»   » ಬೆಂಗಳೂರು 'ಸಂಪಿಗೆ' ಮೇಘನಾ, ಇದು ನಿಜನಾ?

ಬೆಂಗಳೂರು 'ಸಂಪಿಗೆ' ಮೇಘನಾ, ಇದು ನಿಜನಾ?

Posted By:
Subscribe to Filmibeat Kannada

ಕನ್ನಡ ಚಿತ್ರರಂಗಕ್ಕೆ ಪುಂಡ ಚಿತ್ರದ ಮೂಲಕ ಕಾಲಿಟ್ಟ ಸುಂದರ್ ರಾಜ್-ಪ್ರಮೀಳಾ ಜೋಷಾಯ್ ಪುತ್ರಿ ಮೇಘನಾ ರಾಜ್ ಅವರ ಇತ್ತೀಚಿನ ಮಲೆಯಾಳಂ ಚಿತ್ರ 'ಮೆಮೊರೀಸ್' ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ, ಪಕ್ಕದ ಮಾಲಿವುಡ್(ಕೇರಳ ಚಿತ್ರರಂಗದಲ್ಲಿ) ಬೆಳಗುತ್ತಿರುವ ಬೆಂಗಳೂರಿನ ಸಂಪಿಗೆ ಮೇಘನಾ ಬೇಡದ ವಿಷಯಗಳಿಗೆ ಸುದ್ದಿಯಾಗಿ ಗಾಸಿಪ್ ವಿಭಾಗದ ಕಾಯಂ ಅತಿಥಿಯಾಗುತ್ತಿದ್ದಾಳೆ.

ಈ ಹಿಂದೆ ಹಲವು ನಟರ ಜೊತೆ ಮೇಘನಾ ಡೇಟಿಂಗ್ ಬಗ್ಗೆ ಗಾಸಿಪ್ ಹರಡಿತ್ತು ಇದಕ್ಕೆ ಉತ್ತರ ನೀಡಿದ್ದ ಮೇಘನಾ ಯಾರನ್ನು ನಾನು ಪ್ರೀತಿಸಿಲ್ಲ ಎಂದಿದ್ದಳು. ನಾನು ಮದುವೆಯಾಗಲು ಇನ್ನೂ ಐದು ವರ್ಷ ಬಾಕಿ ಇದೆ. ಸದ್ಯಕ್ಕಂತೂ ಯಾರನ್ನು ನಾನು ಮೆಚ್ಚಿಲ್ಲ, ಮದುವೆ ಬಗ್ಗೆ ಯೋಚಿಸಿಲ್ಲ ಎಂದಿದ್ದಳು. ಆದರೆ, ಮದುವೆಯದರೆ ಅದು ಚಿತ್ರರಂಗದ ಒಬ್ಬ ಯೋಗ್ಯ ನಟನನ್ನೇ ಆಗುತ್ತೇನೆ ಎಂದು ಅಚ್ಚರಿ ಮೂಡಿಸಿದ್ದಳು.

ಈ ನಡುವೆ ಮಲೆಯಾಳಂ ಚಿತ್ರರಂಗದ ನಟ ಅನೂಪ್ ಮೆನನ್ ಜೊತೆ ಮೇಘನಾ ಅಗತ್ಯಕ್ಕಿಂತ ಹೆಚ್ಚು ಓಡಾಟ ನಡೆಸಿದ್ದಾಳೆ. ಇಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿಯನ್ನು ಕೇರಳ ಚಿತ್ರರಂಗದಲ್ಲಿ ಯಾರೋ ಹಬ್ಬಿಸಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಮೇಘನಾ ನಮ್ಮ ನಡುವೆ ಆ ರೀತಿ ಏನು ಇಲ್ಲ. ಆನ್ ಸ್ಕ್ರೀನ್ ನಮ್ಮಿಬ್ಬರ ಕೆಮಿಸ್ಟ್ರಿ ಚೆನ್ನಾಗಿದೆ ಎಂದ ಮಾತ್ರಕ್ಕೆ ನಿಜ ಜೀವನದಲ್ಲೂ ಪ್ರೇಮಿಗಳು ಎನ್ನಲೂ ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ಮಲೆಯಾಳಂ ಅಲ್ಲದೆ ಕನ್ನಡ, ತೆಲುಗು, ತಮಿಳು ಸೇರಿ 25ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿರು ಮೇಘನಾ ವೃತ್ತಿ ಜೀವನದ ಫ್ಲಾಶ್ ಬ್ಯಾಕ್ ಇಲ್ಲಿದೆ ನೋಡಿ

