ಲಿಪ್‌ಲಾಕ್‌, ಮದ್ವೆ, ಹನಿಮೂನ್ ಆಯ್ತು, ಈಗ ಹಸಿಬಿಸಿ ದೃಶ್ಯಗಳು.. ನರೇಶ್- ಪವಿತ್ರಾ 2nd ಇನ್ನಿಂಗ್ಸ್ ಸೂತ್ರಧಾರ ಯಾರು?

By ಫಿಲ್ಮಿಬೀಟ್ ಡೆಸ್ಕ್

ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಗುಟ್ಟಾಗಿ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಭಾರೀ ಸದ್ದು ಮಾಡಿತ್ತು. ಹೊಸ ವರ್ಷದ ಸಂಭ್ರಮದಲ್ಲಿ ಪವಿತ್ರಾ ಜೊತೆ ಲಿಪ್‌ಲಾಕ್ ಮಾಡಿ ವಿಡಿಯೋ ರಿಲೀಸ್ ಮಾಡಿದ್ದ ನರೇಶ್ ನಂತರ ಮದುವೆ ವಿಡಿಯೋ ಶೇರ್ ಮಾಡಿದ್ದರು. ಬೆನ್ನಲ್ಲೇ ಜೋಡಿ ದುಬೈಗೆ ಹನಿಮೂನ್ ಹೋಗಿ ಬಂದಿರುವುದಾಗಿ ಮತ್ತೊಂದು ವಿಡಿಯೋ ಬಂತು.

ಕಳೆದೊಂದು ವರ್ಷದಿಂದ ನರೇಶ್- ಪವಿತ್ರಾ ವೈಯಕ್ತಿಕ ಜೀವನದ ವಿಚಾರಗಳು ಸಾಕಷ್ಟು ಚರ್ಚೆ ಹುಟ್ಟಾಕ್ಕಿದೆ. ಈಗಾಗಲೇ ನರೇಶ್ 3 ಮದುವೆ ಆಗಿದ್ದಾರೆ. ನಮ್ಮ ಸಂಸಾರದಲ್ಲಿ ನಟಿ ಪವಿತ್ರಾ ಹುಳಿ ಹಿಂಡಿದ್ದಾಳೆ ಎಂದು ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಆರೋಪಿಸುತ್ತಾ ಬರ್ತಿದ್ದಾರೆ. ರಮ್ಯಾ ರಘುಪತಿಯಿಂದ ವಿಚ್ಛೇದನ ಕೋರಿ ನರೇಶ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ರಮ್ಯಾ ವಿಚ್ಛೇದನ ನೀಡಲು ಸುತಾರಾಂ ಒಪ್ಪುತ್ತಿಲ್ಲ. ನನ್ನ ಮಗನಿಗಾಗಿ ನಾನು ವಿಚ್ಛೇದನ ಕೊಡಲ್ಲ ಎನ್ನುತ್ತಿದ್ದಾರೆ.

Naresh shared screen space with Pavitra Lokesh in M S Rajus Directional Second Innings

ಮೈಸೂರಿನ ಹೋಟೆಲ್‌ವೊಂದರ ಕೋಣೆಯಲ್ಲಿ ನರೇಶ್- ಪವಿತ್ರಾ ಒಟ್ಟಿಗೆ ರಮ್ಯಾ ರಘುಪತಿ ಕೈಗೆ ಸಿಕ್ಕಿಬಿದ್ದು ಭಾರೀ ಹೈಡ್ರಾಮಾ ನಡೆದಿತ್ತು. ಅಲ್ಲಿಂದ ಮುಂದೆ ಗಂಡ- ಹೆಂಡತಿ ಮತ್ತು ಅವಳು ವಿಚಾರ ಭಾರೀ ಸದ್ದು ಮಾಡಲು ಶುರುವಾಯಿತು. ಮೊದಲು ನಾವಿಬ್ಬರು ಸ್ನೇಹಿತರು ಎಂದು ಹೇಳಿಕೊಂಡು ಸುತ್ತಾಡಿದ ನರೇಶ್- ಪವಿತ್ರಾ ಈಗ ಒಟ್ಟೊಟ್ಟಿಗೆ ಸುತ್ತಾಡಲು ಆರಂಭಿಸಿದ್ದಾರೆ. ಇದೆಲ್ಲದರ ಮಧ್ಯೆ ಹೊಸ ವರ್ಷಕ್ಕೆ ಪವಿತ್ರಾ ಜೊತೆ ಲಿಪ್‌ಲಾಕ್ ಮಾಡಿ ಶೀಘ್ರದಲ್ಲೇ ಮದುವೆ ಆಗುತ್ತಿದ್ದೇವೆ ಎಂದು ಹೇಳಿ ನರೇಶ್ ವಿಡಿಯೋ ತೇಲಿ ಬಿಟ್ಟಿದ್ದರು.

ನರೇಶ್ ಹೇಳಿದಂತೆಯೇ ಪವಿತ್ರಾ ಜೊತೆ ಮದುವೆ ಆಗಿರುವುದಾಗಿ ಹೇಳಿ ಮತ್ತೊಂದು ವಿಡಿಯೋ ಇತ್ತೀಚೆಗೆ ಹಂಚಿಕೊಂಡಿದ್ದರು. ಅದರ ಬೆನ್ನಲ್ಲೇ ದುಬೈನಲ್ಲಿ ಹನಿಮೂನ್‌ಗೂ ಹೋಗಿ ಬಂದಿದ್ದಾರೆ ಎನ್ನಲಾಯಿತು. ಅದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು. ಆದರೆ ಕೆಲವರು ಮಾತ್ರ ಇವರಿಬ್ಬರು ಮದುವೆ ಆಗಿದ್ದಾರೆ ಎನ್ನುವುದನ್ನು ನಂಬಲು ಸಿದ್ಧರಿಲ್ಲ. ನರೇಶ್- ಪವಿತ್ರಾ ಸಿನಿಮಾವೊಂದರಲ್ಲಿ ನಟಿಸ್ತಿದ್ದಾರೆ. ಆ ಸಿನಿಮಾ ಪ್ರಮೋಷನ್‌ ಭಾಗವಾಗಿ ಹೀಗೆ ವಿಡಿಯೋಗಳನ್ನು ಶೇರ್ ಮಾಡುತ್ತಿರುವುದಾಗಿ ಹೇಳುತ್ತಿದ್ದಾರೆ. ರಮ್ಯಾ ರಘುಪತಿ ಕೂಡ ಇದೇ ಲೆಕ್ಕಾಚಾರದಲ್ಲಿದ್ದಾರೆ.

Naresh shared screen space with Pavitra Lokesh in M S Rajus Directional Second Innings

ಸಿನಿಮಾ ಪ್ರಮೋಷನ್ ಸ್ಟ್ರ್ಯಾಟಜಿ ಪ್ರಕಾರ ಹೀಗೆ ನರೇಶ್ ಒಂದೊಂದೇ ವಿಡಿಯೋ ತೇಲಿ ಬಿಡುತ್ತಿದ್ದಾರೆ ಎಂದು ಟಾಲಿವುಡ್‌ನಲ್ಲಿ ಚರ್ಚೆ ನಡೀತಿದೆ. ನರೇಶ್- ರಮ್ಯಾ ವಿಚ್ಛೇದನ ಅರ್ಜಿ ಕೋರ್ಟ್‌ನಲ್ಲಿ ಇರುವಾಗ ಮತ್ತೊಂದು ಮದುವೆ ಆಗಲು ಸಾಧ್ಯವಿಲ್ಲ. ಸದ್ಯ ತಮ್ಮ ಸಿನಿಮಾ ಬಗ್ಗೆ ಕ್ರೇಜ್ ಸೃಷ್ಟಿಸಲು ಚಿತ್ರತಂಡ ಹೀಗೆ ಮಾಡ್ತಿದೆ ಎಂದು ಟಾಲಿವುಡ್ ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ. ಈ ಚಿತ್ರಕ್ಕೆ 'ಸೆಕೆಂಡ್ ಇನ್ನಿಂಗ್ಸ್' ಎನ್ನುವ ಟೈಟಲ್ ಫಿಕ್ಸ್ ಆಗಿದೆಯಂತೆ. ಎಂ. ಎಸ್ ರಾಜು ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಬೋಲ್ಡ್ ಸಿನಿಮಾಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರಾಗಿರುವ ಎಂ. ಎಸ್‌ ರಾಜು 'ಸೆಕೆಂಡ್ ಇನ್ನಿಂಗ್ಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ. ಸಿನಿಮಾ ಕಥೆಯ ಪ್ರಕಾರ ಮೊದಲ ಮದುವೆ ಮುರಿದು ಬಿದ್ದ ಜೋಡಿ ಸಹಜೀವನ ನಡೆಸಿ ನಂತರ ಮದುವೆ ಆಗುತ್ತಾರಂತೆ. ಈ ಚಿತ್ರವನ್ನು ಸ್ವತಃ ನರೇಶ್ ನಿರ್ಮಾಣ ಮಾಡುತ್ತಿದ್ದಾರೆ. ತಮ್ಮದೇ ನಿಜ ಜೀವನದ ಕಥೆಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡಲು ಅವರು ಮುಂದಾಗಿದ್ದಾರೆ. ಅದರ ಪ್ರಚಾರಕ್ಕಾಗಿ ಹೀಗೆ ಲಿಪ್‌ಲಾಕ್, ಮದುವೆ, ಹನಿಮೂನ್ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಪೋಸ್ಟರ್ ಸಮೇತ ಸಿನಿಮಾ ಘೋಷಣೆ ಮಾಡಲಿದ್ದಾರಂತೆ.

'ಸೆಕೆಂಡ್ ಇನ್ನಿಂಗ್ಸ್' ಸಿನಿಮಾದಲ್ಲಿ ನರೇಶ್ - ಪವಿತ್ರಾ ಲೋಕೇಶ್ ಹಸಿಬಿಸಿ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರಂತೆ. ಎಂ. ಎಸ್ ರಾಜು ಸಿನಿಮಾಗಳಲ್ಲಿ ಇರುವಂತಹ ರೊಮ್ಯಾಂಟಿಕ್ ದೃಶ್ಯಗಳು ಈ ಚಿತ್ರದಲ್ಲಿ ಹೇರಳವಾಗಿ ಇರಲಿದೆಯಂತೆ. ಶೀಘ್ರದಲ್ಲೇ ಅದರ ಝಲಕ್ ಕೂಡ ರಿಲೀಸ್ ಮಾಡುವ ಸಾಧ್ಯತೆಯಿದೆ. ನರೇಶ್ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ ನಾನು ಆ ಬಗ್ಗೆ ಮತ್ತೊಂದು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತೇನೆ ಎಂದಿದ್ದರು. ಅದು 'ಸೆಕೆಂಡ್ ಇನ್ನಿಂಗ್ಸ್' ಸಿನಿಮಾ ಸುದ್ದಿಗೋಷ್ಠಿ ಎನ್ನಲಾಗ್ತಿದೆ.

More from Filmibeat

English summary
Naresh shared screen space with Pavitra Lokesh in M S Raju's Directional Second Innings. some claim that Naresh Shared marriage video for upcoming movie publicity. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X