ಜೂನ್ 9ಕ್ಕೆ ನಯನತಾರ ವಿಗ್ನೇಶ್ ಮದುವೆ ಫಿಕ್ಸ್, ದೇವಸ್ಥಾನದಲ್ಲಿ ವಿವಾಹ!

ಸೌತ್ ಸಿನಿಮಾರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ, ನಿರ್ಮಾಪಕ ವಿಗ್ನೇಶ್ ಶಿವನ್ ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಇವರ ಪ್ರೀತಿ ವಿಚಾರ ಗುಟ್ಟಾಗಿ ಉಳಿದಿಲ್ಲ. ಈ ಜೋಡಿ ಸದಾ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತದೆ. ಈ ಇಬ್ಬರು ಸದ್ಯ ಸೌತ್‌ನ ನೆಚ್ಚಿನ ಜೋಡಿ ಎನಿಸಿಕೊಂಡಿದ್ದಾರೆ.

ಹಲವು ದಿನಗಳಿಂದ ಈ ಜೋಡಿಯ ಮದುವೆ ಸುದ್ದಿಯನ್ನು ಕೇಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಆಗಾಗ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾ ಇರುತ್ತೆ. ಆದರೆ ಇಲ್ಲಿ ತನಕ ತಮ್ಮ ಮದುವೆ ಬಗ್ಗೆ ಒಂದು ಸುಳಿವನ್ನು ಬಿಟ್ಟ ಕೊಟ್ಟಿಲ್ಲ. ಹಾಗಾಗಿ ಈ ಜೋಡಿ ಮದುವೆ ಆಗುದಿಲ್ಲ ಹೀಗೆ ಜೊತೆಯಲ್ಲೇ ಇರುತ್ತಾರಾ ಎನ್ನುವ ಸುದ್ದಿಗಳು ಕೂಡ ಹಬ್ಬಿದ್ದವು.

ಇನ್ನು ಹಲವು ಬಾರಿ ನಯನತಾರ, ವಿಗ್ನೇಶ್ ಮದುವೆ ಸುದ್ದಿ ಸದ್ದು ಮಾಡಿದೆ. ಆದರೆ ಅದ್ಯಾವುದು ನಿಜವಾಗಿಲ್ಲ. ಈಗ ಮತ್ತೆ ಇವರ ಮದುವೆ ಸುದ್ದಿ ಮುಂಚೂಣಿಯಲ್ಲಿ ಇದೆ. ಮದುವೆ ಯಾವಾಗ, ಎಲ್ಲಿ ಎನ್ನುವ ಬಗ್ಗೆ ಹೊಸ ಸಮಾಚಾರ ಬಂದಿದೆ. ಈ ಬಗ್ಗೆ ಮುಂದೆ ಓದಿ.

ಜೂನ್ 09 ನಯನತಾರ, ವಿಗ್ನೇಶ್ ಮದುವೆ!

ನಯನತಾರಾ ಮತ್ತು ವಿಗ್ನೇಶ್ ಶಿವನ್ ಮದುವೆ ಹೊಸ ದಿನಾಂಕದ ನಿಗದಿ ಆಗಿದೆ. ಅದು ಹೆಚ್ಚು ದಿನ ದೂರ ಇಲ್ಲ. ಮುಂದಿನ ತಿಂಗಳೇ ಈ ಜೋಡಿ ಮದುವೆ ಆಗಲು ಸಜ್ಜಾಗಿದೆ. ಮುಂದಿನ ತಿಂಗಳು ಮದುವೆಯಾಗಲು ಸಿದ್ಧರಾಗಿದ್ದಾರೆ. ಮೂಲಗಳ ಪ್ರಕಾರ ಜೂನ್ 9, 2022 ಈ ಜೋಡಿ ಮದುವೆ ಆಗಲಿದೆ. ಈಗಾಗಲೇ ಮದುವೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ತಿರುಪತಿ ದೇವಸ್ಥಾನದಲ್ಲಿ ನಯನತಾರ ಮದುವೆ!

ಇನ್ನು ನಯನತಾರ ಮತ್ತು ವಿಗ್ನೇಶ್ ಎಲ್ಲಿ ಮದುವೆ ಆಗುತ್ತಾರೆ ಎನ್ನುವ ಬಗ್ಗೆಯೂ ವರದಿ ಆಗಿದೆ. ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿವಾಹವಾಗಲು ನಿರ್ಧರಿಸಿದ್ದಾರಂತೆ ಈ ಜೋಡಿ. ಈ ಮದುವೆ ಸಮಾರಂಭದಲ್ಲಿ ಅವರ ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆಯಂತೆ. ಇಷ್ಟೆಲ್ಲಾ ವಿಚಾರಗಳು ಹರಿದಾಡುತ್ತಾ ಇದ್ದರು ಈ ಜೋಡಿ ಮಾತ್ರ ಮದುವೆ ಸುದ್ದಿಯನ್ನು ಅಧಿಕೃತಗೊಳಿಸಿಲ್ಲ.

ದೇವಸ್ಥಾನಗಳಗೆ ಭೇಟಿ ನೀಡುತ್ತಿರುವ ಜೋಡಿ!

ಈ ಪ್ರೇಮ ಪಕ್ಷಿಗಳು ಇತ್ತೀಚೆಗೆ ಶಿರಡಿಯಲ್ಲಿ ಕಾಣಿಸಿಕೊಂಡಿದ್ದರು. ಸಾಯಿಬಾಬಾ ಆಶೀರ್ವಾದ ಪಡೆಯಲು ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ತಿರುಪತಿ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ದೇವಸ್ಥಾನದ ಮುಂದೆ ನಿಂತು ಫೊಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಲ್ಪೋಡ್ ಮಾಡಿದ್ದಾರೆ. ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ದೇವರ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ವಿಗ್ನೇಶ್ ನಿರ್ದೇಶನದಲ್ಲಿ ನಯನತಾರ ಅಭಿನಯ!

ವಿಜಯ್ ಸೇತುಪತಿ ಜೊತೆಗೆ 'ಕಾತುವಾಕುಲ ರೆಂಡು ಕಾದಲ್‌' ಚಿತ್ರದಲ್ಲಿ ನಯನತಾರ ಕಾಣಿಸಿಕೊಂಡಿದ್ದಾರೆ. ವಿಗ್ನೇಶ್ ಶಿವನ್ ನಿರ್ದೇಶನ ಈ ಚಿತ್ರಕ್ಕಿದೆ. ನಯನತಾರ ಜೊತೆಗೆ ಸಮಂತಾ ರುತ್ ಪ್ರಭು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಈ ಚಿತ್ರದ ಬಳಿಕ ಅಟ್ಲಿ ಮುಂದಿನ ನಿರ್ದೇಶನದಲ್ಲಿ ಶಾರುಖ್ ಖಾನ್ ಜೊತೆಗೆ ನಾಯಕಿಯಾಗಿ ನಯನತಾರಾ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರ ಮದುವೆ ಸುದ್ದಿ ಅಧಿಕೃತ ಮಾಡುವ ಸಾಧ್ಯತೆ ಕೂಡ ಇದೆ.

More from Filmibeat

English summary
Nayanthara And Vignesh Shivan Marriage Fixed On June 9 2022 In Tirupathi, Know More Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X