Naga Chaitanya 2nd Marriage : ವಿಚ್ಛೇಧನವಾಗಿ ವರ್ಷ ಕಳೆವ ಮುನ್ನವೇ ಮತ್ತೆ ಮದುವೆಯತ್ತ ನಾಗಚೈತನ್ಯ ಚಿತ್ತ!

ನಟಿ ಸಮಂತಾ ಹಾಗೂ ನಾಗ ಚೈತನ್ಯ ನಡುವೆ ವಿಚ್ಛೇಧನ ದೇಶದಾದ್ಯಂತ ದೊಡ್ಡದಾಗಿಯೇ ಸುದ್ದಿಯಾಯಿತು. ಸುಮಾರು ಹತ್ತು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ವರ್ಷ ಬೇರಾಯಿತು.

2011 ರಿಂದಲೂ ಪ್ರೀತಿಸುತ್ತಿದ್ದ ಸಮಂತಾ ಹಾಗೂ ನಾಗ ಚೈತನ್ಯ 2017 ರಲ್ಲಿ ವಿವಾಹವಾದರು. ಮದುವೆಯಾದ ಐದು ವರ್ಷಗಳ ಬಳಿಕ 2021 ರ ಅಕ್ಟೋಬರ್ ತಿಂಗಳಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇಧನ ಪಡೆದು ದೂರಾದರು.

ಇವರಿಬ್ಬರ ವಿವಾಹ ಭಾರಿ ಸದ್ದು ಮಾಡಿತು. ವಿಚ್ಛೇಧನಕ್ಕೆ ಸಮಂತಾನೆ ಕಾರಣವೆಂದು ಸಾಮಾಜಿಕ ಜಾಲತಾಣದಲ್ಲಿ ಸತತ ಆರೋಪಗಳನ್ನು ಮಾಡಲಾಯ್ತು. ಆದರೆ ಯಾವುದಕ್ಕೂ ಪ್ರತಿಕ್ರಿಯಿಸದ ಸಮಂತಾ ತಮ್ಮ ವೃತ್ತಿ ಜೀವನದ ಕಡೆಗಷ್ಟೆ ಗಮನ ನೀಡಿದರು. ನಾಗ ಚೈತನ್ಯ ಸಹ ತಮ್ಮ ವಿಚ್ಛೇಧನದ ಬಗ್ಗೆ ಹೊರಗೆಲ್ಲೂ ಹೇಳಿಕೆ ನೀಡಲಿಲ್ಲ.

ನಟಿಯೊಂದಿಗೆ ಡೇಟಿಂಗ್‌ನಲ್ಲಿ ನಾಗ

ನಟಿಯೊಂದಿಗೆ ಡೇಟಿಂಗ್‌ನಲ್ಲಿ ನಾಗ

ಆದರೆ ಇದೀಗ ಹೊರಬಿದ್ದಿರುವ ಸುದ್ದಿಗಳ ಪ್ರಕಾರ ನಟ ನಾಗಚೈತನ್ಯ ಮದುವೆ ಆಗಲು ನಿಶ್ಚಯಿಸಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಮೊದಲ ವಿವಾಹದಂತೆ ಈ ಬಾರಿಯೂ ಸಹ ನಟಿಯನ್ನೇ ವಿವಾಹವಾಗಲು ನಾಗ ಚೈತನ್ಯ ಸಿದ್ಧವಾಗಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಈ ಸುದ್ದಿ ಅಧಿಕೃತಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಈ ಇಬ್ಬರ ವಿವಾಹಕ್ಕೆ ನಾಗ ಚೈತನ್ಯ ತಂದೆ ನಾಗಾರ್ಜುನ ಹಾಗೂ ಕುಟುಂಬದ ಒಪ್ಪಿಗೆ ಇದೆ ಎನ್ನಲಾಗುತ್ತಿದೆ.

ಯಾರಿದು ನಟಿ ದಿವ್ಯಾಂಶಾ ಕೌಶಿಕ್

ಯಾರಿದು ನಟಿ ದಿವ್ಯಾಂಶಾ ಕೌಶಿಕ್

ನಟ ನಾಗ ಚೈತನ್ಯ ಡೇಟ್ ಮಾಡುತ್ತಿರುವ ನಟಿಯ ಬಗ್ಗೆ ಅಧಿಕೃತಗೊಂಡಿಲ್ಲವಾದರೂ, ನಾಗ ಚೈತನ್ಯ ಹಾಗೂ ಸಮಂತಾ ಒಟ್ಟಿಗೆ ನಟಿಸಿದ್ದ 'ಮಜಿಲಿ' ಸಿನಿಮಾದಲ್ಲಿ ನಟಿಸಿದ್ದ ದಿವ್ಯಾಂಶಾ ಕೌಶಿಕ್ ಜೊತೆ ನಾಗ ಚೈತನ್ಯ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಈ ನಟಿಯೊಂದಿಗೆ ನಾಗ ಚೈತನ್ಯ ಸುತ್ತಾಡುತ್ತಿದ್ದಾರೆ ಎನ್ನಲಾಗುತ್ತಿದೆ. 'ಮಜಿಲಿ' ಸಿನಿಮಾದಲ್ಲಿ ದಿವ್ಯಾಂಶಾ ಕೌಶಿಕ್, ನಾಗ ಚೈತನ್ಯರ ಪ್ರೇಮಿಯ ಪಾತ್ರದಲ್ಲಿ ನಟಿಸಿದ್ದರು. ಸಮಂತಾ ಪತ್ನಿಯ ಪಾತ್ರದಲ್ಲಿ ನಟಿಸಿದ್ದರು

