For Quick Alerts
  ALLOW NOTIFICATIONS  
  For Daily Alerts

  ಬ್ರೇಕಿಂಗ್ ನ್ಯೂಸ್; ಬಿಕಿನಿಗೆ ನಯನತಾರಾ ಓಕೆ

  By ಅನಂತರಾಮು, ಹೈದರಾಬಾದ್
  |

  ಕಳೆದ ಕೆಲ ಸಮಯದಿಂದ ಸೈಲೆಂಟಾಗಿದ್ದ ದಕ್ಷಿಣದ ತಾರೆ ನಯನತಾರಾ ಈಗ ಮತ್ತೆ ವಯಲೆಂಟ್ ಸುದ್ದಿಯೊಂದಿಗೆ ವಾಪಸ್ಸಾಗಿದ್ದಾರೆ. ಇಷ್ಟು ದಿನ ಅವರು ಬಿಕಿನಿ ಸನ್ನಿವೇಶಗಳಿಗೆ ನೋ ಹೇಳುತ್ತಲೇ ಬರುತ್ತಿದ್ದರು. ಅವರಿಗೆ ಬಂದ ಎಲ್ಲಾ ಆಫರ್ ಗಳಲ್ಲೂ ಬಿಕಿನಿ ಸನ್ನಿವೇಶ ಇದ್ದೇ ಇರುತ್ತಿತ್ತು.

  ಆದರೂ ಬಿಂಕ ಬಿಡದೆ ಬಿಕಿನಿ ಆಫರ್ ಗಳನ್ನು ತಿರಸ್ಕರಿಸುತ್ತಿದ್ದರು. ಕಡೆಗೂ ಅವರು ಮನಸ್ಸು ಬದಲಾಯಿಸಿದ್ದು ಬಿಕಿನಿ ತೊಡಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಅವರು ಬಿಕಿನಿ ಪಾತ್ರಕ್ಕಾಗಿ ಒಪ್ಪಿಕೊಂಡಿರುವುದು ತೆಲುಗಿನ ಚಿತ್ರ 'ಲವ್ ಸ್ಟೋರಿ' ಎಂಬ ಚಿತ್ರ. ಈ ಚಿತ್ರದ ನಾಯಕ ನಟ 'ಮನ್ಮಥುಡು' ಖ್ಯಾತಿಯ ನಾಗಾರ್ಜುನ.

  ಮೊದಲೇ ಮನ್ಮಥ ನಟ. ಜೊತೆಗೆ ಬಿಕಿನಿ ಸನ್ನಿವೇಶಗಳಿದ್ದರಂತೂ ಪಡ್ಡೆಗಳಿಗೆ ಮೈಯಲ್ಲಾ ಪುಳಕ ತಪ್ಪಿದ್ದಲ್ಲ. ತಮಿಳಿನ 'ಬಿಲ್ಲಾ' (2007) ಚಿತ್ರದಲ್ಲೂ ಕಪ್ಪು ಬಿಕಿನಿಯಲ್ಲಿ ನಯನತಾರಾ ಎಲ್ಲರ ಗಮನಸೆಳೆದಿದ್ದರು. ಈಗ ಅದ್ಯಾವ ಬಣ್ಣದ ಬಿಕಿನಿ ತೊಡುತ್ತಾರೋ ಎಂಬ ಕುತೂಹಲ ಇದ್ದೇ ಇದೆ.

  ತೆಲುಗಿನ ಲವ್ ಸ್ಟೋರಿ ಚಿತ್ರದಲ್ಲಿ ಬೀಚ್ ಸನ್ನಿವೇಶಗಳಿದ್ದು ಬ್ಯಾಂಕಾಕ್ ನ ರಮಣೀಯ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗುತ್ತದಂತೆ. ಚಳಿಗಾಲ ಮುಗಿಯುವಷ್ಟರಲ್ಲೇ ನಯನತಾರಾ ಬಿಕಿನಿ ಚಿತ್ರ ಬಂದರೆ ಒಂದಷ್ಟು ಮೈ ಬೆಚ್ಚಗೆ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಪಡ್ಡೆ ಹುಡುಗರಿದ್ದಾರೆ.

  English summary
  Sizzling actress Nayantara sporting a black bikini in Ajith Kumar's hit Tamil movie Billa in 2007. But in recent years, the popular South Indian star has rejected all the projects that demanded her to wear revealing costumes. The latest buzz in the T-Town is that Nayan is likely to don a bikini in Akkineni Nagarjuna's forthcoming movie Love Story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X