ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್..; 'ಮಾರ್ಕೊ' ಸೀಕ್ವೆಲ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್?

ಮಾಲಿವುಡ್ ಸೂಪರ್ ಹಿಟ್ 'ಮಾರ್ಕೊ' ಸಿನಿಮಾ ಸೀಕ್ವೆಲ್ ಬರೋದು ಪಕ್ಕಾ ಆಗಿದೆ. ಟೈಟಲ್ ಕೂಡ ಫಿಕ್ಸ್ ಆಗಿದೆ. ಆದರೆ ಹೀರೊ ಆಗಿ ಉನ್ನಿ ಮುಕುಂದನ್ ನಟಿಸಲ್ಲ ಎನ್ನಲಾಗ್ತಿದೆ. ಅವರ ಬದಲು ಯಶ್ ಅಥವಾ ಮಮ್ಮುಟ್ಟಿ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.

ಕಳೆದ ವರ್ಷ ತೆರೆಗಪ್ಪಳಿಸಿದ್ದ ಆಕ್ಷನ್ ಥ್ರಿಲ್ಲರ್ 'ಮಾರ್ಕೊ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಆದರೆ ಚಿತ್ರದಲ್ಲಿ ಕ್ರೌರ್ಯದ ದೃಶ್ಯಗಳ ನೋಡುಗರನ್ನು ಬೆಚ್ಚಿ ಬೀಳಿಸುವಂತಿತ್ತು. ಕೆಲವರು 'ಕೆಜಿಎಫ್' ಚಿತ್ರದ ವೈಲೆನ್ಸ್‌ಗಿಂತ ಹೆಚ್ಚು ವೈಲೆನ್ಸ್ ಇದೆ ಎಂದು ಕಾಮೆಂಟ್ ಮಾಡಿದ್ದರು. ಸೆನ್ಸಾರ್ ಮಂಡಳಿ ಬಗ್ಗೆಯೂ ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಇಷ್ಟು ಹಿಂಸಾತ್ಮಕ ದೃಶ್ಯಗಳನ್ನು ಸೆನ್ಸಾರ್ ಮಂಡಳಿ ಯಾಕೆ ತೆಗೆಯಲು ಹೇಳಲಿಲ್ಲ ಎಂದಿದ್ದರು.

Mollywood Buzz Will Yash or Mammootty Lead the Lord Marco Sequel Instead of Unni Mukundan

ಅಂದಾಜು 30 ಕೋಟಿ ರೂ. ಬಜೆಟ್ 'ಮಾರ್ಕೊ' ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಉನ್ನಿ ಮುಕುಂದರ್ ಕರಿಯರ್ ಬೆಸ್ಟ್ ಸಿನಿಮಾ ಎನಿಸಿಕೊಂಡಿತ್ತು. ಇದೀಗ 'ಲಾರ್ಡ್ ಮಾರ್ಕೊ' ಎಂಬ ಟೈಟಲ್ ರಿಜಿಸ್ಟರ್ ಆಗಿದ್ದು ಸೀಕ್ವೆಲ್ ಬರೋದು ಖಚಿತವಾಗಿದೆ. ಅನೀಫ್ ಅದೆನಿ ಈ ಚಿತ್ರಕ್ಕೆ ಕೂಡ ಆಕ್ಷನ್ ಕಟ್ ಹೇಳುವುದು ಪಕ್ಕಾ ಆಗಿದೆ. ಕ್ಯೂಬ್ಸ್ ಎಂಟರ್ಟೆನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಶರೀಫ್ ಮುಹಮ್ಮದ್ ಕೇರಳ ಫಿಲ್ಮ್ ಚೇಂಬರ್‌ನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ.

ಟೈಟಲ್ ರಿಜಿಸ್ಟರ್ ಮಾಡಿಸಿರುವ ಸ್ಕ್ರೀನ್‌ ಶಾಟ್ ವೈರಲ್ ಆಗ್ತಿದೆ. ಅದರಲ್ಲಿ ಚಿತ್ರದ ನಾಯಕ ಯಶ್ ಎಂದು ಕೆಲವರು ಎಡಿಟ್ ಮಾಡಿ ತೇಲಿ ಬಿಡುತ್ತಿದ್ದಾರೆ. ಸದ್ಯ ಯಶ್ 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದು ಬಿಟ್ಟು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಈ ಹಿಂದೆ ಸ್ವತಃ ಯಶ್ ಒಂದು ಮಾತು ಹೇಳಿದ್ದರು. ನಾನು ಯಾವುದೇ ಚಿತ್ರದಲ್ಲಿ ನಟಿಸುವಂತಿದ್ದರೆ ನಾನೇ ಆ ಬಗ್ಗೆ ಮಾಹಿತಿ ನೀಡುತ್ತೇನೆ. ಸುಖಾ ಸುಮ್ಮನೆ ಯಾವುದೇ ಊಹಾಪೋಹಗಳಿಕೆ ಕಿವಿಗೊಡಬೇಡಿ ಎಂದಿದ್ದರು.

ಇನ್ನು ಇದ್ದಕ್ಕಿಂದಂತೆ 'ಮಾರ್ಕೊ' ಚಿತ್ರದ ನಿರ್ಮಾಪಕ ಶರೀಫ್ ಮುಹಮ್ಮದ್, ಚಿತ್ರ ನಿರ್ಮಿಸಿದ್ದ ಕ್ಯೂಬ್ಸ್ ಎಂಟರ್ಟೆನ್ಮೆಂಟ್ಸ್ ಸಂಸ್ಥೆಯ ಇನ್‌ಸ್ಟಾಗ್ರಾಮ್ ಅಫೀಷಿಯಲ್ ಪೇಜ್‌ಗಳಲ್ಲಿ ಯಶ್ ಇನ್‌ಸ್ಟಾ ಖಾತೆಯಗಳನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. 'ಮಾರ್ಕೊ' ಚಿತ್ರದ ಇನ್‌ಸ್ಟಾಗ್ರಾಮ್ ಅಕೌಂಟ್‌ನಿಂದಲೂ ಯಶ್ ಇನ್‌ಸ್ಟಾಗ್ರಾಮ್ ಖಾತೆಯನ್ನು ಫಾಲೋ ಮಾಡುತ್ತಿರುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಇದನ್ನೆಲ್ಲಾ ನೋಡಿ 'ಲಾರ್ಡ್ ಮಾರ್ಕೊ' ಚಿತ್ರದಲ್ಲಿ ಯಶ್ ನಟಿಸೋದು ಪಕ್ಕಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಯಶ್ ಹೀರೊ ಆಗಿ ನಟಿಸದೇ ಇದ್ದರೂ ಒಂದು ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. 'ಟಾಕ್ಸಿಕ್' ಚಿತ್ರದ ಕೊನೆ ಹಂತದ ಚಿತ್ರೀಕರಣದಲ್ಲಿ ಯಶ್ ತೊಡಗಿಸಿಕೊಂಡಿದ್ದಾರೆ. ಮುಂಬೈನಲ್ಲಿ ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಸೆರೆ ಹಿಡಿಯಲಾಗುತ್ತಿದೆ. ಮಾರ್ಚ್ 19ಕ್ಕೆ ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗಪ್ಪಳಿಸಲಿದೆ. ಇನ್ನು 'ರಾಮಾಯಣ' ಚಿತ್ರದ ಮೊದಲ ಭಾಗದಲ್ಲಿ ತಮ್ಮ ದೃಶ್ಯಗಳನ್ನು ಯಶ್ ಪೂರ್ಣಗೊಳಿಸಿದ್ದಾರೆ. ಮುಂದಿನ ವರ್ಷ ದೀಪಾವಳಿಗೆ ಸಿನಿಮಾ ತೆರೆಗೆ ಬರಲಿದೆ.

ಟಾಕ್ಸಿಕ್ ಹಾಗೂ ರಾಮಾಯಣ ಚಿತ್ರಗಳಲ್ಲಿ ಯಶ್ ನಟಿಸುವುದು ಮಾತ್ರವಲ್ಲ, ಸಹ ನಿರ್ಮಾಪಕರು ಆಗಿದ್ದಾರೆ. ಮುಂದಿನ ವರ್ಷ ಎರಡೂ ಸಿನಿಮಾಗಳು ತೆರೆಗೆ ಬರಲಿವೆ. ಯಶ್ ನಟಿಸಿದ ಸಿನಿಮಾ ಬಿಡುಗಡೆಯಾಗಿ 3 ವರ್ಷ ಆಗಿದೆ. ಅಭಿಮಾನಿಗಳು ಮುಂದಿನ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಆದರೆ ಒಂದೇ ವರ್ಷದಲ್ಲಿ ಡಬಲ್ ಧಮಾಕಾ ಕೊಡಲು ಯಶ್ ತಯಾರಿ ನಡೆಸಿದ್ದಾರೆ.

More from Filmibeat

English summary
‘Lord Marco’ Sequel Rumors: Unni Mukundan Out, Yash or Mammootty In?
Read more about: yash malayalam mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X