ಒಂದೇ ಚಿತ್ರದಲ್ಲಿ 'ಕಿಂಗ್' ನಾಗಾರ್ಜುನ ಮತ್ತು ಮಗ ಅಖಿಲ್!
ಸ್ಟೈಲಿಶ್ ಸ್ಟಾರ್ ನಾಗಾರ್ಜುನ ಮತ್ತು ಅವರ ಮಗ ಅಖಿಲ್ ಅಕ್ಕಿನೇನಿ ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ. ಇದು ಮಲ್ಟಿಸ್ಟಾರ್ ಚಿತ್ರವಾಗಿದ್ದು, ಸ್ಟಾರ್ ನಿರ್ದೇಶಕ ಆಕ್ಷನ್ ಕಟ್ ಹೇಳಲಿದ್ದಾರಂತೆ.
'ಮಿಸ್ಟರ್ ಮಜ್ನೂ' ಸಿನಿಮಾದ ನಂತರ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿರುವ ಅಖಿಲ್, ಈ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಮತ್ತೊಂದೆಡೆ 'ವೈಲ್ಡ್ ಡಾಗ್' ಸಿನಿಮಾ ಚಿತ್ರೀಕರಣ ಮುಗಿಸಿರುವ ನಾಗಾರ್ಜುನ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದಾರೆ. ಅಷ್ಟಕ್ಕೂ, ನಾಗಾರ್ಜುನ ಮತ್ತು ಅಖಿಲ್ ಇಬ್ಬರನ್ನು ಒಟ್ಟಿಗೆ ತೆರೆಗೆ ತರಲು ಚಿಂತಿಸಿರುವ ನಿರ್ದೇಶಕ ಯಾರು? ಮುಂದೆ ಓದಿ....

ಅನಿಲ್ ರವಿಪುಡಿ ಚಿತ್ರದಲ್ಲಿ ಅಪ್ಪ-ಮಗ
ಮಹೇಶ್ ಬಾಬು ನಟನೆಯ ಸರಿಲೇರು ನೀಕೆವ್ವರು ಚಿತ್ರ ನಿರ್ದೇಶನ ಮಾಡಿದ್ದ ಅನಿಲ್ ರವಿಪುಡಿ, ಈಗ ಮಲ್ಟಿಸ್ಟಾರ್ ಸಿನಿಮಾ ಮಾಡಲು ಮುಂದಾಗಿದ್ದು, ಈ ಚಿತ್ರದಲ್ಲಿ ನಾಗಾರ್ಜುನ ಮತ್ತು ಅಖಿಲ್ ಅವರನ್ನು ಒಟ್ಟಿಗೆ ತೆರೆಮೇಲೆ ತರಲು ಯೋಜಿಸಿದ್ದಾರೆ.

ಎಫ್-3 ಎಂದು ಸುದ್ದಿ!
'ಸರಿಲೇರು ನೀಕೆವ್ವರು' ಚಿತ್ರಕ್ಕೂ ಮುಂಚೆ ಅನಿಲ್ ರವಿಪುಡಿ 'ಎಫ್-2' ಸಿನಿಮಾ ಮಾಡಿದ್ದರು. ವರುಣ್ ತೇಜ ಮತ್ತು ವೆಂಕಟೇಶ್ ನಾಯಕರಾಗಿದ್ದ ಈ ಚಿತ್ರದಲ್ಲಿ ತಮನ್ನಾ, ಮೆಹ್ರಿನ್ ನಾಯಕಿಯಾಗಿದ್ದರು. ಇದೀಗ, ಅನಿಲ್ ಮುಂದಿನ ಚಿತ್ರವನ್ನು ಎಫ್-3 ಎಂದು ಹೇಳಲಾಗುತ್ತಿದೆ. ಇದರಲ್ಲಿ ನಾಗಾರ್ಜುನ ಮತ್ತು ಅಖಿಲ್ ಬಣ್ಣ ಹಚ್ಚುವ ಸಾಧ್ಯತೆ ಇದೆ.

ಡಿಸೆಂಬರ್‌ಗೆ ಆರಂಭಿಸುವ ಚಿಂತನೆ
ಅನಿಲ್ ರವಿಪುಡಿ ತಮ್ಮ ಮುಂದಿನ ಚಿತ್ರವನ್ನು ಡಿಸೆಂಬರ್‌ನಲ್ಲಿ ಆರಂಭಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ಚಿತ್ರದ ಪೂರ್ವ ತಯಾರಿ ನಡೆಸಿದ್ದು, ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.

ಬ್ರಹ್ಮಾಸ್ತ್ರದಲ್ಲಿ ನಾಗಾರ್ಜುನ!
ವೈಲ್ಡ್ ಡಾಗ್ ಚಿತ್ರೀಕರಣ ಮುಗಿಸಿರುವ ನಾಗಾರ್ಜುನ, ಹಿಂದಿಯ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಮತ್ತೊಂದೆಡೆ ಭಾಸ್ಕರ್ ರಾವ್ ನಿರ್ದೇಶನದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.


Click it and Unblock the Notifications











