»   » ಇಂದಿರಾಗಾಂಧೀ ಸೊಸೆ ಕುರಿತ ಚಿತ್ರ ಬಿಡುಗಡೆಗೆ ಸಿದ್ಧ

ಇಂದಿರಾಗಾಂಧೀ ಸೊಸೆ ಕುರಿತ ಚಿತ್ರ ಬಿಡುಗಡೆಗೆ ಸಿದ್ಧ

Subscribe to Filmibeat Kannada

ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಜೀವನ ಆಧರಿಸಿ ನಿರ್ಮಿಸಲಾಗಿರುವ ಹಿಂದಿ ಚಿತ್ರ 'ಸೋನಿಯಾ-ಸೋನಿಯಾ' ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಕೆಲ ದೃಶ್ಯಗಳಿಗೆ ಕತ್ತರಿ ಹಾಕಿರುವ ಸೆನ್ಸಾರ್ ಮಂಡಳಿಯೂ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಈ ಮೂಲಕ ಸುಮಾರು ಮೂರು ವರ್ಷಗಳ ಕಾಲ ಕಾನೂನು ಸಮರ ನಡೆಸಿದ ಚಿತ್ರದ ನಿರ್ಮಾಪಕ ದಿನೇಶ್ ಕುಮಾರ್ ಠಾಕೂರ್ ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ.

ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿಯು ಚಿತ್ರದ ಮೇಲಿದ್ದ ನಿಷೇಧವನ್ನು ಹಿಂತೆಗೆದುಕೊಂಡಿದ್ದು, ಕಾಂಗ್ರೆಸ್ ನಾಯಕಿ ಸೋನಿಯಾ ಅವರಿಂದ ತಕರಾರು ರಹಿತ ಪ್ರಮಾಣಪತ್ರ ಸಲ್ಲಿಸುವಂತೆ ಚಿತ್ರ ನಿರ್ಮಾಪಕರಿಗೆ ಹೇಳಿದ್ದ ಕಾರಣ ಸಮಸ್ಯೆ ಇಷ್ಟೊಂದು ಜಟಿಲವಾಗಿತ್ತು. ಸೆನ್ಸಾರ್ ಮಂಡಳಿಯು ಈಗಾಗಲೇ ಚಿತ್ರಕ್ಕೆ 'ಯು' ಪ್ರಮಾಣ ಪತ್ರ ನೀಡಿದೆ. ಚಿತ್ರವನ್ನು ಮಾಜಿ ಪ್ರಧಾನಮಂತ್ರಿ ಜವಾಹರ್ ಲಾಲ್ ಅವರ ಹುಟ್ಟುಹಬ್ಬದ ದಿನವಾದ ನವೆಂಬರ್ 14 ರಂದು ಚಿತ್ರ ಬಿಡುಗಡೆಯಾಗುವುದು ಎಂದು ದಿನೇಶ್ ಕುಮಾರ್ ತಿಳಿಸಿದ್ದರು.

ಕಳೆದ 2005ರಲ್ಲಿ ಸೆನ್ಸಾರ್ ಮಂಡಳಿಯ ಮುಂದೆ ಚಿತ್ರ ಬಂದಿತು. ಆದರೆ ಎಐಸಿಸಿ ಅಧ್ಯಕ್ಷರು ಸೋನಿಯಾ ಗಾಂಧಿ ಅವರಿಂದ ತಕರಾರು ರಹಿತ ಪ್ರಮಾಣಪತ್ರವನ್ನು ಮಂಡಳಿಗೆ ಸಲ್ಲಿಸಬೇಕು ಎಂದು ಮಂಡಳಿಯ ಅಧಿಕಾರಿಗಳು ಸೂಚಿಸಿದ್ದರು. ಆದರೆ ಮಂಡಳಿಯ ಕ್ರಮವನ್ನು ಖಂಡಿಸಿದ ದಿನೇಶ್ ಕುಮಾರ್ ಮುಂಬೈ ಹೈಕೋರ್ಟ್ ನಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯ ಮಂಡಳಿ ಚಿತ್ರ ಬಿಡುಗಡೆಗೆ ಪೂರ್ವ ಷರತ್ತು ಕೇಳುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಚಿತ್ರ ಬಿಡುಗಡೆ ಅನುವು ಮಾಡಿಕೊಡಬೇಕು ಎಂದು ಸೆನ್ಸಾರ್ ಮಂಡಳಿಗೆ ಆದೇಶ ನೀಡಿದೆ. ನ್ಯಾಯಾಲಯದ ತೀರ್ಪಿನಿಂದ ಸಂತಸ ವ್ಯಕ್ತಪಡಿಸಿದ ದಿನೇಶ್ ಕುಮಾರ್ ಕಳೆದ ಮೂರು ವರ್ಷಗಳಲ್ಲಿ ಅಪಾರ ಪ್ರಮಾಣದ ಹಣವನ್ನು ಕಳೆದುಕೊಂಡಿದ್ದೆ, ಇದೀಗ ನ್ಯಾಯಾಲಯ ಚಿತ್ರ ಬಿಡುಗಡೆಗೆ ಅವಕಾಶ ನೀಡಿರುವುದು ಸಂತಸವಾಗಿದೆ ಎಂದು ಅವರು ಹೇಳಿದರು.

(ದಟ್ಸ್ ಕನ್ನಡಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada