ಮೆಗಾಸ್ಟಾರ್ ಚಿರಂಜೀವಿ ಎದುರು ಮೋಹನ್ ಲಾಲ್ ಆರ್ಭಟ ? ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ

ಪ್ಯಾನ್ ಇಂಡಿಯಾ ಜಮಾನದಲ್ಲಿ ಅಸಾಧ್ಯ ಎನ್ನುವುದು ಸಾಧ್ಯವಾಗುತ್ತಿದೆ. ಸ್ಟಾರ್ ನಟರು ಒಟ್ಟಿಗೆ ತೆರೆ ಹಂಚಿಕೊಂಡು ಅಚ್ಚರಿ ಮೂಡಿಸುತ್ತಿದ್ದಾರೆ. ಇದೀಗ ಚಿರಂಜೀವಿ ಜೊತೆ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸುವ ಬಗ್ಗೆ ಊಹಾಪೋಹ ಶುರುವಾಗಿದೆ.

ತೆಲುಗು ಚಿತ್ರರಂಗದಲ್ಲಿ ಚಿರಂಜೀವಿ ಮೆಗಾಸ್ಟಾರ್. ಅದೇ ರೀತಿ ಮಲಯಾಳಂ ಚಿತ್ರದಲ್ಲಿ ಮೋಹನ್ ಲಾಲ್ ಮೆಗಾಸ್ಟಾರ್. ಇವರಿಬ್ಬರು ಒಂದೇ ಚಿತ್ರದಲ್ಲಿ ದರ್ಶನ ಕೊಟ್ಟರೆ ಸಿನಿರಸಿಕರಿಗೆ ಹಬ್ಬವೇ ಸರಿ. ಇಂತಾದೊಂದು ಚರ್ಚೆ ಫಿಲ್ಮ್ ನಗರ್‌ನಲ್ಲಿ ಶುರುವಾಗಿದೆ.

Mohanlal to Join Chiranjeevi in Mega 158 Pan-India Buzz Heats Up

ಚಿರಂಜೀವಿ ನಟನೆಯ 'ಮನ ಶಂಕರವರಪ್ರಸಾದ್ ದಾರು' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಅನಿಲ್ ರಾವಿಪುಡಿ ನಿರ್ದೇಶನದ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಅದೇ ರೀತಿ ಚಿರಂಜೀವಿ ಮುಂದಿನ ಚಿತ್ರದಲ್ಲಿ ಮೋಹನ್ ಲಾಲ್ ಅತಿಥಿ ಪಾತ್ರ ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ. ಇನ್ನು ಹೆಸರಿಡದ ಈ ಚಿತ್ರಕ್ಕೆ ಬಾಬಿ ಕೊಲ್ಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಬಾಬಿ ನಿರ್ದೇಶನದಲ್ಲಿ ಚಿರಂಜೀವಿ ನಟಿಸಿದ್ದ 'ವಾಲ್ತೇರು ವೀರಯ್ಯ' ಸಿನಿಮಾ ಎರಡು ವರ್ಷಗಳ ಹಿಂದೆ ಹಿಟ್ ಆಗಿತ್ತು. ಆ ಚಿತ್ರದಲ್ಲಿ ರವಿತೇಜಾ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಚಿರಂಜೀವಿ 158ನೇ ಚಿತ್ರಕ್ಕೆ ಮೋಹನ್ ಲಾಲ್ ಬಲ ತುಂಬುವ ಬಗ್ಗೆ ಚರ್ಚೆ ಶುರುವಾಗಿದೆ. ದಕ್ಷಿಣದ ಸಿನಿಮಾಗಳಲ್ಲಿ ಮಾತ್ರವಲ್ಲ ಬಾಲಿವುಡ್ ಸಿನಿಮಾಗಳಲ್ಲಿ ಕೂಡ ಮೋಹನ್ ಲಾಲ್ ನಟಿಸಿ ಬಂದಿದ್ದಾರೆ. ಕನ್ನಡ 'ಮೈತ್ರಿ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ತೆರೆಹಂಚಿಕೊಂಡಿದ್ದರು. ತೆಲುಗಿನ 'ಜನತಾ ಗ್ಯಾರೇಜ್' ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ಜೊತೆ ಅಬ್ಬರಿಸಿದ್ದರು.

