For Quick Alerts
  ALLOW NOTIFICATIONS  
  For Daily Alerts

  ಮತ್ತೊಮ್ಮೆ ಚಿರಂಜೀವಿ ಚಿತ್ರದಲ್ಲಿ ನಯನತಾರ ನಟನೆ!

  |

  ಮೆಗಾಸ್ಟಾರ್ ಚಿರಂಜೀವಿ ಮಲಯಾಳಂ ಹಿಟ್ ಸಿನಿಮಾ ಲೂಸಿಫರ್ ರೀಮೇಕ್ ಮಾಡುವುದು ಬಹುತೇಕ ಖಚಿತ. ಪ್ರಸ್ತುತ ಕೊರಟಲಾ ಶಿವ ನಿರ್ದೇಶನದ ಆಚಾರ್ಯ ಸಿನಿಮಾ ಮಾಡುತ್ತಿರುವ ಚಿರಂಜೀವಿ ಸದ್ಯದಲ್ಲೇ ಲೂಸಿಫರ್ ತಂಡ ಸೇರಿಕೊಳ್ಳಲಿದ್ದಾರೆ.

  ಸದ್ಯದ ಮಾಹಿತಿ ಪ್ರಕಾರ ಜನವರಿ ತಿಂಗಳಲ್ಲಿ ಚಿರಂಜೀವಿ ಲೂಸಿಫರ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಆರಂಭದಲ್ಲಿ ಈ ಚಿತ್ರವನ್ನು ಸಾಹೋ ಖ್ಯಾತಿಯ ಸುಜೀತ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು. ಆದ್ರೀಗ, ಮೋಹನ್ ರಾಜು ಡೈರೆಕ್ಟರ್ ಆಗಿ ಆಯ್ಕೆಯಾಗಿದ್ದಾರೆ.

  ಚಿರಂಜೀವಿ ನಟನೆಯ 'ಲೂಸಿಫರ್' ತೆಲುಗು ರಿಮೇಕ್ ಗೆ ಹೊಸ ನಿರ್ದೇಶಕ ಎಂಟ್ರಿಚಿರಂಜೀವಿ ನಟನೆಯ 'ಲೂಸಿಫರ್' ತೆಲುಗು ರಿಮೇಕ್ ಗೆ ಹೊಸ ನಿರ್ದೇಶಕ ಎಂಟ್ರಿ

  ಮೋಹನ್ ಲಾಲ್ ಸೇರಿದಂತೆ ಬಹುದೊಡ್ಡ ತಾರಬಳಗ ಕಾಣಿಸಿಕೊಂಡಿದ್ದ ಲೂಸಿಫರ್ ತೆಲುಗು ವರ್ಷನ್‌ನಲ್ಲಿ ಯಾವೆಲ್ಲ ಕಲಾವಿದರು ನಟಿಸಬಹುದು ಎಂಬ ಕುತೂಹಲ ಹೆಚ್ಚಿದೆ.

  ಮಲಯಾಳಂನಲ್ಲಿ ಮಂಜು ವಾರಿಯರ್ ನಿರ್ವಹಿಸಿದ್ದ ಪಾತ್ರಕ್ಕಾಗಿ ಲೇಡಿ ಸೂಪರ್ ಸ್ಟಾರ್ ನಯನತಾರ ಅವರನ್ನು ಅಪ್ರೋಚ್ ಮಾಡಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಆದ್ರೆ, ನಯನತಾರಾ ಕಡೆಯಿಂದ ಇನ್ನು ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.

  ಒಂದು ವೇಳೆ ಈ ಡೀಲ್ ಓಕೆ ಆದರೆ ಮತ್ತೊಮ್ಮೆ ಚಿರು ಮತ್ತು ನಯನತಾರ ಜೋಡಿಯನ್ನು ತೆರೆಮೇಲೆ ನೋಡಲು ಚಿತ್ರರಸಿಕರು ನಿಜಕ್ಕೂ ಖುಷಿಯಾಗಲಿದ್ದಾರೆ. ಇದಕ್ಕೂ ಮುಂಚೆ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಚಿರು-ನಯನತಾರ ಒಟ್ಟಿಗೆ ನಟಿಸಿದ್ದರು.

  'ಮೆಗಾ' ಅಭಿಮಾನಿಗಳಿಗೆ ಸಿಹಿ ಸುದ್ದಿ: ಕೈಗೂಡಲಿದೆ ಹಲವು ವರ್ಷಗಳ ಯೋಜನೆ'ಮೆಗಾ' ಅಭಿಮಾನಿಗಳಿಗೆ ಸಿಹಿ ಸುದ್ದಿ: ಕೈಗೂಡಲಿದೆ ಹಲವು ವರ್ಷಗಳ ಯೋಜನೆ

  ರಾಜಮೌಳಿ ತಂದೆ ಗರಡಿಯಲ್ಲಿ ತಯಾರಾಗಿದೆ 'ಕಬ್ಜ'ದ ಕಥೆ | Filmibeat Kannada

  2019ರಲ್ಲಿ ತೆರೆಕಂಡಿದ್ದ ಲೂಸಿಫರ್ ಸಿನಿಮಾವನ್ನು ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿದ್ದರು. ಮೋಹನ್ ಲಾಲ್, ವಿವೇಕ್ ಒಬೆರಾಯ್, ಮಂಜು ವಾರಿಯರ್, ಇಂದ್ರಜಿತ್ ಸುಕುಮಾರನ್, ಸಾಯಿ ಕುಮಾರ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಹಲವರು ನಟಿಸಿದ್ದರು.

  English summary
  Lady Superstar Nayanthara might be star opposite Chiranjeevi In Lucifer Remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X