ಮಹೇಶ್ ಬಾಬು ಮುಂದಿನ ಚಿತ್ರದಲ್ಲಿ 'ನ್ಯಾಷನಲ್ ಸ್ಟಾರ್'!
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟನೆಯ ಸರಿಲೇರು ನೀಕೆವ್ವರು ಚಿತ್ರ ಅದ್ಭುತ ಪ್ರದರ್ಶನ ಕಾಣ್ತಿದೆ. ಅನಿಲ್ ರವಿಪುಡಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು, ಹಿರಿಯ ನಟಿ ವಿಜಯಶಾಂತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಈ ಸಿನಿಮಾದ ಯಶಸ್ಸಿನ ಬಳಿಕ ಮಹೇಶ್ ಬಾಬು ಮತ್ತೆ ವಂಶಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಮಹೇಶ್ 27 ನೇ ಚಿತ್ರದ ತಯಾರಿ ಜೋರಾಗಿದ್ದು, ಕುತೂಹಲ ಮೂಡಿಸಿದೆ. ಈ ಚಿತ್ರಕ್ಕೀಗ ನ್ಯಾಷನಲ್ ಸ್ಟಾರ್ ಎಂಟ್ರಿಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಯಾರದು? ಮುಂದೆ ಓದಿ...

ಮಹೇಶ್ ಚಿತ್ರದಲ್ಲಿ ದೇವರಕೊಂಡ
ಮಹರ್ಷಿ ಸಿನಿಮಾದ ಬಳಿಕ ವಂಶಿ ಮತ್ತೆ ಮಹೇಶ್ ಬಾಬುಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಿನ್ಸ್ ಜೊತೆ ನಟಿಸಲು ನ್ಯಾಷನಲ್ ಸ್ಟಾರ್ ವಿಜಯ್ ದೇವರಕೊಂಡ ಅವರನ್ನು ಕರೆತಂದಿದ್ದಾರಂತೆ. ಇದು ಟಾಲಿವುಡ್ ಪ್ರೇಕ್ಷಕರಿಗೆ ಖುಷಿ ಕೊಡಲಿದೆ.

ಮೊದಲು ಒಪ್ಪಲಿಲ್ಲ, ಆಮೇಲೆ ಓಕೆ ಅಂದ್ರು
ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಪೂರ್ಣ ಪ್ರಮಾಣದ ಪಾತ್ರ ಮಾಡುತ್ತಿಲ್ಲ. ಇದು ಅತಿಥಿ ಪಾತ್ರವಾಗಿದ್ದು, ದೇವರಕೊಂಡ ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಈ ಪಾತ್ರ ಮಾಡಲು 'ಅರ್ಜುನ್ ರೆಡ್ಡಿ' ನಟ ಒಪ್ಪಲಿಲ್ಲ. ಆಮೇಲೆ ನಿರ್ದೇಶಕರ ಒಪ್ಪಿಸಿದರು.

ನ್ಯೂಯಾರ್ಕ್ ನಲ್ಲಿ ಮಹೇಶ್ ಬಾಬು
ಸದ್ಯ ಮಹೇಶ್ ಬಾಬು ನ್ಯೂಯಾರ್ಕ್ ಗೆ ತೆರಳಿದ್ದಾರೆ. ಮೊಣಕಾಲಿಗೆ ಶಸ್ತ್ರ ಚಿಕಿತ್ಸೆಗಾಗಿ ಹೋಗಿದ್ದು, ಆಪರೇಷನ್ ಬಳಿಕ ನಾಲ್ಕೈದು ತಿಂಗಳು ವಿಶ್ರಾಂತಿ ಮಾಡಬೇಕಾದ ಅಗತ್ಯತೆ ಇದೆ ಎನ್ನಲಾಗಿದೆ. 2014ರಿಂದಲೂ ಈ ಆಪರೇಷನ್ ಮುಂದಕ್ಕೆ ಹಾಕುತ್ತಿದ್ದು, ಅಂತಿಮವಾಗಿ ಈಗ ಸಮಯ ಬಂದಿದೆ.

ಮಹೇಶ್ ಬಾಬುಗೆ ಅಪ್ಪಟ ಅಭಿಮಾನಿ
ಅಂದ್ಹಾಗೆ, ಮಹೇಶ್ ಬಾಬುಗೆ ವಿಜಯ್ ದೇವರಕೊಂಡ ದೊಡ್ಡ ಅಭಿಮಾನಿ. ಇದನ್ನು ವಿಜಯ್ ಕೂಡ ಬಹಿರಂಗವಾಗಿ ಹೇಳಿಕೊಂಡಿದ್ದರು. ಹಾಗಾಗಿ, ದೇವರಕೊಂಡ ಕೂಡ ಥ್ರಿಲ್ ಆಗಿದ್ದಾರೆ. ಇವರಿಬ್ಬರನ್ನು ಒಟ್ಟಿಗೆ ನೋಡುವುದು ಟಾಲಿವುಡ್ ಪ್ರೇಕ್ಷಕರಿಗೂ ಹಬ್ಬವಾಗಲಿದೆ. ಇನ್ನುಳಿದಂತೆ ಕೈರಾ ಅಡ್ವಾನಿ ನಾಯಕಿಯಾಗುವ ಸಾಧ್ಯತೆ ಇದೆ.


Click it and Unblock the Notifications











