»   » ಕೈ ಎತ್ತಿದ 'ದೇವರು ಕೊಟ್ಟ ತಂಗಿ' ಮೀರಾ ಜಾಸ್ಮಿನ್

ಕೈ ಎತ್ತಿದ 'ದೇವರು ಕೊಟ್ಟ ತಂಗಿ' ಮೀರಾ ಜಾಸ್ಮಿನ್

Posted By:
Subscribe to Filmibeat Kannada
ಕನ್ನಡದ 'ಮೌರ್ಯ', 'ಅರಸು' ಹಾಗೂ 'ದೇವರು ಕೊಟ್ಟ ತಂಗಿ' ಮುಂತಾದ ಚಿತ್ರಗಳಲ್ಲಿ ನಟಿಸಿ ಸ್ಯಾಂಡಲ್ ವುಡ್ ಸಿನಿಪ್ರೇಕ್ಷಕರ ಪ್ರೀತಿ ಗಳಿಸಿರುವ ಮಲಯಾಳಂ ನಟಿ ಮೀರಾ ಜಾಸ್ಮಿನ್, ಮತ್ತೆ ಸುದ್ದಿಯಾಗಿದ್ದಾರೆ. ಆದರೆ ಅವರೀಗ ಸುದ್ದಿಯಾಗಿರುವುದು ವಿಶೇಷ ಕಾರಣಕ್ಕೆ. ಅದು ಸಂಭಾವನೆ ಕೊಡದ ಚಿತ್ರತಂಡದ ಕೈಗೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಚಿತ್ರಕ್ಕೇ ಕೈಕೊಟ್ಟು ಹೋಗಿದ್ದಾರೆ ಮೀರಾ ಜಾಸ್ಮಿನ್.

ಆಗಿದ್ದಿಷ್ಟು... ಬಾಬು ಜನಾರ್ಧನ್ ನಿರ್ದೇಶನದ ಮಲಯಾಳಂ ಚಿತ್ರ 'ಲಿಸಮ್ಮಯುಡೆ ವೀಡು' ಚಿತ್ರೀಕರಣದಲ್ಲಿದ್ದ ಮೀರಾ ಜಾಸ್ಮಿನ್, ತಾವು ವಿದೇಶಕ್ಕೆ ಹೋಗಿ ಬಂದ ಮೇಲೆ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಚಿತ್ರತಂಡಕ್ಕೆ ತಿಳಿಸಿ ವಿದೇಶಕ್ಕೆ ಹಾರಿದ್ದರು. ಆದರೆ ವಾಪಸ್ ಬಂದ ಮೀರಾ ಜಾಸ್ಮಿನ್ ಮತ್ತೆ ಚಿತ್ರೀಕರಣ ತಾಣಕ್ಕೆ ಹೋಗಲೇ ಇಲ್ಲ. ಅದಿರಲಿ, ಮತ್ತೆ ನಿರ್ದೇಶಕ ಬಾಬು ಜನಾರ್ಧನ್ ಅವರನ್ನು ಭೇಟಿ ಮಾಡಲೂ ಇಲ್ಲ.

ಇದೆಲ್ಲವನ್ನೂ ಕೂಲಕುಂಶವಾಗಿ ವಿಚಾರಿಸಲಾಗಿ ತಿಳಿದುಬಂದ ಸಂಗತಿಯೆಂದರೆ, ನಿರ್ಮಾಪಕರಿಂದ ಮೀರಾ ಜಾಸ್ಮಿನ್ ಕೇಳಿದ ಸಂಭಾವನೆ ಚುಕ್ತಾ ಆಗಲಿಲ್ಲ. ಚಿತ್ರೀಕರಣ ಇನ್ನೇನು ಕೊನೆಯ ಹಂತಕ್ಕೆ ಬಂದಿದ್ದರೂ ಬರಬೇಕಾದ ದುಡ್ಡು ಬಾರದೇ ಕಂಗಾಲಾಗಿದ್ದರು ಮೀರಾ. ಹೀಗಿರುವಾದ ಉಳಿದ ಚಿತ್ರೀಕರಣವನ್ನು ಬಿಟ್ಟು ವಿದೇಶಕ್ಕೆ ಹಾರಿದ ಮೀರಾ, ಮತ್ತೆ ಆ ಚಿತ್ರದ ಶೂಟಿಂಗ್ ಕಡೆ ತಲೆ ಹಾಕಲೇ ಇಲ್ಲ.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ, 'ಓಣಂ' ಹಬ್ಬದ ವೇಳೆ ಬಿಡುಗಡೆ ಆಗಬೇಕಿದ್ದ ಈ ಚಿತ್ರ ಮೀರಾ ಜಾಸ್ಮಿನ್ ಕೈಕೊಟ್ಟಿದ್ದರಿಂದ ಸಂಪೂರ್ಣವಾಗದೇ ನಿಂತುಬಿಟ್ಟಿದೆ. ಇನ್ನೇನು ಸ್ವಲ್ಪ ಭಾಗದ ಚಿತ್ರೀಕರಣ ಹಾಗೂ ಡಬ್ಬಿಂಗ್ ಮಾತ್ರ ಬಾಕಿಯಿದೆ ಅಷ್ಟೇ. ಈ ವೇಳೆ ಎಚ್ಚೆತ್ತ ಮೀರಾ, ಕಾಸು ಬಂದರೆ ಮಾತ್ರ ಶೂಟಿಂಗ್ ಎನ್ನುವ ತತ್ವ ಅನುಸರಿಸಿ, ಈ ನಿರ್ಧಾರ ಕೈಗೊಂಡಿದ್ದಾರೆ. ಬೇರೆ ಏನೋ, ಆದರೆ ಮೀರಾ ಅಭಿಮಾನಿಗಳಿಗಂತೂ ನಿರಾಸೆಯಾಗಿದೆ ಎನ್ನಬಹುದು. (ಏಜೆನ್ಸೀಸ್) 

English summary
Meera Jasmine, who has not been in news for some time now, is back in headlines. The only movie she was doing was Lisammayude Veedu, directed by Babu Janardhanan. Now she went missing on the sets of Lisammayude Veedu, because of Non-Payment. 
 
Please Wait while comments are loading...