ನಟಿ ದಿವ್ಯಾಂಶಾ ಕೌಶಿಕ್ ನಟಿಸಿರುವ ಮೊದಲ ಸಿನಿಮಾವೇ 'ಮಜಿಲಿ' ಆ ಬಳಿಕ 'ರಾಮ್ ರಾವ್ ಆನ್ ಡ್ಯುಟಿ' ಹೆಸರಿನ ತೆಲುಗಿನ ಸಿನಿಮಾದಲ್ಲಿ ನಟಿಸಿದರು. ಇದೀಗ ಇನ್ನೂ ಹೆಸರಿಡದ ತಮಿಳು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ನಾಗ ಚೈತನ್ಯ ಹಾಗೂ ದಿವ್ಯಾಂಶಾ ಕೌಶಿಕ್ ಒಟ್ಟಿಗಿರುವ ಚಿತ್ರವೊಂದು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಾಗ ಚೈತನ್ಯ ನಟಿಸುತ್ತಿರುವ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಾಗ ಚೈತನ್ಯ ಹಾಗೂ ದಿವ್ಯಾಂಶ ಒಟ್ಟಿಗೆ ನಟಿಸಲಿದ್ದಾರೆ.

ಬಿಡುಗಡೆಗೆ ರೆಡಿಯಾಗಿವೆ ಸಿನಿಮಾಗಳು

ಬಿಡುಗಡೆಗೆ ರೆಡಿಯಾಗಿವೆ ಸಿನಿಮಾಗಳು

ಇನ್ನು ನಟಿ ಸಮಂತಾ, ವಿಚ್ಛೇಧನದ ಬಳಿಕ ತಮ್ಮ ವೃತ್ತಿ ಜಿವನದ ಕಡೆ ಹೆಚ್ಚು ಫೋಕಸ್ ಮಾಡಿದ್ದಾರೆ. ಸಮಂತಾ ನಟಿಸಿರುವ ಎರಡು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ತಮಿಳಿನ 'ಕಾತು ವಾಕ್ಕು ರೆಂಡು ಕಾದಲ್' ಹಾಗೂ ತೆಲುಗಿನ 'ಯಶೋಧಾ' ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಹರಿ ನಿರ್ದೇಶನದ 'ಶಾಕುಂತಲಮ್' ಸಿನಿಮಾದಲ್ಲಿ ನಟಿಸಲಿದ್ದಾರೆ. ಜೊತೆಗೆ ಬಾಲಿವುಡ್ ಬೆಡಗಿ ತಾಪ್ಸಿ ಪನ್ನು ನಿರ್ಮಾಣದ ಹಿಂದಿ ಸಿನಿಮಾದಲ್ಲಿ ನಟಿಸಲಿದ್ದಾರೆ. ಬಳಿಕ ಇಂಗ್ಲೀಷ್ ಸಿನಿಮಾ ಒಂದರಲ್ಲಿ ಸಹ ನಟಿಸಲಿದ್ದಾರೆ. ಒಟ್ಟಾರೆ ವಿಚ್ಛೇಧನದ ಬಳಿಕ ಸಮಂತಾ ಇನ್ನಷ್ಟು ಬ್ಯುಸಿಯಾಗಿದ್ದಾರೆ.

ನಾಗ ಚೈತನ್ಯ ಸಹ ಸಖತ್ ಬ್ಯುಸಿ

ನಾಗ ಚೈತನ್ಯ ಸಹ ಸಖತ್ ಬ್ಯುಸಿ

ಇನ್ನು ನಾಗ ಚೈತನ್ಯ ನಟನೆಯ 'ಲವ್ ಸ್ಟೋರಿ' ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಹಿಟ್ ಆಗಿದೆ. ಆ ನಂತರ ಬಂದ 'ಬಂಗಾರ್ರಾಜು' ಸಾಮಾನ್ಯ ಸಿನಿಮಾ ಎನಿಸಿಕೊಂಡಿದೆ. ಇದೀಗ 'ಥ್ಯಾಂಕ್ ಯು' ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ನಾಗ ಚೈತನ್ಯ ನಟಿಸಿರುವ ಮೊದಲ ಹಿಂದಿ ಸಿನಿಮಾ 'ಲಾಲ್ ಸಿಂಗ್ ಛಡ್ಡಾ' ಆಗಸ್ಟ್‌ನಲ್ಲಿ ಬಿಡುಗಡೆ ಆಗಲಿದೆ. ಬಳಿಕ ವೆಂಕಟ್ ಪ್ರಭು ನಿರ್ದೇಶನದ ಹೊಸ ಸಿನಿಮಾದಲ್ಲಿ ನಾಗ ಚೈತನ್ಯ ನಟಿಸಲಿದ್ದಾರೆ.

More from Filmibeat

English summary
Naga Chaithanya getting ready for his second marriage. He and Samantha get divorced last year. Now he is dating an actress.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X