»   » ಮೋಹದ ಅಲೆ ವಿರುದ್ಧ ಪೊಲಿಸರಿಗೆ ದೂರು : ಪ್ರದರ್ಶನ ನಿಷೇಧ

ಮೋಹದ ಅಲೆ ವಿರುದ್ಧ ಪೊಲಿಸರಿಗೆ ದೂರು : ಪ್ರದರ್ಶನ ನಿಷೇಧ

Posted By:
Subscribe to Filmibeat Kannada

ಬೆಂಗಳೂರು : ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಪಟ್ಟಿಯಲ್ಲಿ ಸ್ಥಾನ ಪಡೆದು ಭಾರಿ ವಿವಾದಕ್ಕೆ ಕಾರಣವಾಗಿ, ಅಶ್ಲೀಲ ಚಿತ್ರ ಎಂಬ ಆಪಾದನೆಗೆ ಗುರಿಯಾಗಿರುವ ಮೋಹದ ಅಲೆ ಕನ್ನಡ ಚಿತ್ರ ಪ್ರದರ್ಶನಕ್ಕೆ ರಾಜ್ಯಸರಕಾರ ನಿಷೇಧ ಹೇರಿದೆ.

ರಾಜ್ಯದ ಎಲ್ಲೂ ಈ ಚಿತ್ರ ಪ್ರದರ್ಶನ ಆಗದಂತೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ತತ್ಸಂಬಂಧ ಬೆಂಗಳೂರು ಕೇಂದ್ರ ವಲಯ ಡಿ.ಸಿ.ಪಿ. ಅವರಿಗೆ ದೂರು ನೀಡಲಾಗಿದೆ. ಈ ವಿಷಯವನ್ನು ರಾಜ್ಯ ವಾರ್ತಾ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಖ್ಯಾತ ಚಿತ್ರತಾರೆ ಜಯಮಾಲಾ, ನಿರ್ದೇಶಕ ಬಾಬು ಸೇರಿದಂತೆ ಚಲನಚಿತ್ರ ರಂಗದ ಹಲವರು ಈ ಚಿತ್ರ ಪ್ರಶಸ್ತಿಗೆ ಪ್ರವೇಶ ಪಡೆದಿದ್ದನ್ನು ಖಂಡಿಸಿದ್ದ ಹಿನ್ನೆಲೆಯಲ್ಲಿ ವಿವರಣೆ ಕೋರಿ ಸ್ಥಳೀಯ ಚಲನಚಿತ್ರ ಮಾನ್ಯತಾ ಮಂಡಳಿಗೆ ರಾಜ್ಯ ಸರಕಾರ ಪತ್ರ ಬರೆದಿತ್ತು.

ಮಾನ್ಯತಾ ಪತ್ರ ಪಡೆದ ಚಲನಚಿತ್ರದ ಮೂಲ ಪ್ರತಿಯನ್ನು ಪ್ರದರ್ಶಿತವಾಗುತ್ತಿರುವ ಚಿತ್ರದ ಪ್ರತಿಯಾಂದಿಗೆ ತುಲನೆ ಮಾಡಿ ನೋಡಿದಾಗ ಮಾನ್ಯತೆ ಪಡೆದ ನಂತರ ಹಲವು ಅಶ್ಲೀಲ ದೃಶ್ಯಗಳನ್ನು ಸೇರಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕೇಂದ್ರ ಚಲನಚಿತ್ರ ಮಾನ್ಯತಾ ಮಂಡಳಿ ಅಧ್ಯಕ್ಷರಿಗೆ ಪತ್ರಬರೆಯಲಾಗಿದೆ ಎಂದೂ ಪ್ರೊ. ಬಿ.ಕೆ.ಸಿ. ತಿಳಿಸಿದರು.

ಭಾರತೀಯ ಸಂಸ್ಕೃತಿ, ಪರಂಪರೆಗೆ ಧಕ್ಕೆ ತರುವ ಹಾಗೂ ಯುವಕರನ್ನು ತಪ್ಪುದಾರಿಗೆ ಎಳೆವ ಇಂಥ ಅಶ್ಲೀಲ ಹಾಗೂ ಅಸಭ್ಯ ಚಿತ್ರಗಳ ಪ್ರದರ್ಶನಕ್ಕೆ ಕಡಿವಾಣ ಹಾಕಲು ರಾಜ್ಯ ಗೃಹ ಖಾತೆಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿಯೂ ಅವರು ಹೇಳಿದರು.

ವಾರ್ತಾಸಂಚಯ

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada