For Quick Alerts
  ALLOW NOTIFICATIONS  
  For Daily Alerts

  ಮತ್ತೆ ಒಂದಾಗಲಿದ್ದಾರಾ ಹಳೆ ಜೋಡಿ ನಯನತಾರಾ-ಪ್ರಭುದೇವ!?

  |

  ನಯನತಾರಾ ಮತ್ತು ಪ್ರಭುದೇವ ಪ್ರೇಮಕತೆ ಭಾರಿ ಚರ್ಚೆಗಳನ್ನು ಹುಟ್ಟುಹಾಕಿತ್ತು. ಮದುವೆಯವರೆಗೂ ಹೋಗಿ ಈ ಜೋಡಿ ಬೇರಾದರು.

  Akshay Kumar only Indian in the top 100 richest celebrities list | Akshay Kumar | Forbes

  ನಂತರ ಈಗ ನಯನತಾರಾ ವಿನೇಶ್ ಎಂಬ ನಿರ್ದೇಶಕನೊಂದಿಗೆ ಪ್ರೇಮದಲ್ಲಿದ್ದು ಇಬ್ಬರು ಶೀಘ್ರದಲ್ಲಿಯೇ ಮದುವೆ ಆಗಲಿದ್ದಾರೆ ಎಂಬ ಸುದ್ದಿ ನಿನ್ನೆಯಷ್ಟೆ ಹೊರಬಿದ್ದಿದೆ.

  'ಮದಕರಿ ನಾಯಕ' ದರ್ಶನ್ ಗೆ ಜೋಡಿಯಾಗ್ತಾರಾ ಲೇಡಿ ಸೂಪರ್ ಸ್ಟಾರ್?'ಮದಕರಿ ನಾಯಕ' ದರ್ಶನ್ ಗೆ ಜೋಡಿಯಾಗ್ತಾರಾ ಲೇಡಿ ಸೂಪರ್ ಸ್ಟಾರ್?

  ಆದರೆ ಈಗ ಮತ್ತೊಂದು ಹೊಸ ಬ್ರೇಕಿಂಗ್ ಬಂದಿದ್ದು, ನಯನತಾರಾ ಮತ್ತು ಪ್ರಭುದೇವಾ ಒಂದಾಗಲಿದ್ದಾರಂತೆ. ಆದರೆ ಅದು ನಿಜಜೀವನದಲ್ಲಲ್ಲ ಬದಲಿಗೆ ಸಿನಿಮಾದಲ್ಲಿ ಒಂದಾಗಲಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ.

  2017 ರಲ್ಲಿ ನಿಂತುಹೋಗಿದ್ದ ಸಿನಿಮಾ

  2017 ರಲ್ಲಿ ನಿಂತುಹೋಗಿದ್ದ ಸಿನಿಮಾ

  2017 ರಲ್ಲಿ 'ಕರಪ್ಪು ರಾಜಾ ವೆಲ್ಲೈ ರಾಣಿ' ಎಂಬ ಸಿನಿಮಾವನ್ನು ಪ್ರಭುದೇವಾ ನಿರ್ದೇಶಿಸಿದ್ದರು, ಅದರಲ್ಲಿ ಸೂರ್ಯ ಮತ್ತು ಕಾರ್ತಿ ಪ್ರಮುಖ ಪಾತ್ರದಲ್ಲಿದ್ದರು. ಆದರೆ ಈ ಸಿನಿಮಾ ಮುಂದುವರೆಯಲಿಲ್ಲ. ಆದರೆ ಈಗ ಮತ್ತೆ ಆ ಸಿನಿಮಾವನ್ನು ಮುಂದುವರೆಸಲಾಗುತ್ತಿದೆಯಂತೆ. ಇದರಲ್ಲಿ ನಯನತಾರಾ ನಾಯಕಿ ಆಗಲಿದ್ದಾರೆ ಎನ್ನಲಾಗುತ್ತಿದೆ.

  ಸ್ಪಷ್ಟಪಡಿಸಿದ ನಿರ್ಮಾಪಕ ಇಶಾರಿ ಗಣೇಶ್

  ಸ್ಪಷ್ಟಪಡಿಸಿದ ನಿರ್ಮಾಪಕ ಇಶಾರಿ ಗಣೇಶ್

  'ಕರಪ್ಪು ರಾಜಾ ವೆಲ್ಲೈ ರಾಣಿ' ಸಿನಿಮಾದ ನಿರ್ಮಾಪಕ ಇಶಾರಿ ಗಣೇಶ್ ಈ ಬಗ್ಗೆ ಮಾತನಾಡಿದ್ದು, 'ಕರಪ್ಪು ರಾಜಾ ವೆಲ್ಲೈ ರಾಣಿ' ಸಿನಿಮಾವನ್ನು ಮುಂದವರೆಸುವುದು ನಿಜ ಆದರೆ ಸಂಪೂರ್ಣ ಹೊಸ ತಂಡದೊಂದಿಗೆ ಸಿನಿಮಾ ಮುಂದುವರೆಸುತ್ತೇನೆ ಎಂದಿದ್ದಾರೆ.

  ದರ್ಬಾರ್ ಸಿನಿಮಾ ಈ ಪೊಲೀಸ್ ಅಧಿಕಾರಿಯ ಜೀವನಕಥೆ!ದರ್ಬಾರ್ ಸಿನಿಮಾ ಈ ಪೊಲೀಸ್ ಅಧಿಕಾರಿಯ ಜೀವನಕಥೆ!

  ಹಳೆ ಜೋಡಿ ಒಟ್ಟಿಗೆ ಸೇರಲಾರರು

  ಹಳೆ ಜೋಡಿ ಒಟ್ಟಿಗೆ ಸೇರಲಾರರು

  ಆ ಮೂಲಕ ಹಳೆ ಜೋಡಿ ನಯನತಾರಾ ಮತ್ತು ಪ್ರಭುದೇವಾ ಒಟ್ಟಿಗೆ ಕೆಲಸ ಮಾಡುತ್ತಾರೆ ಎಂಬ ಗಾಳಿಸುದ್ದಿಗೆ ಬ್ರೇಕ್ ಬಿದ್ದಿದೆ. ಬ್ರೇಕ್ ಅಪ್ ಆದ ಮೇಲೆ ಈ ಇಬ್ಬರೂ ಒಟ್ಟಿಗೆ ಒಂದೇ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಂಡಿಲ್ಲ.

  ವಿಘ್ನೇಶ್ ಶಿವನ್ ಜೊತೆ ಮದುವೆ

  ವಿಘ್ನೇಶ್ ಶಿವನ್ ಜೊತೆ ಮದುವೆ

  ಪ್ರಭುದೇವಾ ಜೊತೆ ಬ್ರೇಕ್ ಅಪ್ ಆದ ನಂತರ ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ಸಖ್ಯ ಬೆಳೆಸಿದ್ದು, ಈ ಜೊಡಿ ಸದ್ಯದಲ್ಲಿಯೇ ದೇವಸ್ಥಾನದಲ್ಲಿ ಮದುವೆ ಸಹ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

  ನಯನಾತಾರ ಸಿನಿ ಜೀವನದಲ್ಲಿ 'ಆ ಸಿನಿಮಾ' ಮಾಡಬಾರದಿತ್ತಂತೆನಯನಾತಾರ ಸಿನಿ ಜೀವನದಲ್ಲಿ 'ಆ ಸಿನಿಮಾ' ಮಾಡಬಾರದಿತ್ತಂತೆ

  English summary
  Rumors spreading that ex lovers Nayanathara and Prabhudeva working in same project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X