ಮದುವೆ ಬಗ್ಗೆ ಮೇಘನಾ

ಚಿತ್ರರಂಗದಲ್ಲಿರುವ ವ್ಯಕ್ತಿಯನ್ನು ಮದುವೆಯಾದರೆ ನನ್ನ ವೃತ್ತ್ತಿಗೂ ಅನುಕೂಲ ಇಬ್ಬರಿಗೂ ಫೀಲ್ಡ್ ಏನು ಎಂದು ತಿಳಿದಿರುತ್ತದೆ. ಚಿತ್ರರಂಗದಲ್ಲಿ ನಮ್ಮ ಏಳು ಬೀಳು ಹಾಗೂ ಸುಖ ದುಃಖ ಹಂಚಿಕೊಳ್ಳಲು ಸುಲಭವಾಗುತ್ತದೆ ಎಂದು ಮೇಘನಾ ಹೇಳಿದ್ದರು.

ಇತ್ತೀಚೆಗೆ 10 ಕೆ.ಜಿ ತೂಕ ಇಳಿಸಿಕೊಂಡಿರುವ ಮೇಘನಾ ಸದ್ಯಕ್ಕೆ ಮಲೆಯಾಳಂ ಚಿತ್ರರಂಗದಿಂದ ತಾತ್ಕಾಲಿಕ ಬ್ರೇಕ್ ತೆಗೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿಯಿದೆ. 2013ರಲ್ಲಿ ಯಶ್ ಜೊತೆ ರಾಜಾ ಹುಲಿ ಹಾಗೂ ಶ್ರೀನಗರ ಕಿಟ್ಟಿ ಜೊತೆ ಬಹುಪರಾಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಯಕ್ಷಿಯೂಮ್ ನ್ಯಾನೂಮ್

ಮಲೆಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಇದೇ ಚಿತ್ರದ ಮೂಲಕ, ಮೊದಲ ಪಾತ್ರವೇ ಭೂತದ ಪಾತ್ರವಾಗಿದ್ದು ವಿಶೇಷ, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಮೇಘನಾ ನಟನೆಗೆ ಒಳ್ಳೆ ಪ್ರಶಂಸೆ ಕೇಳಿ ಬಂದಿತು. ವಿನಯನ್ ಈ ಚಿತ್ರದ ನಿರ್ದೇಶಕರು.

ರಘುವಿಂಟೆ ಸ್ವತಂ ರಸಿಯಾ

ಹಿಂದೂ-ಮುಸ್ಲಿಂ ಯುವ ಪ್ರೇಮಿಗಳ ಕಥೆ ಹೊಂದಿರುವ ಈ ಚಿತ್ರದಲ್ಲಿ ಸ್ಪಟಿಕಂ ಜಾರ್ಜ್, ಮುರಳಿ ಕೃಷ್ಣನ್, ಮೇಘನಾ ರಾಜ್, ಚಾರು ಹಾಸನ್ ಹಾಗೂ ತಿಲಕನ್ ನಟಿಸಿದ್ದರು.

ಚಿತ್ರ: ಆಗಸ್ಟ್ 15

1988ರಲ್ಲಿ ತೆರೆ ಕಂಡ ಆಗಸ್ಟ್ 1 ಚಿತ್ರದ ಮುಂದುವರೆದ ಭಾಗವಾದ ಆಗಸ್ಟ್ 15ರಲ್ಲಿ ಸೈಬರ್ ಸೆಲ್ ಅಧಿಕಾರಿಯಾಗಿ ಮೇಘನಾ ರಾಜ್ ಅಭಿನಯಿಸಿದ್ದರು. ಸಿಬಿ ಮಲಯಿಲ್ ನಿರ್ದೇಶನದಲ್ಲಿ ಬಂದ ಈ ಚಿತ್ರಕ್ಕೆ ಎಸ್ ಎನ್ ಸ್ವಾಮಿ ಕಥೆ ಒದಗಿಸಿದ್ದರು. ಸೂಪರ್ ಸ್ಟಾರ್ ಮುಮ್ಮೂಟಿ ಜತೆ ಮೇಘನಾ ಮೊದಲ ಬಾರಿಗೆ ಕಾಣಿಸಿಕೊಂಡ ಚಿತ್ರವಿದು.

ಚಿತ್ರ: ಲಂಡನ್ ಡ್ರೀಮ್ಸ್

ದೀಪನ್ ಹಾಗೂ ಪದ್ಮ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅನೂಪ್ ಮೆನನ್, ನಿವಿನ್ ಪಾಲಿ ಹಾಗೂ ಆಸಿಫ್ ಅಲಿ ಜತೆ ಮೇಘನಾ ರಾಜ್ ನಟಿಸಿದ್ದಾರೆ.

ರೆಡ್ ವೈನ್

ಸ್ಟಾರ್ ನಟ ಮೋಹನ್ ಲಾಲ್, ಫಹದ್ ಫಜಿಲ್ ಹಾಗೂ ಆಸಿಫ್ ಅಲಿ ಜತೆ ಮೇಘನಾ ಅವರು RDO ಪಾತ್ರದಲಿ ಕಾಣಿಸಿಕೊಂಡಿದ್ದರು.

ಪಾಚುವಂ ಕೊವಲನುಮ್ (Paachuvum Kovalanum)

ಥಾಹ ನಿರ್ದೇಶನದ ಈ ಚಿತ್ರದಲ್ಲಿ ಮುಖೇಶ್, ಸೂರಜ್ ವಿ ಹಾಗೂ ಜೋತಿರ್ಮಯಿ ಜತೆ ಮೇಘನಾ ನಟಿಸಿದ್ದರು.

ಬ್ಯೂಟಿಫುಲ್

ಅನೂಪ್ ಮೆನನ್ ಚಿತ್ರಕಥೆ ಒದಗಿಸಿ ವಿಕೆ ಪ್ರಕಾಶ್ ನಿರ್ದೇಶಿಸಿದ ಬ್ಯೂಟಿಫುಲ್ ಚಿತ್ರದಲ್ಲಿ ಜಯಸೂರ್ಯ, ಅನೂಪ್ ಮೆನನ್ ಹಾಗೂ ಮೇಘನಾ ಮುಖ್ಯ ಭೂಮಿಕೆಯಲ್ಲಿದ್ದರು. ದೇಹ ನಿಷ್ಕ್ರಿಯಗೊಂಡ ಒಬ್ಬ ಗೆಳೆಯ ಮತ್ತೊಬ್ಬ ಸಂಗೀತಗಾರನ ಆಪ್ತ ಗೆಳತಿಯಾಗಿ ಮೇಘನಾ ಅದ್ಭುತ ಅಭಿನಯ ನೀಡಿದ್ದರು.

ಅಚ್ಚಾಂಟೆ ಆಣ್ಮಕ್ಕಳ್

ಚಂದ್ರಶೇಖರನ್ ನಿರ್ದೇಶನದ ಈ ಚಿತ್ರದಲ್ಲಿ ಶರತ್ ಕುಮಾರ್, ನೆಡುಮುಡಿ ವೇಣು ಜತೆ ಮೇಘನಾ ನಟಿಸಿದ್ದರು. ಇದೇ ಚಿತ್ರ ತಮಿಳಿನಲ್ಲಿ ನರಸಿಂಹನ್ ಐಪಿಎಸ್ ಎಂದು ಡಬ್ ಆಗಿತ್ತು.

ಮುಲ್ಲಮೊಟ್ಟುಂ ಮುಥಿರಿಚಾರುಂ

ಅನೀಶ್ ಅನ್ವರ್ ನಿರ್ದೇಶನದ ಈ ಚಿತ್ರದಲ್ಲಿ ಇಂದ್ರಜಿತ್ ಹಾಗೂ ಅನನ್ಯಾ ಜತೆ ಮೇಘನಾ ನಟಿಸಿದ್ದರು.

ನಮುಕ್ಕು ಪರ್ಕ್ಕಾನ್

ಅಜಿ ಜಾನ್ ನಿರ್ದೇಶನದ ಈ ಚಿತ್ರದಲ್ಲಿ ಅನೂಪ್ ಮೆನನ್ ಹಾಗೂ ಮೇಘನಾ ನಟಿಸಿದ್ದಾರೆ.

ಬ್ಯಾಂಕಿಂಗ್ ಅವರ್ಸ್ 10 ಟು 4

ಕೆ ಮಧು ನಿರ್ದೇಶನದ ಚಿತ್ರದಲ್ಲಿ ಮತ್ತೊಮ್ಮೆ ಅನೂಪ್ ಮೆನನ್ ಜತೆ ಮೇಘನಾ ಕಾಣಿಸಿಕೊಂಡಿದ್ದರು.

ಪಾಪಿನ್ಸ್

ವಿಕೆ ಪ್ರಕಾಶ್ ನಿರ್ದೇಶನದ ಪಾಪಿನ್ಸ್ ಚಿತ್ರದಲ್ಲಿ ಐದು ಜೋಡಿಗಳನ್ನು ಪರಿಚಯಿಸಲಾಯಿತು. ಮುಖ್ಯ ಪಾತ್ರದಲ್ಲಿ ಕುಂಚಾಕೊ ಬೊಬಾಬ್ ಹಾಗೂ ನಿತ್ಯಾ ಮೆನನ್ ಇದ್ದರು. ನಂತರ ಜಯಸೂರ್ಯ-ಮೇಘನಾ ರಾಜ್, ಇಂದ್ರಜಿತ್-ಪದ್ಮಪ್ರಿಯ, ಶಂಕರ್ ರಾಮಕೃಷ್ಣನ್-ಮೈಥಿಲಿ, ಸಿದ್ದಿಕಿ-ಆನ್ ಅಗಸ್ಟಿನ್ ನಟಿಸಿದ್ದರು.

ಗುಡ್ ಅಂಡ್ ಅಗ್ಲಿ

ವಿಆರ್ ರಥೀಶ್ ನಿರ್ದೇಶನದ ಚಿತ್ರದಲ್ಲಿ ಶ್ರೀಜಿತ್ ವಿಜಯ್, ಸೂರಜ್ ವೆಂಜರನ್ಮೂಡು ಹಾಗೂ ಇತರರರ ಜೊತೆ ಮೇಘನಾ ನಟಿಸಿದ್ದಾರೆ.

ಅಪ್ ಅಂಡ್ ಡೌನ್ ಮುಕಾಲಿಕ್ ಒರ್ಯಾಲುಂಡು

ಟಿಕೆ ರಾಜೀವ್ ಕುಮಾರ್ ನಿರ್ದೇಶನದ ಈಚಿತ್ರ ಅಪಾರ್ಟ್ಮೆಂಟ್ ಜೀವನವನ್ನು ತೆರೆದಿಟ್ಟಿದೆ. ಮೇಘನಾ ಜತೆಗೆ ರೆಮ್ಯಾ ನಂಬೀಸನ್, ಪ್ರತಾಪ್ ಪೊಥೆನ್, ಇಂದ್ರಜೀತ್ ಇತರರು ನಟಿಸಿದ್ದಾರೆ.

ಮೆಮೊರಿಸ್

ಜೀತು ಜೋಸೆಫ್ ನಿರ್ದೇಶನದ ಮೆಮೊರಿಸ್ ಚಿತ್ರದಲ್ಲಿ ಪೃಥ್ವಿರಾಜ್ ಜೋಡಿಯಾಗಿ ಮೇಘನಾ ನಟಿಸಿದ್ದಾರೆ.

English summary
Meghna Raj says that she is not dating Anoop Menon. They have acted together in a couple of films. Read to know more about their relationship. Meghna Raj has now taken a break from Malayalam industry and is now concentrating more on Sandalwood projects
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada