»   » ನಿರ್ಲಜ್ಜ ನಿರ್ದೇಶಕನ ಚ(ಚಾ)ಳಿ ಬಿಡಿಸಿದ ನಮಿತಾ

ನಿರ್ಲಜ್ಜ ನಿರ್ದೇಶಕನ ಚ(ಚಾ)ಳಿ ಬಿಡಿಸಿದ ನಮಿತಾ

By: ಶಂಕರ್, ಚೆನ್ನೈ
Subscribe to Filmibeat Kannada

ಕೆಲವು ಚಲನಚಿತ್ರ ನಿರ್ದೇಶಕರಿಗೆ ಚಿತ್ರ ವಿಚಿತ್ರ ಚಾಳಿಗಳಿರುತ್ತವೆ. ಒಂದೆರಡು ಹಿಟ್ ಚಿತ್ರಗಳನ್ನು ಕೊಟ್ಟರಂತೂ ಆತ ಹೇಳಿದ್ದೇ ವೇದವಾಕ್ಯ. ಇನ್ನೂ ಕೆಲವರಿರುತ್ತಾರೆ ಐದಾರು ಹಿಟ್ ಚಿತ್ರಗಳನ್ನು ಕೊಟ್ಟರೆ ಗಾಡ್ ಫಾದರ್ ಗೆ ಸಮಾನ.

ಕೆಲವರು ಸುದೀರ್ಘ ಸಮಯ ಚಿತ್ರರಂಗದಲ್ಲೇ ರಾಗಿಬೀಸಿ ಬೀಸಿ ಸೀನಿಯಾರಿಟಿ ಸಂಪಾದಿಸಿಕೊಂಡಿರುತ್ತಾರೆ. ಅಂತಹವರ ಬಳಿ ಹೊಸಬರು ಅವಕಾಶ ಹುಡುಕಿಕೊಂಡು ಹೋದರೆ ಸಾಕು. ಕಾಲು ಮೇಲೆ ಕಾಲು ಹಾಕಿಕೊಂಡು ಒಂದು ಕಾಲನ್ನು ಅಲುಗಾಡಿಸುತ್ತಾ ಡೈ ಹೊಡೀ ಎಂಬಂತೆ ಸೂಚಿಸುತ್ತಿರುತ್ತಾರೆ.


ಇನ್ನೂ ಕೆಲವರು ಅತ್ತ ಹಿಟ್ ನಿರ್ದೇಶಕರೂ ಆಗದೆ ಇತ್ತ ಫ್ಲಾಪ್ ನಿರ್ದೇಶಕರೂ ಆಗದೆ ತ್ರಿಶಂಕು ಸ್ವರ್ಗವಾಸಿಗಳಾಗಿರುತ್ತಾರೆ. ಅಂತಹ ನಿರ್ದೇಶಕರು ಕೆಲವೊಂದು ಕೆಟ್ಟ ಚಾಳಿಗಳನ್ನು ಮೈಗೂಡಿಸಿಕೊಂಡಿರುತ್ತಾರೆ. ಇವರು ಹೋದಲ್ಲೆಲ್ಲಾ ಬಂದಲ್ಲೆಲ್ಲಾ ನಾಯಕಿಯರನ್ನು ಅಪ್ಪಿಕೊಂಡೇ ಮಾತನಾಡಿಸುವುದು.

ಅಂತಹ ಕೆಟಗರಿಗೆ ಸೇರಿದ ನಿರ್ದೇಶನಕನೊಬ್ಬನಿಗೆ ನಮಿತಾ ತಕ್ಕ ಪಾಠ ಕಲಿಸಿದ್ದಾರೆ. ತಮಿಳಿನಲ್ಲಿ ಕಳೆದ ಒಂದು ವರ್ಷದಿಂದ ಈ ನಿರ್ದೇಶಕ ರೀಲು ಸುತ್ತುತ್ತಲೇ ಇದ್ದಾನೆ. ಚಿತ್ರದ ನಾಯಕಿ ಕಾಣಿಸಿದರೆ ಸಾಕು "ಹಾಯ್ ಡಿಯರ್" ಎಂದು ವಿಶ್ ಮಾಡುತ್ತಾ ತಬ್ಬಿಕೊಳ್ಳುತ್ತಾನೆ. ಬಳಿಕ ಕೆನ್ನೆಗೆ ಕೆನ್ನೆ ತಾಗಿಸುತ್ತಾನೆ.

ಇದೇ ರೀತಿ ಆತ ಸಿಕ್ಕ ತಾರೆಗಳಿಗೆಲ್ಲಾ ತಾರತಮ್ಯ ಮಾಡದೆ ಅಪ್ಪಿಕೋ ಚಳುವಳಿ ಮಾಡುತ್ತಿದ್ದ. ಇದನ್ನು ಗಮನಿಸಿದ ನಮಿತಾ, ತಡಿ ನಿನಗೆ ಮಾಡ್ತೀನಿ ಎಂದುಕೊಂಡು ಸಮಯಕ್ಕಾಗಿ ಕಾಯುತ್ತಿದ್ದರು. ಅಂತಹ ಸಮಯ ಒಂದು ದಿನ ಬಂದೇ ಬಂತು.

ಇನ್ನೇನು ಚಿತ್ರೀಕರಣ ಆರಂಭವಾಗಬೇಕು ನಮಿತಾ ಕಾರಿನಲ್ಲಿ ಬಂದಿಳಿದರು. ಕೂಡಲೆ ಅಲ್ಲಿಗೆ ಬಂದ ಆತ "ಹಾಯ್ ಡಿಯರ್" ಎಂದು ಅಪ್ಪಿಕೊಳ್ಳಲು ಮುಂದಾದ. ಅಷ್ಟರಲ್ಲಿ ಒಂಚೂರು ಹಿಂದಕ್ಕೆ ಸರಿದ ನಮಿತಾ, "ವಣಕ್ಕಂ ಅಣ್ಣಾ" ಎಂದು ಎರಡೂ ಕೈ ಮುಗಿದಿದ್ದಾರೆ. ಅಷ್ಟೇ ನಿರ್ದೇಶಕನ ಮುಖ ಸೂಜಿ ಚುಚ್ಚಿದ ಬಲೂನಿನಂತಾಗಿದೆ. ಇತಿ ವಾರ್ತಾ ಅಂತ್ಯ.

English summary
As Namitha was about to attend the shoot of the film, she was told by the director’s ‘hugging’ culture and his style of wishing actresses. Deciding to teach him a befitting lesson. She wished him, Vanakkam, Anna (meaning ‘Good Morning, elder brother). The director was shell-shocked.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada