ನಯನತಾರಾ ಹಿಂದೆ ಸುತ್ತಿದ ಆ ಇಬ್ಬರು ನಟರಿಗೆ ನಟಿ ಸಿಗಲಿಲ್ಲವೇಕೆ?
ನಟಿ ನಯನತಾರಾ ಮತ್ತು ವಿಘ್ನೇಶ್ ಮದುವೆ ನೆರವೇರಿದೆ. ಅಪ್ತರ ಸಮ್ಮುಖದಲ್ಲಿ ಈ ಜೋಡಿ ಸಂಪ್ರದಾಯ ಬದ್ಧವಾಗಿ ಮದುವೆ ಮಾಡಿಕೊಂಡಿದೆ. ಇಂದು (ಜೂನ್ 9)ರಂದು ನಯನತಾರಾ ಮದುವೆ ಅದ್ಧೂರಿಯಾಗಿ ನಡೆದಿದೆ. ಸಾಕಷ್ಟು ಸಿನಿಮಾ ಕಲಾವಿದರು ಇವರ ಮದುವೆಯಲ್ಲಿ ಭಾಗಿ ಆಗಿದ್ದಾರೆ.
ನಯನತಾರಾ ಸೌತ್ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಅಂತಲೇ ಹೆಸರು ಮಾಡಿದಾಕೆ. ನಯನತಾರಾ ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಹೊರ ಬರುತ್ತಿದ್ದ ಹಾಗೆ, ಆಕೆಯ ಹಳೆಯ ಲವ್ ಸ್ಟೋರಿಗಳು ಸದ್ದು ಮಾಡುತ್ತಿದೆ. ನಯನತಾರಾ ಯಾವೆಲ್ಲ ನಟರ ಜೊತೆಗೆ ಕೇಳಿಬಂದಿತ್ತು ಎನ್ನುವ ಬಗ್ಗೆ ಮತ್ತೆ ಗುಸು, ಗುಸು ಹಬ್ಬಿದೆ.
ಹೌದು, ನಟಿ ನಯನತಾರಾ ತಮ್ಮ ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ವಿಚಾರಗಳಿಗೆ ಹೆಚ್ಚಾಗಿ ಸುದ್ದಿ ಆಗಿದ್ದಾರೆ. ಅದರಲ್ಲೂ ನಯನತಾರಾ, ಡೇಟಿಂಗ್, ಲವ್ ವಿಚಾರಕ್ಕೆ ಹಲವು ಬಾರಿ ಹೆಡ್ ಲೈನ್ ಆಗಿದ್ದಾರೆ. ನಯನತಾರಾ ಹಿಂದೆ ಸುತ್ತಿದ್ದ ಆ ನಟರು ಯಾರೆಂಬುದನ್ನು ಮುಂದೆ ಓದಿ...

ಸಿಂಬು ಜೊತೆಗೆ ನಯನತಾರಾ ಹೆಸರು!
ನಟಿ ನಯನತಾರಾ ತಮ್ಮ ಸಿನಿಮಾ ವೃತ್ತಿ ಜೀವನದ ಆರಂಭದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು ನಟ ಸಿಂಬು ಜೊತೆಗೆ. ಸಿಂಬು ಜೊತೆಗೆ ಮೊದಲು ನಯನತಾರಾ ಹೆಸರು ಕೇಳಿ ಬಂತು. 2006ರಲ್ಲಿ ಈ ಜೋಡಿ ಡೇಟಿಂಗ್ ಮಾಡುತ್ತಿರುವ ಬಗ್ಗೆ ಸುದ್ದಿ ಹಬ್ಬಿತ್ತು. 'ವಲ್ಲವನ್' ಚಿತ್ರದ ವೇಳೆ ಇವರಿಗೆ ಪ್ರೇಮಾಂಕುರವಾಗಿಯ್ತು ಎನ್ನಲಾಗಿದೆ. ಆದರೆ ಈ ಜೋಡಿ ಹೆಚ್ಚು ದಿನಗಳ ಕಾಲ ಜೊತೆಗೆ ಇರಲಿಲ್ಲ. ಕೆಲವೇ ತಿಂಗಳ ಬಳಿಕ ಬ್ರೇಕಪ್ ಮಾಡಿಕೊಂಡು ದೂರಾದರು.

