For Quick Alerts
  ALLOW NOTIFICATIONS  
  For Daily Alerts

  ನಭಾ ನಟೇಶ್ ಸಂಭಾವನೆ ಕೇಳಿ ನಿರ್ಮಾಪಕರು ಶಾಕ್: 'ಪಟಾಕ' ಬಗ್ಗೆ ಟಾಲಿವುಡ್ ನಲ್ಲಿ ಟೀಕೆ.!

  |

  ನಭಾ ನಟೇಶ್ ಅಂತ ಹೆಸರು ಕೇಳಿದ ಕೂಡಲೆ ಕನ್ನಡ ಸಿನಿ ಪ್ರಿಯರಿಗೆ ತಕ್ಷಣ ನೆನಪಾಗುವುದು 'ವಜ್ರಕಾಯ' ಸಿನಿಮಾ. 2015 ರಲ್ಲಿ ತೆರೆಕಂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ವಜ್ರಕಾಯ' ಚಿತ್ರದಲ್ಲಿ ಪಟಾಕ ಪಾರ್ವತಿಯಾಗಿ ಮಿಂಚಿದವರು ಇದೇ ನಭಾ ನಟೇಶ್.

  'ವಜ್ರಕಾಯ' ಆದ್ಮೇಲೆ ಸ್ಯಾಂಡಲ್ ವುಡ್ ನಲ್ಲಿ 'ಲೀ' ಚಿತ್ರ ಮಾಡಿದ ನಭಾ ಬಳಿಕ ತೆಲುಗು ಸಿನಿ ಅಂಗಳದ ಕಡೆ ಮುಖ ಮಾಡಿದರು. ಟಾಲಿವುಡ್ ನಲ್ಲಿ 'ನನ್ನು ದೋಚುಕುಂಡುವಟೆ' ಮತ್ತು 'ಇಸ್ಮಾರ್ಟ್ ಶಂಕರ್' ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ನಟಿ ನಭಾ ನಟೇಶ್ ರನ್ನ ಹುಡುಕಿಕೊಂಡು ಬಂತು.

  ಅದೃಷ್ಟಕ್ಕೆ 'ನನ್ನು ದೋಚುಕುಂಡುವಟೆ' ಮತ್ತು 'ಇಸ್ಮಾರ್ಟ್ ಶಂಕರ್' ಹಿಟ್ ಆಯ್ತು. ನಭಾ ನಟೇಶ್ ಗೆ ಡಿಮ್ಯಾಂಡ್ ಜಾಸ್ತಿ ಆಯ್ತು. ನಭಾ ನಟೇಶ್ ಸದ್ಯ ಮಾಸ್ ಮಹಾರಾಜ ರವಿ ತೇಜಾ ಜೊತೆಗೆ 'ಡಿಸ್ಕೋ ರಾಜಾ' ಚಿತ್ರದಲ್ಲಿ ನಟಿಸಿದ್ದಾರೆ. 'ಡಿಸ್ಕೋ ರಾಜಾ' ಬಗ್ಗೆ ಹೆಚ್ಚು ಟಾಕ್ ಇರುವ ಕಾರಣ ತನ್ನ ಸಂಭಾವನೆಯನ್ನ ನಭಾ ನಟೇಶ್ ಹೈಕ್ ಮಾಡಿಕೊಂಡಿದ್ದಾರಂತೆ.

  ನಭಾ ನಟೇಶ್ ಸಂಭಾವನೆಯನ್ನ ಕೇಳಿ ಟಾಲಿವುಡ್ ನಿರ್ಮಾಪಕರು ಅಕ್ಷರಶಃ ಶಾಕ್ ಆಗಿದ್ದಾರೆ. ಮುಂದೆ ಓದಿರಿ...

  ನಭಾ ನಟೇಶ್ ಡಿಮ್ಯಾಂಡ್ ಮಾಡುತ್ತಿರುವ ಸಂಭಾವನೆ ಎಷ್ಟು.?

  ನಭಾ ನಟೇಶ್ ಡಿಮ್ಯಾಂಡ್ ಮಾಡುತ್ತಿರುವ ಸಂಭಾವನೆ ಎಷ್ಟು.?

  ಚಿತ್ರವೊಂದರಲ್ಲಿ ನಟಿಸಲು ನಟಿ ನಭಾ ನಟೇಶ್ ನಿರ್ಮಾಪಕರ ಮುಂದೆ ಬರೋಬ್ಬರಿ 80 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರಂತೆ. ಹಾಗಂತ ತೆಲುಗು ಸಿನಿ ಅಂಗಳದಲ್ಲಿ ಗುಲ್ಲೋ ಗುಲ್ಲು.!

