For Quick Alerts
  ALLOW NOTIFICATIONS  
  For Daily Alerts

  'ಆಚಾರ್ಯ' ವಿತರಕರ ಆಕ್ರೋಶಕ್ಕೆ ಮಣಿದ ಮೆಗಾ ಕುಟುಂಬ: ನಷ್ಟ ಭರಿಸಲು ಕೊಟ್ಟಿದ್ದೆಷ್ಟು?

  |

  ಈ ಸಿನಿಮಾಗಾಗಿ ಕೆಲಸ ಮಾಡಿದವರೆಲ್ಲಾ ದಿಗ್ಗಜರೇ. ಒಂದ್ಕಡೆ ಮೆಗಾಸ್ಟಾರ್ ಚಿರಂಜೀವಿ. ಇನ್ನೊಂದ್ಕಡೆ ಮೆಗಾ ಪವರ್‌ಸ್ಟಾರ್ ರಾಮ್‌ಚರಣ್ ತೇಜಾ. ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಿರ್ದೇಶ ಕೊರಟಾಲ ಶಿವ. ಈ ಮೂವರ ಮಹಾ ಸಂಗಮದ ಹೊರತಾಗಿಯೂ 'ಆಚಾರ್ಯ' ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಲಿಲ್ಲ.

  'ಆಚಾರ್ಯ' ಸಿನಿಮಾ ಮೆಗಾ ಹೀರೊಗಳ ನಿರೀಕ್ಷೆ ದುಪ್ಪಟ್ಟು ಮಾಡಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತೆ ಅಂತಲೇ ನಂಬಲಾಗಿತ್ತು. ಆದರೆ, ಸಿನಿಮಾ ಬಿಡುಗಡೆಯಾದ ದಿನವೇ ನೆಗೆಟಿವ್ ಒಪಿನಿಯನ್ ಬಂದಿದ್ದರಿಂದ ಬಾಕ್ಸಾಫೀಸ್‌ನಲ್ಲಿ ಮತ್ತೆ ಎದ್ದೇಳಲೇ ಇಲ್ಲ.

  ಆಚಾರ್ಯ ಲಾಸ್: ಹಣ ಹಿಂತಿರುಗಿಸಿದ ಕೊರಟಾಲ ಶಿವ, ಚಿರಂಜೀವಿ ವಾಪಸ್ ಕೊಟ್ಟಿದ್ದೆಷ್ಟು?ಆಚಾರ್ಯ ಲಾಸ್: ಹಣ ಹಿಂತಿರುಗಿಸಿದ ಕೊರಟಾಲ ಶಿವ, ಚಿರಂಜೀವಿ ವಾಪಸ್ ಕೊಟ್ಟಿದ್ದೆಷ್ಟು?

  ಅಪ್ಪ-ಮಗ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಿದ್ದರಿಂದ ಬಾಕ್ಸಾಫೀಸ್ ದೋಚುವುದು ಖಚಿತ ಎಂದೇ ದೊಡ್ಡ ಮೊತ್ತಕ್ಕೆ ವಿತರಕರು ಸಿನಿಮಾ ಖರೀದಿ ಮಾಡಿದ್ದರು. ಆದರೆ ಅವರಿಗೆ ಆ ಸಿನಿಮಾದ ಮೊದಲ ರಿಪೋರ್ಟ್ ನಿರಾಸೆಯನ್ನುಂಟು ಮಾಡಿತ್ತು. ಹೀಗಾಗಿ ಭಾರೀ ನಷ್ಟ ಅನುಭವಿಸಿದ್ದರು. ಈ ನಷ್ಟವನ್ನು ಭರಿಸುವಂತೆ ಮೆಗಾ ಹೀರೊಗಳಿಗೆ ದುಂಬಾಲು ಬಿದ್ದಿದ್ದರು. ಚಿರಂಜೀವಿ ಮನೆ ಮುಂದೆ ಪ್ರತಿಭಟನೆ ಕೂಡ ಮಾಡಿದ್ದರು. ಅದಕ್ಕೀಗ ಮೆಗಾ ಕುಟುಂಬ ಮಣಿದಿದ್ದು, ನಷ್ಟ ಭರಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

  ಚಿರಂಜೀವಿ ಹಾಗೂ ಬಾಲಕೃಷ್ಣ ಸಿನಿಮಾಗಳ ಮೇಲೆ ಕಣ್ಣಿಟ್ಟಿದ್ದೇಕೆ ಟಾಲಿವುಡ್‌? ಚಿರಂಜೀವಿ ಹಾಗೂ ಬಾಲಕೃಷ್ಣ ಸಿನಿಮಾಗಳ ಮೇಲೆ ಕಣ್ಣಿಟ್ಟಿದ್ದೇಕೆ ಟಾಲಿವುಡ್‌?

   ನಷ್ಟ ಭರಿಸಿದ ಚಿರು-ರಾಮ್‌ ಚರಣ್

  ನಷ್ಟ ಭರಿಸಿದ ಚಿರು-ರಾಮ್‌ ಚರಣ್

  ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ಇಬ್ಬರೂ 'ಆಚಾರ್ಯ' ವಿತರಕರ ಕಷ್ಟಗಳಿಗೆ ಕೊನೆ ಸ್ಪಂದಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. 'ಆಚಾರ್ಯ' ಕೋಟಿ ಕೋಟಿ ನಷ್ಟ ಅನುಭವಿಸಿದ್ದ ವಿತರಕರು ಬೀದಿಗೆ ಬಂದಿದ್ದರು. ಹೀಗಾಗಿ ಈ ನಷ್ಟವನ್ನು ಭರಿಸುವಂತೆ ಪಟ್ಟು ಹಿಡಿದು ಕೂತಿದ್ದರು. ವಿತರಕರು ಮೆಗಾ ಕುಟುಂಬದ ಮನೆ ಮುಂದೆ ಜಮಾಸಿಯಿದ್ದರು. ಕೊನೆಗೂ ಚಿರಂಜೀವಿ ಹಾಗೂ ರಾಮ್‌ ಚರಣ್ ಇಬ್ಬರೂ ವಿತರಕರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ ಎನ್ನಲಾಗಿದೆ.

