ಮತ್ತೊಂದು ರೀಮೇಕ್ ಚಿತ್ರದಲ್ಲಿ ಚಿರಂಜೀವಿ: ಮೋಹನ್ ರಾಜ್ ನಿರ್ದೇಶನ

ಮೆಗಾಸ್ಟಾರ್ ಚಿರಂಜೀವಿ ಇತ್ತೀಚಿನ ದಿನಗಳಲ್ಲಿ ರೀಮೇಕ್ ಸಿನಿಮಾಗಳ ಕಡೆ ಹೆಚ್ಚು ಒಲವು ತೋರುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ಸಿನಿಮಾ ಇಂಡಸ್ಟ್ರಿಯಿಂದ ಅಂತರ ಕಾಯ್ದುಕೊಂಡಿದ್ದ ಚಿರಂಜೀವಿ ಖೈದಿ 150 ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದರು. ಇದು ತಮಿಳಿನಲ್ಲಿ ವಿಜಯ್ ನಟಿಸಿದ್ದ ಕತ್ತಿ ಸಿನಿಮಾ ರೀಮೇಕ್ ಆಗಿತ್ತು.

ನಂತರ ಸೈರಾ ನರಸಿಂಹ ರೆಡ್ಡಿ ಎಂಬ ಹಿಟ್ ಚಿತ್ರ ಕೊಟ್ಟರು. ಪ್ರಸ್ತುತ ಆಚಾರ್ಯ ಸಿನಿಮಾದಲ್ಲಿ ಚಿರು ನಟಿಸುತ್ತಿದ್ದಾರೆ. ಈ ಸಿನಿಮಾ ಬಳಿಕ ಮೆಗಾಸ್ಟಾರ್ ಬಳಿ ಎರಡು ಪ್ರಾಜೆಕ್ಟ್ ಇದೆ. ಈ ಎರಡೂ ಚಿತ್ರವೂ ರೀಮೇಕ್. ಒಂದು ತಮಿಳಿನಿಂದ ರೀಮೇಕ್ ಮಾಡಲು ಮುಂದಾಗಿದ್ದರೆ, ಇನ್ನೊಂದು ಮಲಯಾಳಂ ಚಿತ್ರ. ಮುಂದೆ ಓದಿ....

ಲೂಸಿಫರ್ ರೀಮೇಕ್‌ನಲ್ಲಿ ಮೆಗಾಸ್ಟಾರ್

ಲೂಸಿಫರ್ ರೀಮೇಕ್‌ನಲ್ಲಿ ಮೆಗಾಸ್ಟಾರ್

ಪೃಥ್ವಿರಾಜ್ ಸುಕುಮಾರನ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದ ಲೂಸಿಫರ್ ಸಿನಿಮಾವನ್ನು ತೆಲುಗಿನಲ್ಲಿ ರೀಮೇಕ್ ಮಾಡುವ ತಯಾರಿ ನಡೆಯುತ್ತಿದ್ದು, ಮೆಗಾಸ್ಟಾರ್ ಚಿರಂಜೀವಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ.

ಮೋಹನ್ ಲಾಲ್ ಪಾತ್ರದಲ್ಲಿ ಚಿರು

ಮೋಹನ್ ಲಾಲ್ ಪಾತ್ರದಲ್ಲಿ ಚಿರು

ಲೂಸಿಫರ್ ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯ ಪಾತ್ರ ನಿರ್ವಹಿಸಿದ್ದರು. ಸದ್ಯದ ಮಾಹಿತಿ ಪ್ರಕಾರ ಮೋಹನ್ ರಾಜು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಜಯಂ, ಥನಿ ಒರುವನ್, ವೇಲೈಕಾರನ್ ಅಂತಹ ಚಿತ್ರಗಳನ್ನು ನಿರ್ದೇಶಿಸಿರುವ ಮೋಹನ್ ರಾಜ್ ಲೂಸಿಫರ್ ತೆಲುಗಿಗೆ ಡೈರೆಕ್ಷನ್ ಮಾಡಬಹುದು.

ಮುಂದಿನ ವರ್ಷಕ್ಕೆ ಸೆಟ್ಟೇರಬಹುದು

ಮುಂದಿನ ವರ್ಷಕ್ಕೆ ಸೆಟ್ಟೇರಬಹುದು

'ಅಂಧಾದುನ್' ತೆಲುಗು ರೀಮೇಕ್ ಚಿತ್ರವನ್ನು ಮೋಹನ್ ರಾಜ್ ನಿರ್ದೇಶಿಸಬೇಕಿತ್ತು. ಆದ್ರೆ, ಆ ಚಿತ್ರದಿಂದ ಹೊರಗೆ ಬಂದಿದ್ದಾರೆ. ಇದೀಗ, ಚಿರಂಜೀವಿ ನಟನೆಯ ಲೂಸಿಫರ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಈ ಸಿನಿಮಾ ಸೆಟ್ಟೇರಬಹುದು ಎಂಬ ಮಾಹಿತಿ ಇದೆ.

Recommended Video

'ಫ್ಯಾಂಟಮ್' ಕ್ಲೈಮ್ಯಾಕ್ಸ್ ನಲ್ಲಿ ಸುದೀಪ್ ಅಭಿಮಾನಿಗಳಿಗೆ ಹಬ್ಬ | Filmibeat Kannada
ವೇದಾಲಂ ರೀಮೇಕ್!

ವೇದಾಲಂ ರೀಮೇಕ್!

ತಮಿಳಿನಲ್ಲಿ ಅಜಿತ್ ಕುಮಾರ್ ನಟಿಸಿದ್ದ ಸೂಪರ್ ಹಿಟ್ ಚಿತ್ರ ವೇದಾಲಂ ತೆಲುಗಿಗೆ ರೀಮೇಕ್ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಚಿರಂಜೀವಿ ನಟಿಸುವ ಲೆಕ್ಕಾಚಾರ ಟಾಲಿವುಡ್‌ನಲ್ಲಿದೆ. ಬಹುಶಃ ಈ ಚಿತ್ರಕ್ಕೂ ಚಿರಂಜೀವಿ ಗ್ರೀನ್ ಸಿಗ್ನಲ್ ಕೊಡುವ ನಿರೀಕ್ಷೆ ಇದೆ.

More from Filmibeat

English summary
Telugu Megastar Chiranjeevi is ready to remake Malayalam hiit movie Lucifer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X