ಒಂದಾದ 'ದಿಯಾ' ಸಿನಿಮಾದ ಆದಿ ಮತ್ತು 'ಲವ್ ಮಾಕ್ಟೇಲ್' ನಿಧಿಮಾ

By ಫಿಲ್ಮ್ ಡೆಸ್ಕ್

ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಚಿತ್ರಪ್ರೇಕ್ಷಕರ ಮನಗೆದ್ದ ಸಿನಿಮಾಗಳೆಂದರೆ 'ದಿಯಾ' ಮತ್ತು 'ಲವ್ ಮಾಕ್ಟೇಲ್'. ಈ ಎರಡು ಸಿನಿಮಾಗಳು ಭರ್ಜರಿ ಸಕ್ಸಸ್ ಕಂಡಿವೆ. ಪ್ರಾರಂಭದಲ್ಲಿ ಚಿತ್ರಮಂದಿರಗಳು ಸಿಗದೆ ಪರದಾಡಿ, ಕೊನೆಗೂ ಚಿತ್ರಮಂದಿರಗಳನ್ನು ಹೆಚ್ಚಿಸಿಕೊಂಡು ಉತ್ತಮ ಪ್ರದರ್ಶನ ಕಾಣುತ್ತಿದ್ದ ಸಮಯದಲ್ಲಿ ಕೊರೊನಾ ವೈರಸ್ ನಿಂದ ಚಿತ್ರಮಂದಿರಗಳನ್ನೇ ಬಂದ್ ಮಾಡುವಂತೆ ಆಗಿದೆ. ಇದರಿಂದ ಉತ್ತಮ ಪ್ರದರ್ಶನ ಕಾಣುತ್ತಿದ್ದ ದಿಯಾ ಮತ್ತು ಲವ್ ಮಾಕ್ಟೇಲ್ ಸಿನಿಮಾಗಳ ಪ್ರದರ್ಶನ ನಿಲ್ಲಿಸಬೇಕಾಯಿತು.

ಲಾಕ್ ಡೌನ್ ಬಳಿಕ ಈ ಎರಡು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆದವು. ಆನ್ ಲೈನ್ ನಲ್ಲಿ ಈ ಎರಡು ಸಿನಿಮಾಗಳನ್ನು ಪ್ರೇಕ್ಷಕರು ಮುಗಿಬಿದ್ದು ನೋಡಿದ್ದಾರೆ. ಸಿನಿಮಾದ ಕಥೆ, ಹಾಡುಗಳ ಜೊತೆ ಚಿತ್ರದ ಪಾತ್ರಗಳು ನೋಡುಗರನ್ನು ಪದೆ ಪದೇ ಕಾಡುವಂತೆ ಮಾಡಿದೆ. ದಿಯಾ ಸಿನಿಮಾದ ಆದಿ, ದಿಯಾ ಮತ್ತು ಲವ್ ಮಾಕ್ಟೇಲ್ ಸಿನಿಮಾದಲ್ಲಿ ಆದಿ ಮತ್ತು ನಿಧಿಮಾ ಪಾತ್ರಗಳು ಇಂದಿಗೂ ಪ್ರೇಕ್ಷಕರನ್ನು ಕಾಡುತ್ತಿವೆ.

ದಿಯಾ ಸಿನಿಮಾದಲ್ಲಿ ನಾಯಕ ಆದಿ ಟ್ರೇನ್ ಹೊಡೆತಕ್ಕೆ ಸಿಲುಕಿ ದುರಂತ ಅಂತ್ಯ ಕಾಣುತ್ತಾನೆ. ಲವ್ ಮಾಕ್ಟೇಲ್ ಚಿತ್ರದಲ್ಲಿ ನಾಯಕಿ ನಿಧಿ ಕ್ಯಾನ್ಸರ್ ರೋಗದಿಂದ ಸಾಯುತ್ತಾಳೆ. ಈ ಎರಡು ಸಿನಿಮಾಗಳ ದುರಂತ ಅಂತ್ಯದಿಂದ ಪ್ರೇಕ್ಷಕರು ನೊಂದುಕೊಂಡಿದ್ದರು. ಬಳಿಕ ದಿಯಾ ಸಿನಿಮಾದ ದಿಯಾಳನ್ನು, ಲವ್ ಮಾಕ್ಟೇಲ್ ಸಿನಿಮಾದ ಆದಿ ಜೊತೆ ಮದುವೆ ಮಾಡಿಸಿದರೆ ಸರಿ ಆಗುತ್ತೆ ಎನ್ನುವ ಟ್ರೋಲ್ ಗಳು ಹರಿದಾಡುತ್ತಿದ್ದವು. ಇಬ್ಬರು ಸಿನಿಮಾ ಮಾಡಿದರೆ ಚೆನ್ನಾಗಿರುತ್ತೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು.

 Milana Nagaraj Playing Female Lead Opposite Pruthvi Ambar For New Film

ಆದರೀಗ ದುರಂತ ಅಂತ್ಯಕಂಡವರು ಒಂದಾಗುತ್ತಿದ್ದಾರೆ. ಲವ್ ಮಾಕ್ಟೇಲ್ ನ ನಿಧಿಮಾ ಮತ್ತು ದಿಯಾ ಸಿನಿಮಾ ಆದಿ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ನಟ ಪೃಥ್ವಿ 'ಫಾರ್ ರಿಜಿಸ್ಟ್ರೇಶನ್' ಎನ್ನುವ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಅನೌನ್ಸ್ ಆಗಿತ್ತು. ಆದರೆ ಚಿತ್ರದ ನಾಯಕಿ ಫಿಕ್ಸ್ ಆಗಿರಲಿಲ್ಲ. ಇದೀಗ ಚಿತ್ರಕ್ಕೆ ನಾಯಕಿ ಫಿಕ್ಸ್ ಆಗಿದ್ದಾರೆ. ಪೃಥ್ವಿಗೆ ನಾಯಕಿಯಾಗಿ ನಟಿ ಮಿಲನಾ ನಾಗರಾಜ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಹೇಳಿ ಬರುತ್ತಿದೆ.

ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ ನೆನ್ಸೇಷನ್ ಸೃಷ್ಟಿ ಮಾಡಿದ ಈ ಪಾತ್ರಗಳು ಒಂದೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ಅಂದ್ಮೇಲೆ ಪ್ರೇಕ್ಷಕರ ನಿರೀಕ್ಷೆ ದುಪ್ಪಟ್ಟಾಗಿದೆ. 'ಫಾರ್ ರಿಜಿಸ್ಟ್ರೇಶನ್' ರೊಮ್ಯಾಂಟಿಕ್ ಕಥಾಹಂದರವಿರುವ ಸಿನಿಮಾ. ಈ ಚಿತ್ರಕ್ಕೆ ನವೀನ್ ದ್ವಾರಕನಾಥ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಮೂಲಕ ಮೊದಲ ಬಾರಿಗೆ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಮಿಲನಾ ನಾಗರಾಜ್ ಸದ್ಯ 'ಲವ್ ಮಾಕ್ಟೇಲ್-2 'ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಪೃಥ್ವಿ ಸಹ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದಿಯಾ ಸಿನಿಮಾ ಬಳಿಕ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಪೃಥ್ವಿ ಸದ್ಯ 'ಶುಗರ್ ಲೆಸ್' ಮತ್ತು 'ಲೈಫ್ ಈಸ್ ಬ್ಯೂಟಿಫುಲ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Milana Nagaraj playing female lead opposite pruthvi ambar for new film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X