆ ಹೀರೋಯಿನ್ ಆಗಿದ್ದು, ತುಸು ಕಡಿಮೆಯೇ. ಹೀಗಿರುವಾಗ, ನಟ ಧ್ರುವ ಸರ್ಜಾ ಸಿನಿಮಾದಲ್ಲಿ ಮಯೂರಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಕೈ ತುಂಬ ಸಿನಿಮಾ ಅವಕಾಶಗಳನ್ನು ಹೊಂದಿರುವ ಇವರಿಗೆ ಮತ್ತೊಂದು ಸಿನಿಮಾ ಸಿಕ್ಕಿದೆ.

  ಹೇಗಿದ್ದ ಧ್ರುವ ಸರ್ಜಾ ಈಗ ಹೇಗಾಗಿದ್ದಾರೆ ನೋಡಿ ಹೇಗಿದ್ದ ಧ್ರುವ ಸರ್ಜಾ ಈಗ ಹೇಗಾಗಿದ್ದಾರೆ ನೋಡಿ

  ಅಂದಹಾಗೆ, ಧ್ರುವ ಅವರ ಯಾವ ಸಿನಿಮಾದಲ್ಲಿ ಮಯೂರಿ ನಾಯಕಿಯಾಗಿದ್ದರೆ, ಇಬ್ಬರ ಕಾಂಬಿನೇಶನ್ ನಲ್ಲಿ ಹೊಸ ಸಿನಿಮಾ ಬರುತ್ತಿದ್ದೇಯೇ ಎನ್ನುವ ಕುತೂಹಲ ಇದ್ದರೆ ಹಾಗೆ ಮುಂದೆ ಓದಿ...

  'ಪೊಗರು' ಅಡ್ಡದಲ್ಲಿ ಮಯೂರಿ

  'ಪೊಗರು' ಅಡ್ಡದಲ್ಲಿ ಮಯೂರಿ

  ನಟಿ ಮಯೂರಿ ಹಾಗೂ ಧ್ರುವ ಸರ್ಜಾ ಕಾಂಬಿನೇಶನ್ ನಲ್ಲಿ ಯಾವುದೇ ಹೊಸ ಸಿನಿಮಾ ಬರುತ್ತಿಲ್ಲ. ಬದಲಿಗೆ ಧ್ರುವ ನಟನೆಯ 'ಪೊಗರು' ಸಿನಿಮಾದಲ್ಲಿ ಮಯೂರಿ ಕಾಣಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಒಂದು ಮುಖ್ಯ ಪಾತ್ರದಲ್ಲಿ ಮಯೂರಿ ನಟಿಸುತ್ತಿದ್ದಾರೆ.

  ವೈರಲ್ ಆಯ್ತು ಧ್ರುವ ಸರ್ಜಾರ 'ಪೊಗರು' ಚಿತ್ರದ ಮಾಸ್ ಡೈಲಾಗ್ ವೈರಲ್ ಆಯ್ತು ಧ್ರುವ ಸರ್ಜಾರ 'ಪೊಗರು' ಚಿತ್ರದ ಮಾಸ್ ಡೈಲಾಗ್

  ರಶ್ಮಿಕಾ ಮಂದಣ್ಣ ನಾಯಕಿ

  ರಶ್ಮಿಕಾ ಮಂದಣ್ಣ ನಾಯಕಿ

  'ಪೊಗರು' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಆದರೆ, ಇವರ ಜೊತೆಗೆ ಮಯೂರಿ ಕೂಡ ತಂಡವನ್ನು ಸೇರಿಕೊಂಡಿದ್ದಾರೆ. ಹೀರೋಯಿನ್ ಎಂದು ಕರೆಸಿಕೊಳ್ಳುವುದಕ್ಕಿಂತ ಕಲಾವಿದೆ ಎಂದು ಕರೆಸಿಕೊಳ್ಳಲು ಇಷ್ಟ ಎನ್ನುವ ಮಯೂರಿ ತಮ್ಮ ಪಾತ್ರಕ್ಕೆ ಇರುವ ಪ್ರಾಮುಖ್ಯತೆ ನೋಡಿ ಸಿನಿಮಾವನ್ನು ಒಪ್ಪಿಕೊಂಡಿದ್ದಾರಂತೆ.

  'ಪೊಗರು' ತಾರ ಬಳಗ

  'ಪೊಗರು' ತಾರ ಬಳಗ

  'ಪೊಗರು' ಸಿನಿಮಾದ ತಾರಬಳಗ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ಜಗಪತಿ ಬಾಬು, ಮಯೂರಿ, ರಾಘವೇಂದ್ರ ರಾಜ್ ಕುಮಾರ್, ರವಿಶಂಕರ್, ಧನಂಜಯ್, ಚಿಕ್ಕಣ್ಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಸದ್ಯ, ಹೈದರಾಬಾದ್ ನಲ್ಲಿರುವ ರಾಮೂಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ.

  ಶಿವಣ್ಣ, ಜಗ್ಗೇಶ್ ಬಳಿಕ ಧ್ರುವ ಚಿತ್ರದಲ್ಲಿ ಮಯೂರಿ

  ಶಿವಣ್ಣ, ಜಗ್ಗೇಶ್ ಬಳಿಕ ಧ್ರುವ ಚಿತ್ರದಲ್ಲಿ ಮಯೂರಿ

  ನಟ ಜಗ್ಗೇಶ್ '8MM' ಸಿನಿಮಾದಲ್ಲಿ ನಟಿ ಮಯೂರಿ ಕಾಣಿಸಿಕೊಂಡಿದ್ದರು. ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಚಿತ್ರದಲ್ಲಿಯೂ ಮಯೂರಿ ನಟಿಸಿದ್ದಾರೆ. ಇವುಗಳ ಬಳಿಕ ಧ್ರುವ ಸರ್ಜಾ ಸಿನಿಮಾದಲ್ಲಿ ಸಹ ನಟಿಸುವ ಅವಕಾಶ ಪಡೆದಿದ್ದಾರೆ. ಇವುಗಳ ಜೊತೆಗೆ 'ನನ್ನ ಪ್ರಕಾರ', 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಸಿನಿಮಾಗಳಲ್ಲಿ ಮಯೂರಿ ಬ್ಯುಸಿ ಇದ್ದಾರೆ.

  English summary
  Kannada actress, 'Krishna Leela' fame Mayuri kyatari playing important role in Dhruva Sarja's 'Pogaru' movie. The movie is directing by Nanda kishore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X