Mohanlal to Join Chiranjeevi in Mega 158 Pan-India Buzz Heats Up

ಸದ್ಯ ಎರಡು ಬೇರೆ ಬೇರೆ ಚಿತ್ರರಂಗದ ಟಾಪ್ ನಟರಿಬ್ಬರು ಒಟ್ಟಿಗೆ ತೆರೆ ಹಂಚಿಕೊಂಡು ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ. 'ವಿಶ್ವಂಭರ' ಎಂಬ ಮತ್ತೊಂದು ಚಿತ್ರದಲ್ಲಿ ಕೂಡ ಚಿರಂಜೀವಿ ನಟಿಸುತ್ತಿದ್ದಾರೆ. ಚಿರು ನಟನೆಯ 158ನೇ ಚಿತ್ರವನ್ನು ಬಾಬಿ ಕಟ್ಟಿಕೊಡುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಟೈಟಲ್ ಫಿಕ್ಸ್ ಆಗಿಲ್ಲ. ಹಾಗಾಗಿ ಮೆಗಾ158 ಎಂದು ಚಿತ್ರವನ್ನು ಕರೆಯಲಾಗ್ತಿದೆ.

ಮೆಗಾ158 ಚಿತ್ರದಲ್ಲಿ ಮೋಹನ್ ಲಾಲ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಅತಿಥಿ ಪಾತ್ರ ಎನ್ನುವುದಕ್ಕಿಂತ ಮುಖ್ಯ ಪಾತ್ರ ಎಂದು ಹೇಳಲಾಗ್ತಿದೆ. ಈ ಸುದ್ದಿ ಕೇಳಿ ಮೆಗಾ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಯಾವಾಗ ಸಿನಿಮಾ ರಿಲೀಸ್ ಎಂದು ನಿರೀಕ್ಷೆಯಿಂದ ಕಾಯುವಂತಾಗಿದೆ. ಪ್ರಿಯಮಣಿ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡ್ತಿದೆ.

ಕೆವಿಎನ್ ಸಂಸ್ಥೆ ನಿರ್ಮಾಣದ ತಮಿಳಿನ 'ಜನ ನಾಯಗನ್' ಚಿತ್ರಕ್ಕೆ ಹಿನ್ನಡೆ ಆಗ್ತಿದೆ. ಸೆನ್ಸಾರ್ ಆಗದೇ ಸಿನಿಮಾ ರಿಲೀಸ್ ತಡವಾಗುತ್ತಿದೆ. ಇದೇ ಕಾರಣಕ್ಕೆ ಸಂಸ್ಥೆ ನಿರ್ಮಿಸುತ್ತಿರುವ 'ಟಾಕ್ಸಿಕ್', 'ಕೆಡಿ' ಹಾಗೂ 'ಮೆಗಾ 158' ಚಿತ್ರಗಳಿಗೂ ಸಮಸ್ಯೆ ಎದುರಾಗುವ ಊಹಾಪೋಹ ಶುರುವಾಗಿದೆ. ಶತಾಯ ಗತಾಯ 'ಜನ ನಾಯಗನ್' ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ.

ಕೃತಿ ಶೆಟ್ಟಿ ಮೆಗಾ 158 ಚಿತ್ರದಲ್ಲಿ ಚಿರಂಜೀವಿ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ನಿಮಿಷ್ ರವಿ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದಲ್ಲಿ ಐಶ್ವರ್ಯ ರೈ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಬಳಿಕ ಆ ಪಾತ್ರಕ್ಕೆ ಪ್ರಿಯಾಮಣಿ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ.

More from Filmibeat

Read more about: mohanlal chiranjeevi tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X