»   » ನಯನತಾರಾ ಸಂಭಾವನೆ ಕೇಳಿ ಬೆಚ್ಚಿ ಬಿದ್ದೀರಾ ಜೋಕೆ.!

ನಯನತಾರಾ ಸಂಭಾವನೆ ಕೇಳಿ ಬೆಚ್ಚಿ ಬಿದ್ದೀರಾ ಜೋಕೆ.!

Posted By:
Subscribe to Filmibeat Kannada

ಕಾಲಿವುಡ್ ಮತ್ತು ಟಾಲಿವುಡ್ ಅಂಗಳದಲ್ಲಿ ಸದಾ ಸುದ್ದಿಯಲ್ಲಿರುವ ನಟಿ ನಯನತಾರ. ಇಷ್ಟು ದಿನ ಪ್ರೀತಿ ಮತ್ತು ಮದುವೆ ವಿಚಾರದಲ್ಲಿ ಮಾತ್ರ ಸದ್ದು ಮಾಡುತ್ತಿದ್ದ ನಯನತಾರ ಟಾಲಿವುಡ್ ಅಂಗಳದಲ್ಲಿ ಸಂಭಾವನೆ ವಿಷಯದಲ್ಲಿ ಬ್ರೇಕಿಂಗ್ ನ್ಯೂಸ್ ಮಾಡಿದ್ದಾರೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮೆಗಾ ಸ್ಟಾರ್ ಚಿರಂಜೀವಿ ತಮ್ಮ 150ನೇ ಚಿತ್ರಕ್ಕೆ ಭಾರಿ ಸಿದ್ಧತೆ ನಡೆಸುತ್ತಿದ್ದಾರೆ. ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ 'ಆಟೋ ಜಾನಿ' ಅಂತ ಟೈಟಲ್ ಕೂಡ ಫಿಕ್ಸ್ ಮಾಡಲಾಗಿದೆ.

ಆದ್ರೆ, ಚಿರಂಜೀವಿಗೆ ಜೋಡಿಯಾಗುವ ನಾಯಕಿ ಯಾರು? ಈ ಪ್ರಶ್ನೆಗೆ ಪುರಿ ಜಗನ್ನಾಥ್ ಕಂಡುಕೊಂಡಿರುವ ಉತ್ತರ ಟಾಲಿವುಡ್ ನಟಿ ಅಂಜಲಿ, ನಯನತಾರ ಅಥವಾ ಅನುಷ್ಕಾ ಶೆಟ್ಟಿ. ಮೂವರು ನಾಯಕಿಯರನ್ನ ಪುರಿ ಜಗನ್ನಾಥ್ ಮತ್ತು ಚಿತ್ರತಂಡ ಸಂಪರ್ಕಿಸಿದೆ.

nayantara

ಅದ್ರಲ್ಲಿ ಸಿಕ್ಕ ಗೋಲ್ಡನ್ ಚಾನ್ಸ್ ನ ಸದುಪಯೋಗ ಪಡಿಸಿಕೊಳ್ಳುವುದಕ್ಕೆ ನಟಿ ನಯನತಾರ ಬೇಡಿಕೆ ಇಟ್ಟ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 2.5 ಕೋಟಿ.! ಇಷ್ಟು ದುಬಾರಿ ಮೊತ್ತವನ್ನ ಕೇಳಿ ಚಿತ್ರತಂಡ ನಟಿಯರಾದ ಅಂಜಲಿ ಮತ್ತು ಅನುಷ್ಕಾ ಶೆಟ್ಟಿ ಜೊತೆ ಮಾತುಕತೆ ನಡೆಸಿದೆ. [ಅತಿ ಹೆಚ್ಚು ಸಂಭಾವನೆ ಎಣಿಸುವ ದಕ್ಷಿಣದ ನಟಿಯರು]

ಆದ್ರೆ, ಅನುಷ್ಕಾ ಶೆಟ್ಟಿ 'ಸೈಜ್ ಝೀರೋ' ಚಿತ್ರದಲ್ಲಿ ಬಿಜಿಯಿದ್ದಾರೆ. ಇನ್ನೂ ಅಂಜಲಿ ಕೂಡ 'ಡಿಕ್ಟೇಟರ್' ಚಿತ್ರಕ್ಕೆ ಕಮಿಟ್ ಆಗಿದ್ದಾರೆ. ಹೀಗಿರುವುದರಿಂದ ನಯನತಾರ ಕೇಳಿದಷ್ಟು ಸಂಭಾವನೆ ಕೊಟ್ಟು ಫೈನಲ್ ಮಾಡುವುದಕ್ಕೆ ಪುರಿ ಜಗನ್ನಾಥ್ ನಿರ್ಧರಿಸಿದ್ದಾರೆ ಅಂತ ಗುಲ್ಲೆದ್ದಿದೆ. ['ದೇವರನಾಡ'ಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಬೀಡು ಬಿಟ್ಟಿರುವುದೇಕೆ?]

ಈ ನಡುವೆ 'ಆಟೋ ಜಾನಿ' ಚಿತ್ರಕ್ಕೆ ಅಂಜಲಿ ಫಿಕ್ಸ್ ಆಗಿದ್ದಾರೆ ಅಂತ ತೆಲುಗು ಮಾಧ್ಯಮಗಳು ಸುದ್ದಿ ಮಾಡಿವೆ. ಇಬ್ಬರಲ್ಲಿ ಯಾರು ಚಿರಂಜೀವಿಗೆ ಜೋಡಿ ಅಂತ ಅಧಿಕೃತ ಮಾಹಿತಿ ಹೊರ ಬೀಳಬೇಕು. ಇದರ ನಡುವೆ ನಯನತಾರ ಸಂಭಾವನೆ ಕೇಳಿ ಬಿಚ್ಚಿಬೀಳಬೇಡಿ. ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಆಕೆಗೆ ಅಷ್ಟು ಡಿಮ್ಯಾಂಡ್ ಇದೆ. (ಏಜೆನ್ಸೀಸ್)

English summary
Nayantara is on cards to play lead opposite Chiranjeevi in his 150th film, tentatively titled 'Auto Jaani'. It is reported that Nayantara has demanded Rs.2.5 crore as remuneration. Will the producer accept or consider Actress Anjali and Anushka Shetty is question as of now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada