For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಸೂಪರ್ ಸ್ಟಾರ್ ನಟನ ಚಿತ್ರಕ್ಕೆ ಮೆಹ್ರೀನ್ ಪಿರ್ಝಾದಾ ನಾಯಕಿ?

  |

  ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಮಿಂಚುತ್ತಿರುವ ನಟಿ ಮೆಹ್ರೀನ್ ಪಿರ್ಝಾದಾ ಈಗ ಕನ್ನಡಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಚರ್ಚೆಯಾಗ್ತಿದೆ. ಟಾಲಿವುಡ್ ಸ್ಟಾರ್ ನಟರ ನೆಚ್ಚಿನ ನಾಯಕಿ ಎನಿಸಿಕೊಂಡಿರುವ ಮೆಹ್ರೀನ್ ಈಗ ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಜೊತೆ ಮೊದಲ ಕನ್ನಡ ಸಿನಿಮಾ ಮಾಡುವ ಸಾಧ್ಯತೆ ದಟ್ಟವಾಗಿದೆ.

  ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಮೆಹ್ರೀನ್ ಪಿರ್ಝಾದಾ ನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಈ ಚಿತ್ರವನ್ನು ರಾಮ್ ಧುಲಿಪುಡಿ ನಿರ್ದೇಶನ ಮಾಡ್ತಿದ್ದು, ಬಾಲಶ್ರೀರಾಮ್ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ. ಟಾಲಿವುಡ್ ಸುಂದರಿಯ ಕನ್ನಡ ಎಂಟ್ರಿ ಬಗ್ಗೆ ಮತ್ತಷ್ಟು ವಿವರ ತಿಳಿಯಲು ಮುಂದೆ ಓದಿ...

  ಶಿವಣ್ಣನ 124ನೇ ಚಿತ್ರ

  ಶಿವಣ್ಣನ 124ನೇ ಚಿತ್ರ

  ರಾಮ್ ಧುಲಿಪುಡಿ ನಿರ್ದೇಶನದಲ್ಲಿ ಬರಲಿರುವ 'ಪ್ರೊಡಕ್ಷನ್ ನಂ 1' ಇನ್ನು ಹೆಸರಿಡದ ಈ ಚಿತ್ರ ಶಿವರಾಜ್ ಕುಮಾರ್ 124ನೇ ಪ್ರಾಜೆಕ್ಟ್. ಲವ್ ಸ್ಟೋರಿ ಸುತ್ತ ಕಥೆ ಮಾಡಿದ್ದು, ಶಿವಣ್ಣ ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹ್ಯಾಟ್ರಿಕ್ ಹೀರೋ ಲವ್ ಸ್ಟೋರಿಗೆ ಮೆಹ್ರೀನ್ ನಾಯಕಿ ಎನ್ನುವುದು ಈಗಿನ ಸುದ್ದಿ.

  ಆರ್ಮಿ ಆಫೀಸರ್ ಪಾತ್ರದಲ್ಲಿ ಸೆಂಚುರಿಸ್ಟಾರ್

  ಆರ್ಮಿ ಆಫೀಸರ್ ಪಾತ್ರದಲ್ಲಿ ಸೆಂಚುರಿಸ್ಟಾರ್

  ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಆರ್ಮಿ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಆಗಸ್ಟ್‌ವೊತ್ತಿಗೆ ಚಿತ್ರೀಕರಣ ಶುರು ಮಾಡುವ ಯೋಜನೆ ಇದೆ. ಈ ನಡುವೆ 123ನೇ ಚಿತ್ರದ ಶೂಟಿಂಗ್ ಮುಗಿಸಲಿದ್ದಾರೆ. ಭಜರಂಗಿ 2 ತೆರೆಗೆ ಬರಲಿದೆ.

  ನಿಶ್ಚಿತಾರ್ಥ ಬ್ರೇಕ್ ಅಪ್

  ನಿಶ್ಚಿತಾರ್ಥ ಬ್ರೇಕ್ ಅಪ್

  ನಟಿ ಮೆಹ್ರೀನ್ ಇತ್ತೀಚಿಗಷ್ಟೆ ನಿಶ್ಚಿತಾರ್ಥ ಬ್ರೇಕ್ ಅಪ್ ಮಾಡಿಕೊಂಡಿದ್ದರು. ಮಾರ್ಚ್ 12 ರಂದು ಜೈಪುರದಲ್ಲಿ ನಟಿ ಮೆಹ್ರೀನ್ ಪಿರ್ಝಾದಾ ಮತ್ತು ಭವ್ಯ ಬಿಷ್ಣೋಯಿ (ಹರ್ಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಮೊಮ್ಮಗ) ಅವರ ನಿಶ್ಚಿತಾರ್ಥ ನಡೆದಿತ್ತು. ಇದಾದ ಮೂರು ತಿಂಗಳಲ್ಲಿ ಈ ಸಂಬಂಧ ಮುರಿದು ಬಿದ್ದಿದೆ.

  ಎಫ್‌2 ಚಿತ್ರದಲ್ಲಿ ಬ್ಯುಸಿ

  ಎಫ್‌2 ಚಿತ್ರದಲ್ಲಿ ಬ್ಯುಸಿ

  ಸದ್ಯ, ಮೆಹ್ರೀನ್ ಪಿರ್ಝಾದಾ 'ವಿಕ್ಟರಿ' ವೆಂಕಟೇಶ್ ಮತ್ತು ವರುಣ್ ತೇಜ ನಟಿಸುತ್ತಿರುವ 'ಎಫ್ 3' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಳಿಕ ಕರ್ನಾಟಕದ ಕಡೆ ಪ್ರಯಾಣ ಬೆಳೆಸಲಿದ್ದಾರೆ ಎಂದು ವರದಿಯಾಗಿದೆ.

  ಮೆಹ್ರೀನ್ ಸಿನಿಮಾಗಳು

  ಮೆಹ್ರೀನ್ ಸಿನಿಮಾಗಳು

  2016ರಲ್ಲಿ ಮೆಹ್ರೀನ್ ತೆಲುಗು ಇಂಡಸ್ಟ್ರಿ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. ತಮಿಳು ಹಾಗೂ ತೆಲುಗಿನಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡ್ತಿದ್ದಾರೆ. ಮಹಾನುಭಾವಡು, ರಾಜ ದಿ ಗ್ರೇಟ್, ನೋಟಾ, ಕವಚಂ, ಎಫ್ 2, ಪಟಾಸ್, ಅಶ್ವತ್ಥಾಮ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

  English summary
  Telugu Actress Mehreen Pirzada to Make Her Sandalwood Debut in Shivarajkumar's 124th Film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X