ನಯನತಾರಾ ಜೊತೆ ಪ್ರಭುದೇವ ಹೆಸರು ತಳುಕು!
ಸಿಂಬು ಬಳಿಕ ನಟಿ ನಯನತಾರಾ ಹೆಸರು ಪ್ರಭುದೇವ ಜೊತೆಗೆ ಕೇಳಿ ಬಂದಿತ್ತು. ಈ ಜೋಡಿ ಸುಮಾರು ವರ್ಷಗಳ ಕಾಲ ಡೇಟಿಂಗ್ ಮಾಡಿರುವುದಾಗಿ ವರದಿಗಳು ಬಂದಿವೆ. ಇನ್ನು ಇವರ ಪ್ರೇಮ್ ಕಹಾನಿ ಎಷ್ಟರ ಮಟ್ಟಿಗೆ ಹಬ್ಬಿತ್ತು ಎಂದರೆ, 2009ರಲ್ಲಿ ಈ ಜೋಡಿ ಮದುವೆ ಆಗುತ್ತದೆ ಎನ್ನುವ ಪುಕಾರು ಕೂಡ ಹಬ್ಬಿತ್ತು. ಆದರೆ ಇವರು ಕೂಡ ತಮ್ಮ ಪ್ರೀತಿಯನ್ನು ಬ್ರೇಕಪ್ ಮಾಡಿಕೊಂಡು ಬೇರೆ ಆದರು.

ನಯನತಾರಾಗೆ ವಿಘ್ನೇಶ್ ಸಿಕ್ಕಿದ್ದು 2015ರಲ್ಲಿ!
ಪ್ರಭುದೇವ ಇಂದ ನಯನತಾರಾ ದೂರಾದ ಬಳಿಕ, ಆಕೆಯ ಹೆಸರು ಕೇಳಿ ಬಂದಿದ್ದು ನಿರ್ದೇಶಕ, ನಿರ್ಮಾಪಕ ವಿಘ್ನೇಶ್ ಶಿವನ್ ಜೊತೆಗೆ. ವಿಘ್ನೇಶ್ ಶಿವನ್ ಜೊತೆಗೆ ನಯನತಾರಾ ಹೆಸರು ಕೇಳಿ ಬಂದಿದ್ದು, 2015ರಲ್ಲಿ. 'ನಾನುಂ ರೌಡಿದಾನ್' ಚಿತ್ರದ ಶೂಟಿಂಗ್ ವೇಳೆ ಈ ಜೋಡಿ ನಡುವೆ ಪ್ರೇಮಾಂಕುರವಾಗಿದೆ. ಬಳಿಕ ಇಷ್ಟು ವರ್ಷ ಡೇಟಿಂಗ್ ಅಂತ ಸುತ್ತಾಡಿ ಈಗ ಈ ಜೋಡಿ ಮದುವೆ ಆಗುತ್ತಿದೆ.

ನಯನತಾರೆಗೆ ವಿಘ್ನೇಶ್ ಪರ್ಫೆಕ್ಟ್!
ನಯನತಾರಾ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಹಬ್ಬಿವೆ, ಸಿನಿಮಾರಂಗ ಅಂದ್ಮೇಲೆ ಈ ಗಾಸಿಪ್‌ಗಳು ಸಾಮಾನ್ಯ. ಆದರೆ ನಯನತಾರಾಗೆ ಸಿಕ್ಕ ಪರ್ಫೆಕ್ಟ್ ಜೋಡಿ ಎಂದರೆ ವಿಘ್ನೇಶ್ ಶಿವನ್. ಹಾಗಾಗಿ ನಯನತಾರಾ ವಿಘ್ನೇಶ್ ಸಪ್ತಪದಿ ತುಳಿದು ಸತಿ, ಪತಿಯಾಗಿದ್ದಾರೆ. ಬಹುಶಃ ಲೇಡಿ ಸೂಪರ್ ಸ್ಟಾರ್‌ಗೆ ತಕ್ಕನಾದ ವರ ಎಂದರೆ ವಿಘ್ನೇಶ್ ಅನಿಸುತ್ತೆ. ಹಾಗಾಗಿ ಈ ಜೋಡಿ ಹಲವು ವರ್ಷಗಳಿಂದ ಜೊತೆಯಲ್ಲಿ ಇದ್ದು, ಈಗ ಮದುವೆ ಆಗಿದ್ದಾರೆ.


Click it and Unblock the Notifications