  ಮಂಚು ಮನೋಜ್ ಚಿತ್ರಕ್ಕೆ ಕನ್ನಡತಿ ನಭಾ ನಟೇಶ್ ಹೀರೋಯಿನ್ಮಂಚು ಮನೋಜ್ ಚಿತ್ರಕ್ಕೆ ಕನ್ನಡತಿ ನಭಾ ನಟೇಶ್ ಹೀರೋಯಿನ್

  ನಿರ್ಮಾಪಕರು ಶಾಕ್.!

  ನಿರ್ಮಾಪಕರು ಶಾಕ್.!

  ಟಾಲಿವುಡ್ ನಲ್ಲಿ ನಭಾ ನಟೇಶ್ ನಟಿಸಿರುವುದು ಕೇವಲ ಎರಡ್ಮೂರು ಚಿತ್ರಗಳು. ಒಂದೆರಡು ಹಿಟ್ ಕೊಡುತ್ತಿದ್ದಂತೆಯೇ ನಭಾ ನಟೇಶ್ ತಮ್ಮ ಸಂಭಾವನೆಯನ್ನ ಹೈಕ್ ಮಾಡಿಕೊಂಡುಬಿಟ್ಟಿದ್ದಾರೆ. ನಭಾ ನಟೇಶ್ ಡಿಮ್ಯಾಂಡ್ ಮಾಡ್ತಿರೋ ಸಂಭಾವನೆಯನ್ನ ಕೇಳಿದ ಕೂಡಲೆ ನಿರ್ಮಾಪಕರು ಶಾಕ್ ಆಗಿದ್ದಾರಂತೆ.

  ದುಬಾರಿ ಕಾರು ಖರೀದಿಸಿದ 'ಪಟಾಕ' ನಭಾ ನಟೇಶ್ದುಬಾರಿ ಕಾರು ಖರೀದಿಸಿದ 'ಪಟಾಕ' ನಭಾ ನಟೇಶ್

  ಯುವ ನಟರೊಂದಿಗೆ ಅಭಿನಯಿಸಲ್ಲ.!

  ಯುವ ನಟರೊಂದಿಗೆ ಅಭಿನಯಿಸಲ್ಲ.!

  ಹೆಚ್ಚು ಸಂಭಾವನೆ ಕೇಳ್ತಿರೋ ನಭಾ ನಟೇಶ್ ಇನ್ಮುಂದೆ ಯುವ ನಟ ಜೊತೆಗೆ ತೆರೆಹಂಚಿಕೊಳ್ಳುವುದಿಲ್ಲವಂತೆ. ಯುವ ನಟರ ಸಿನಿಮಾಗಳಿಗಾಗಿ ಬುಲಾವ್ ನೀಡಿದರೆ 'ಒಲ್ಲೆ' ಅಂತಿದ್ದಾರಂತೆ ನಭಾ ನಟೇಶ್. ಸ್ಟಾರ್ ನಟ ಚಿತ್ರಗಳಿಗೆ ಮಾತ್ರ ಕಾಲ್ ಶೀಟ್ ಕೊಡ್ತಾರಂತೆ ನಭಾ ನಟೇಶ್.

  ಟಾಲಿವುಡ್ ನಲ್ಲಿ ಟೀಕೆ.!

  ಟಾಲಿವುಡ್ ನಲ್ಲಿ ಟೀಕೆ.!

  ಈ ಡಿಮ್ಯಾಂಡ್ ಗಳಿಂದಾಗಿ ಟಾಲಿವುಡ್ ನಲ್ಲಿ ನಭಾ ನಟೇಶ್ ಟೀಕೆಗೆ ಗುರಿಯಾಗಿದ್ದಾರೆ. ಯಾರು ಏನೇ ಟೀಕಿಸಿದರೂ, 'ಡಿಸ್ಕೋ ರಾಜಾ' ಚಿತ್ರದ ಬಗ್ಗೆ ನಭಾ ನಟೇಶ್ ಗೆ ನಂಬಿಕೆ ಇದೆ. 'ಡಿಸ್ಕೋ ರಾಜಾ' ಹಿಟ್ ಆದರೆ ನಭಾ ನಟೇಶ್ ಗೆ ಹೆಚ್ಚು ಸಂಭಾವನೆ ಮತ್ತು ಸ್ಟಾರ್ ಹೀರೋ ಚಿತ್ರಗಳ ಆಫರ್ ಗಳೇ ಸಿಕ್ಕರೂ ಆಶ್ಚರ್ಯ ಇಲ್ಲ.!

  English summary
  According to the latest Grapevine, Actress Nabha Natesh is demanding Rs.80 Lakh fee for film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X