   ಮೆಗಾ ಕುಟುಂಬ ವಿತರಕರಿಗೆ ಕೊಟ್ಟಿದ್ದೆಷ್ಟು?

  ಮೆಗಾ ಕುಟುಂಬ ವಿತರಕರಿಗೆ ಕೊಟ್ಟಿದ್ದೆಷ್ಟು?

  ಕಳೆದೊಂದು ದಿನದಿಂದ ಮೆಗಾ ಕ್ಯಾಂಪ್‌ನಿಂದ ಸುದ್ದಿಯೊಂದು ಹರಿದಾಡುತ್ತಿದ್ದು, ವಿತರಕರಿಗೆ ಚಿರಂಜೀವಿ ಹಾಗೂ ರಾಮ್ ಚರಣ್ ಇಬ್ಬರೂ 20 ಕೋಟಿ ರೂ.ಯನ್ನು ನೀಡಿದ್ದಾರೆ ಎನ್ನಲಾಗಿದೆ. 'ಆಚಾರ್ಯ' ಸಿನಿಮಾದಿಂದ ಆದ ನಷ್ಟವನ್ನು ಭರಿಸಲು ತಮ್ಮ ಭಾಗದ ಹಣವನ್ನು ನೀಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇದು ತೆಲುಗು ಮಾಧ್ಯಮಗಳಲ್ಲೂ ವರದಿಯಾಗಿದೆ. ಆದರೆ, ಮೆಗಾ ಕುಟುಂಬದಿಂದ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.

   ಆಚಾರ್ಯ ಸಂಭಾವನೆ ನೀಡಿದ್ರಾ ಚಿರು-ರಾಮ್ ಚರಣ್

  ಆಚಾರ್ಯ ಸಂಭಾವನೆ ನೀಡಿದ್ರಾ ಚಿರು-ರಾಮ್ ಚರಣ್

  'ಆಚಾರ್ಯ' ಸಿನಿಮಾದಿಂದ ಆದ ನಷ್ಟವನ್ನು ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ತೀರಿಸಿದ್ದಾರೆ ಎನ್ನುವ ಮಾತೇನೋ ಹರಿದಾಡುತ್ತಿದೆ. ಆದರೆ, ಇದರ ಹಿಂದೆ ಹಲವು ಪ್ರಶ್ನೆಗಳು ಟಾಲಿವುಡ್ ಮಂದಿಯನ್ನು ಕಾಡುತ್ತಿದೆ. 'ಆಚಾರ್ಯ' ಸಿನಿಮಾ ಬಿಡುಗಡೆಗೂ ಮುನ್ನವೇ ಲಾಭದಲ್ಲಿತ್ತು. ಆ ಲಾಭದಲ್ಲಿ ಬಂದ ಹಣದಲ್ಲಿ 20 ಕೋಟಿ ರೂ.ಯನ್ನು ಚಿರಂಜೀವಿ ಹಾಗೂ ರಾಮ್‌ ಚರಣ್ ನೀಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇನ್ನೊಂದು ಕಡೆ ತಮ್ಮ ಸಂಭಾವನೆಯನ್ನೇ ನೀಡಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.

   ತಲೆಕೆಡಿಸಿಕೊಂಡಿದ್ದ ಕೊರಟಾಲ ಶಿವ

  ತಲೆಕೆಡಿಸಿಕೊಂಡಿದ್ದ ಕೊರಟಾಲ ಶಿವ

  'ಆಚಾರ್ಯ' ಸಿನಿಮಾ ಮೆಗಾ ಕುಟುಂಬ ಹಾಗೂ ನಿರ್ದೇಶಕ ಕೊರಟಾಲ ಶಿವಗೆ ದೊಡ್ಡ ಡ್ಯಾಮೇಜ್ ಮಾಡಿದೆ. ನಷ್ಟ ಹೊಂದಿದ ವಿತರಕರು ನಿರ್ದೇಶಕ ಕೊರಟಾಲ ಶಿವನ ಹಿಂದೆ ಬಿದ್ದಿದ್ದರು. ನಷ್ಟವನ್ನು ಭರಿಸುವಂತೆ ದುಂಬಾಲು ಬಿದ್ದಿದ್ದರು. ಇದರಿಂದ ನಿರ್ದೇಶಕ ಬೇಸರಕ್ಕೊಳಗಾಗಿ, ತಾವೇ ನಷ್ಟ ಭರಿಸಲು ಮುಂದಾಗಿದ್ದರು ಎನ್ನಲಾಗಿತ್ತು. ಆದ್ರೀಗ ಮೆಗಾ ಕುಟುಂಬವೇ ಈ ನಷ್ಟ ಭರಿಸಿದೆ ಎಂದು ಗುಲ್ಲೆದ್ದಿದೆ.

  English summary
  Mega Star Chiranjeevi And Ram Charan Pays 20cr to Distrubuters For Loss Of Acharya, Know More.
  Thursday, July 14, 2022, 12:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X