»   » ‘ಜೂ... ಟ್‌’! ನಾರಾಯಣನ ಅಗಲಿದ ನರ

‘ಜೂ... ಟ್‌’! ನಾರಾಯಣನ ಅಗಲಿದ ನರ

Subscribe to Filmibeat Kannada

ನಟನೆ, ನಿರ್ದೇಶನ, ಚಿತ್ರಕಥೆ, ಗೀತೆರಚನೆ ಮುಂತಾಗಿ ಎಲ್ಲದರಲ್ಲೂ ಪಳಗಿರುವ ಖ್ಯಾತಿಯ ಎಸ್‌.ನಾರಾಯಣ್‌ ಎನ್ನುವ ಸಕಲ ಕಲಾವಲ್ಲಭನ ಬಲಗೈ ಭಂಗವಾಗಿರುವ ಸುದ್ದಿ ಸ್ಯಾಂಡಲ್‌ವುಡ್‌ನಿಂದ ಸ್ವಲ್ಪ ತಡವಾಗಿ ಹೊರಬಿದ್ದಿದೆ.

ನಾರಾಯಣ್‌ ಯಶಸ್ಸಿನ ಹಿಂದಿನ ಸೂತ್ರಧಾರ ಎಂದೇ ನಾರಾಯಣ್‌ ಕ್ಯಾಂಪ್‌ನಲ್ಲಿ ಪ್ರಸಿದ್ಧರಾಗಿರುವ ಗೋವಿಂದು, ಈಗ ಹೊಸ ನೆಲೆ ಹುಡುಕುತ್ತಿದ್ದಾರೆ- ‘ಜೂ... ಟ್‌’! ಮೂಲಕ. ಅಂದಹಾಗೆ, ಈ ಗೋವಿಂದು ಹಾಗೂ ನಾರಾಯಣ್‌ ಒಂದೇ ತಾಯಿಯ ಮಕ್ಕಳು.

ನಾರಾಯಣ್‌ ಕ್ಯಾಂಪ್‌ನಿಂದ ಹೊರಬಿದ್ದಿರುವ ಗೋವಿಂದು ‘ಜೂ... ಟ್‌’! ಎನ್ನುವ ಹೊಸ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರದ ನಿರ್ಮಾಪಕ, ನಿರ್ದೇಶಕ- ಗೋವಿಂದು ಅವರೇ. ಈ ಮುನ್ನ ನಾರಾಯಣ್‌ ಅವರ ಚಿತ್ರಗಳಲ್ಲಿ ದುಡಿದು ಅನುಭವವಿರುವ ಗೋವಿಂದು, ಅಣ್ಣನ ಗೂಡಿಂದ ಹೊರಬಂದು ದೊಡ್ಡ ಸಾಹಸಕ್ಕಿಳಿದಿದ್ದಾರೆ. ಮುನಿಸಿಕೊಂಡಿದ್ದು ಅಣ್ಣನೋ ತಮ್ಮನೋ ಅನ್ನುವುದು ಖಚಿತವಾಗಿಲ್ಲ .

ಚಿತ್ರದ ಯಶಸ್ಸಿಗಾಗಿ ದುಡಿದವರನ್ನು ಮೂಲೆಗುಂಪು ಮಾಡಿ ಎಲ್ಲ ಯಶಸ್ಸನ್ನೂ ತಾವೇ ಬಾಚಿಕೊಳ್ಳುತ್ತಾರೆ, ತಮ್ಮ ಗೋವಿಂದುವನ್ನು ಕೂಡ ಏಣಿಯಾಗಿ ಬಳಸಿಕೊಂಡರು ಅನ್ನುವ ಆಪಾದನೆ ನಾರಾಯಣ್‌ ಮೇಲಿದೆ. ನಾರಾಯಣ್‌ ಕ್ಯಾಂಪ್‌ನಿಂದ ಹೊರಬಿದ್ದದ್ದು ಗೋವಿಂದು ಮಾತ್ರವಲ್ಲ - ನಾರಾಯಣ್‌ ಚಿತ್ರಗಳ ಖಾಯಂ ಮೇಕಪ್‌ ಕಲಾವಿದರಾಗಿದ್ದ ವಿಠಲ್‌ ಬಾಬು ಕೂಡ ಹೊರಬಿದಿದ್ದಾರೆ. ನಾರಾಯಣ್‌ ಬಾಮೈದ ಗಿರಿ ಮುಖ ತಿರುಗಿಸಿ ಬಹಳ ದಿನಗಳೇ ಆಗಿವೆ.

ಮೇಘಮಾಲೆ, ವೀರಪ್ಪ ನಾಯಕ ಚಿತ್ರಗಳಲ್ಲಿ ಶ್ರೇಷ್ಠ ಕೆಲಸ ನಿರ್ವಹಿಸಿದರೂ, ವಿಠಲ್‌ ಸುದ್ದಿಗೆ ಬರದಂತೆ- ಮಾಧ್ಯಮಗಳ ಕಣ್ಣಿಗೆ ಬೀಳದಂತೆ ನಾರಾಯಣ್‌ ತಡೆದರಂತೆ. ಇದರಿಂದಾಗಿ ಬೇಸತ್ತ ವಿಠಲ್‌ ನಾರಾಯಣ್‌ ಕ್ಯಾಂಪ್‌ನಿಂದ ಹೊರಬಿದ್ದಿದ್ದಾರೆ, ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದಾರೆ. ಪ್ರಸ್ತುತ ಸೈನಿಕ ಚಿತ್ರದಲ್ಲಿ ತೊಡಗಿಕೊಂಡಿರುವ ವಿಠಲ್‌ ಬಾಬು, ನಾಯಕ ಯೋಗೇಶ್ವರ್‌ಗೆ ಮಾಡಿರುವ ಮೇಕಪ್‌ ಅದ್ಭುತವಾಗಿದೆಯಂತೆ.

ಒಡಹುಟ್ಟಿದ ಸೋದರ ಗೋವಿಂದು, ಗೆಳೆಯ ವಿಠಲ್‌ ಬಾಬು ದೂರವಾದರೂ ನಾರಾಯಣ್‌ ಮಾತ್ರ ಎಂದಿನಂತೆ ಅದೇ ಉತ್ಸಾಹದಲ್ಲಿದ್ದಾರೆ. ಅವರು ಯೋಗನಿದ್ರೆಯಲ್ಲಿದ್ದಾರೆ ಅನ್ನುತ್ತಾರೆ ಅಭಿಮಾನಿಗಳು.

what do you think about this story ?

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada