»   » ಸೀತೆ ಪಾತ್ರ ಮಾಡಿದವಳು ಸಿಲ್ಕ್ ಸ್ಮಿತಾ ಆಗಲಾರೆ

ಸೀತೆ ಪಾತ್ರ ಮಾಡಿದವಳು ಸಿಲ್ಕ್ ಸ್ಮಿತಾ ಆಗಲಾರೆ

Posted By:
Subscribe to Filmibeat Kannada

ಕನ್ನಡದ ಸೂಪರ್ ಸ್ಟಾರ್ ಉಪೇಂದ್ರರ 'ಸೂಪರ್' ಚಿತ್ರದಲ್ಲಿ ನಟಿಸಿದ್ದ ದಕ್ಷಿಣ ಭಾರತ ಖ್ಯಾತಿಯ ನಟಿ ನಯನತಾರಾ, "ಸೀತೆಯ ಪಾತ್ರ ಮಾಡಿರುವ ನಾನು ಸಿಲ್ಕ್ ಸ್ಮಿತಾ ಪಾತ್ರ ಮಾಡುವುದು ಚೆನ್ನಾಗಿರುವುದಿಲ್ಲ" ಎಂದಿದ್ದಾರೆ. ತಮಿಳಿನಲ್ಲಿ ಮಾಡಲಿರುವ 'ಡರ್ಟಿ ಪಿಕ್ಚರ್' ಚಿತ್ರದಲ್ಲಿ ತಮಗೆ ಬಂದಿದ್ದ ಆಫರ್ ಕುರಿತು ನಯನತಾರಾ ಈ ಮಾತು ಹೇಳಿದ್ದಾರೆ.

ಕಳೆದ ವರ್ಷ, 2011 ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹಿಟ್ ತೆಲುಗು ಚಿತ್ರ 'ಶ್ರೀರಾಮ ರಾಜ್ಯಂ'ನಲ್ಲಿ ನಯನತಾರಾ ಸೀತೆಯ ಪಾತ್ರದಲ್ಲಿ ನಟಿಸಿದ್ದರು. ನಂದಮೂರಿ ಬಾಲಕೃಷ್ಣ ನಾಯಕತ್ವದ ಈ ಚಿತ್ರವನ್ನು ಹಿರಿಯ ನಿರ್ದೇಶಕ ಬಾಪು ನಿರ್ದೇಶಿಸಿದ್ದರು. ಶ್ರೀರಾಮ ರಾಜ್ಯಂ ಚಿತ್ರ ನಯನತಾರಾ ವೃತ್ತಿಜೀವನದಲ್ಲಿ ಇನ್ನೊಂದು ಮೈಲಿಗಲ್ಲು ಎಂಬಂತಾಗಿತ್ತು.

ಈ ಚಿತ್ರದಲ್ಲಿನ ನಯನತಾರಾರ ಸೀತೆಯ ಪಾತ್ರವನ್ನು ಆಂಧ್ರದ ಹಳ್ಳಿಹಳ್ಳಿಯಲ್ಲಿಯೂ ಅದೆಷ್ಟು ಮಹಿಳೆಯರು ಇಷ್ಟಪಟ್ಟಿದ್ದರು ಎಂದರೆ ಟ್ರಾಕ್ಟರುಗಳಲ್ಲಿ ಬಂದು ಚಿತ್ರ ನೋಡಿ ಹೋಗಿದ್ದರು. ಆಂಧ್ರದ ತುಂಬಾ ಈ ಚಿತ್ರದ ಪಾತ್ರಧಾರಿ ನಯನತಾರಾ ಸಾಕ್ಷಾತ್ ಸೀತೆಯಾಗಿ ಕಂಗೊಳಿಸಿದ್ದರು. ಸೀತೆಯನ್ನು ಫೋಟೋದಲ್ಲಿ ನೋಡಿದ್ದ ಜನರು ನಯನತಾರಾರೇ ಸೀತೆ ಎಂಬಷ್ಟು ಪ್ರಭಾವಕ್ಕೊಳಗಾಗಿದ್ದರು.

ಇಂಥ ನಯನತಾರಾ, ಸಿಲ್ಕ್ ಸ್ಮಿತಾ ನಿಜಜೀವನದ ಕಥೆಯಾಧಾರಿತ ಡರ್ಟಿ ಪಿಕ್ಚರ್ ಆಫರ್ ಬಂದಾಗ ಸಹಜವಾಗೇ ಯೋಚನೆಗೊಳಗಾಗಿದ್ದರು. ಕೊನೆಗೂ ಈ ಪಾತ್ರವನ್ನು ಮಾಡುವುದು ಬೇಡ ಎಂದ ತೀರ್ಮಾನಿಸಿದ ನಯನತಾರಾ ಆ ಪಾತ್ರವನ್ನು ತಿರಸ್ಕರಿಸಿದರು. ಯಾರೋ ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ್ದಾರೆ.

ಸೀತೆ ಪಾತ್ರ ಮಾಡಿದ ನಾನು ಸಿಲ್ಕ್ ಪಾತ್ರ ಮಾಡಲಾರೆ ಎಂಬ ನಯನತಾರಾ ಮಾತನ್ನು ಅವರ ಅಭಿಮಾನಿಗಳು ಮೆಚ್ಚಿ ಜೈಕಾರ ಹಾಕಿದ್ದಾರೆ. ಆದರೆ ಹಿಂದಿಯಲ್ಲಿ ಆ ಪಾತ್ರ ಮಾಡಿ ಉತ್ತಮ ನಟಿ ರಾಷ್ಟ್ರೀಯ ಪ್ರಶಸ್ತ ಪಡೆದ ವಿದ್ಯಾ ಬಾಲನ್ ಅವರನ್ನು ನೋಡಿದಾಗ ನಯನತಾರಾ ಈ ನಿರ್ಧಾರದಿಂದ ಒಂದೊಳ್ಳೆಯ ಅವಕಾಶ ಮಿಸ್ ಮಾಡಿಕೊಂಡರು ಎನ್ನಿಸದಿರದು. (ಒನ್ ಇಂಡಿಯಾ ಕನ್ನಡ)

English summary
South India fame actress Nayanatara rejects the role of Silk Smita of Dirty Picture movie. She told that after acted in Sita role, it is not good to act in Silk Smitha role. Nayanatara's many her fans welcome this decision. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada