ಅಮೀರ್ ಖಾನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ತೆಲುಗಿನ ಯುವ ನಟ
ನಟ ಅಮೀರ್ ಖಾನ್ ಜೊತೆಗೆ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳಲು ಹಲವಾರು ನಟ-ನಟಿಯರು ಕಾಯುತ್ತಿದ್ದಾರೆ. ಆದರೆ ತೆಲುಗಿನ ಯುವನಟ ಒಬ್ಬರಿಗೆ ಅವಕಾಶ ತಾನೇ ಅರಸಿ ಬಂದಿದೆ.
ಅಮೀರ್ ಖಾನ್ ನಟಿಸುತ್ತಿರುವ 'ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ತೆಲುಗು ಯುವನಟನೋರ್ವ ಅಮೀರ್ ಖಾನ್‌ರ ಆಪ್ತ ಗೆಳೆಯನ ಪಾತ್ರದಲ್ಲಿ ನಟಿಸಲಿದ್ದಾರೆ. 'ಸಾಧಾರಣ ನಟನಾ ಪ್ರತಿಭೆ' ಉಳ್ಳ ಈ ತೆಲುಗು ನಟನಿಗೆ ಈ ದೊಡ್ಡ ಅವಕಾಶ ಸಿಕ್ಕಿದ್ದಾದರೂ ಹೇಗೆ ಎಂದು ಹಲವರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಅಮೀರ್ ಖಾನ್ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿರುವ ನಟ ತೆಲುಗಿನ ನಾಗ ಚೈತನ್ಯ. ನಾಗಾರ್ಜುನ ಪುತ್ರ, ಸಮಂತಾ ಪತಿ ನಾಗ ಚೈತನ್ಯ ಅವರು ಲಾಲ್ ಸಿಂಗ್ ಛಡ್ಡಾ ಸಿನಿಮಾದಲ್ಲಿ ಅಮೀರ್ ಖಾನ್‌ರ ದಕ್ಷಿಣ ಭಾರತದ ಗೆಳೆಯನ ಪಾತ್ರದಲ್ಲಿ ನಟಿಸಲಿದ್ದಾರೆ.

ನಾಗ ಚೈತನ್ಯ ಅವರು ಈಗ ಆಯ್ಕೆ ಆಗಿರುವ ಪಾತ್ರಕ್ಕೆ ಈ ಮೊದಲು ವಿಜಯ್ ಸೇತುಪತಿ ಅನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ವಿಜಯ್ ಸೇತುಪತಿ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಅದೇ ಪಾತ್ರ ಈಗ ನಾಗ ಚೈತನ್ಯ ಪಾಲಾಗಿದೆ.
'ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ನಾಗ ಚೈತನ್ಯ ಅಮಿರ್ ಖಾನ್ ಆಪ್ತಮಿತ್ರನ ಪಾತ್ರ ನಿರ್ವಹಿಸಲಿದ್ದಾರೆ. ಇಬ್ಬರೂ ಸೈನ್ಯದಲ್ಲಿ ಸ್ನೇಹಿತರಾಗಿ ಒಟ್ಟಿಗೆ ಶತ್ರುಗಳ ವಿರುದ್ಧ ಹೋರಾಡುವ ದೃಶ್ಯಗಳಿವೆ.
'ಲಾಲ್ ಸಿಂಗ್ ಛಡ್ಡಾ' ಸಿನಿಮಾವು 'ಫಾರೆಸ್ಟ್ ಗಂಪ್' ಕಾದಂಬರಿ ಆಧರಿತ ಸಿನಿಮಾ ಆಗಿದ್ದು. ಅದೇ ಹೆಸರಿನಲ್ಲಿ ಇಂಗ್ಲಿಷ್ ನಲ್ಲಿ ಸಿನಿಮಾ ಮಾಡಲಾಗಿದೆ.


Click it and Unblock the Notifications











