For Quick Alerts
  ALLOW NOTIFICATIONS  
  For Daily Alerts

  ದಸರಾ ಹಬ್ಬಕ್ಕೆ ಪುನೀತ್ ಕಡೆಯಿಂದ ಭರ್ಜರಿ ಗಿಫ್ಟ್.!

  By Bharath Kumar
  |
  Natasaarvabhowma : ದಸರಾ ಹಬ್ಬಕ್ಕೆ ಪುನೀತ್ ಕೊಡ್ತಾರೆ ಗುಡ್ ನ್ಯೂಸ್...!! | Filmibeat Kannada

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಕಳೆದ ವರ್ಷದ ಅಂತ್ಯದಲ್ಲಿ ತೆರೆಕಂಡಿತ್ತು. ಅದಾದ ಬಳಿಕ ಪವನ್ ಒಡೆಯರ್ ಜೊತೆಯಲ್ಲಿ 'ನಟಸಾರ್ವಭೌಮ' ಸಿನಿಮಾ ಮಾಡ್ತಿದ್ದಾರೆ.

  ಪೋಸ್ಟರ್ ಹಾಗೂ ಫಸ್ಟ್ ಲುಕ್ ನಿಂದ ಕುತೂಹಲ ಮೂಡಿಸಿರುವ ಈ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

  ಇದೀಗ, 'ನಟಸಾರ್ವಭೌಮ' ಚಿತ್ರದ ರಿಲೀಸ್ ಡೇಟ್ ಬಹಿರಂಗವಾಗಿದೆ. ಸದ್ಯದ ಮೂಲಗಳ ಪ್ರಕಾರ ಪುನೀತ್ ಹೊಸ ಸಿನಿಮಾ ಈ ವರ್ಷದ ಅಂತ್ಯಕ್ಕೆ ತೆರೆಕಾಣಲಿದೆ ಎನ್ನಲಾಗುತ್ತಿದೆ.

  'ನಟ ಸಾರ್ವಭೌಮ' ಸಿನಿಮಾದಲ್ಲಿದೆ ಪಾರ್ಟಿ ಸಾಂಗ್.!'ನಟ ಸಾರ್ವಭೌಮ' ಸಿನಿಮಾದಲ್ಲಿದೆ ಪಾರ್ಟಿ ಸಾಂಗ್.!

  ಹೌದು, ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 5 ರಂದು 'ನಟಸಾರ್ವಭೌಮ' ಸಿನಿಮಾ ತೆರೆಮೇಲೆ ಅಪ್ಪಳಿಸಲಿದೆಯಂತೆ. ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಶೇಕಡಾ 50 ರಷ್ಟು ಚಿತ್ರೀಕರಣ ಮುಗಿದಿದೆ.

  ರಚಿತಾ ರಾಮ್ ಈ ಚಿತ್ರದ ನಾಯಕಿಯಾಗಿದ್ದು, 'ಚಕ್ರವ್ಯೂಹ' ಚಿತ್ರದ ನಂತರ ಪುನೀತ್ ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಮುಖ್ಯಪಾತ್ರದಲ್ಲಿ ಮಲಯಾಳಂ ಬೆಡಗಿ ಅನುಪಮಾ ಪರಮೇಶ್ವರನ್ ಕೂಡ ಅಪ್ಪು ಜೊತೆ ಅಭಿನಯಿಸುತ್ತಿದ್ದಾರೆ.

  ನಿರ್ದೇಶಕ ಪವನ್ ಒಡೆಯರ್ ಅವರೇ ಕಥೆ-ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳ್ತಿದ್ದಾರೆ. ಡಿ ಇಮ್ಮನ್ ಸಂಗೀತ ನೀಡ್ತಿದ್ದಾರೆ. ಇನ್ನುಳಿದಂತೆ ಚಿಕ್ಕಣ್ಣ, ಅಚ್ಯುತ್ ಕುಮಾರ್, ಬಿ ಸರೋಜದೇವಿ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.

  English summary
  Puneeth Rajakumar's new film 'Natasarvabhowa' being directed by Pavan Wodeyar is all set to be released on the 05th of October during the Dasara season.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X