ಸಂಜಯ್ ಲೀಲಾ ಬನ್ಸಾಲಿ ಹೊಸ ಸಿನಿಮಾದಲ್ಲಿ ರಣವೀರ್ ಸಿಂಗ್, ಆಲಿಯಾ ಭಟ್ ಜೊತೆಗೆ ನಯನತಾರಾ!?

ಬಾಲಿವುಡ್‌ನ ಪ್ರಮುಖ ನಿರ್ದೇಶಕರಲ್ಲಿ ಸಂಜಯ್ ಲೀಲಾ ಬನ್ಸಾಲಿ ಕೂಡ ಒಬ್ಬರು. ಅವರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಬೈಜು ಬಾವ್ರಾ ಪ್ರಮುಖವಾದದ್ದು. ಇದಕ್ಕೆ ನಮ್ಮ ದಕ್ಷಿಣ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಸೇರಿಕೊಳ್ಳಲಿದ್ದಾರೆ ಎಂಬ ವದಂತಿ ಸಿನಿರಂಗದಲ್ಲಿ ಹರಿದಾಡುತ್ತಿದೆ. ಹಾಗಾದರೆ ಏನಿದು ಎಂಬುದನ್ನು ನೋಡೋಣ.

ಸಂಜಯ್ ಲೀಲಾ ಬನ್ಸಾಲಿ ಅವರ ಮಹಾತ್ವಾಕಾಂಕ್ಷೆಯ ಸಿನಿಮಾಗಳಲ್ಲಿ ಬೈಜು ಬಾವ್ರಾ ಕೂಡ ಒಂದು ಎನ್ನಬಹುದು. ಈ ಚಿತ್ರದ ಕಾಸ್ಟಿಂಗ್ ಬಗ್ಗೆ ಹಲವಾರು ವರದಿಗಳು ಬರುತ್ತಲೇ ಇವೆ. ಸಿನಿಮಾದಲ್ಲಿ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಈಗ ಹೊಸ ಮಾಹಿತಿ ಪ್ರಕಾರ ನಟಿ ನಯನತಾರಾ ಕೂಡ ಈ ಚಿತ್ರದಲ್ಲಿ ಮುಖ್ಯಪಾತ್ರವಾಗಲಿದ್ದಾರೆ.

baiju-bawra

ಜವಾನ್ ಬಳಿಕ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ನಯನತಾರಾ?

ಲೇಡಿ ಸೂಪರ್‌ಸ್ಟಾರ್ ನಯನತಾರಾ ಇತ್ತೀಚೆಗಿನ ಬ್ಲಾಕ್‌ಬಸ್ಟರ್ ಜವಾನ್ ಮೂಲಕ ಬಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ. ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅಭಿನಯದ ಜವಾನ್, ಹಿಂದಿ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಮಾಡಿದೆ. ನಯನತಾರಾ ಸಿನಿಮಾದಲ್ಲಿ ನರ್ಮದಾ ರೈ ಎಂಬ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜವಾನ್ ಯಶಸ್ಸಿನ ಖುಷಿಯಲ್ಲಿರುವ ನಯನತಾರಾ ಈಗ ಬಾಲಿವುಡ್‌ನಲ್ಲಿ ತನ್ನ ಎರಡನೇ ಸಿನಿಮಾಗಾಗಿ ಈಗಾಗಲೇ ಮಾತುಕತೆ ನಡೆಸುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾದ ಇತ್ತೀಚಿನ ವರದಿಗಳು ಉಲ್ಲೇಖಿಸಿವೆ. ವರದಿಗಳನ್ನು ಸಂಜಯ್ ಲೀಲಾ ಬನ್ಸಾಲಿ ಅವರ ಬೈಜು ಬಾವ್ರಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ.

baiju-bawra

ಬೈಜು ಬಾವ್ರಾ ಚಿತ್ರದಲ್ಲಿ ರಣವೀರ್ ಸಿಂಗ್, ಆಲಿಯಾ ಭಟ್ ಜೊತೆಗೆ ನಯನತಾರಾ!

ಟೈಮ್ಸ್ ಆಫ್ ಇಂಡಿಯಾದ ವರದಿಗಳ ಪ್ರಕಾರ, ಬೈಜು ಬಾವ್ರಾ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲು ನಯನತಾರಾ ಅವರನ್ನು ನಿರ್ದೇಶಕರು ಈಗಾಗಲೇ ಸಂಪರ್ಕಿಸಿದ್ದಾರೆ. ಸಿನಿಮಾದಲ್ಲಿ ರಾಕಿ ಓರ್ ರಾಣಿ ಕಿ ಪ್ರೇಮ್ ಕಹಾನಿ ಮೂಲಕ ಇನ್ನೂ ಜನರಲ್ಲಿ ಕಿಚ್ಚು ಹಚ್ಚಿರುವ ಜೋಡಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಬೈಜು ಬಾವ್ರಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಹಾಗಂತ ಸಿನಿಮಾದಲ್ಲಿ ನಾಯಕಿಯಲ್ಲ. ನಾಯಕಿಯಾಗಿ ಆಲಿಯಾ ಭಟ್ ಇರಲಿದ್ದಾರೆ. ಚಿತ್ರಕ್ಕೆ ನಯನತಾರಾ ಇನ್ನು ಸಹಿ ಮಾಡಿಲ್ಲ ಎನ್ನಲಾಗುತ್ತಿದೆ. ಈಗಾಗಲೇ ಕಳೆದ ಮಾರ್ಚ್ 2023 ರಲ್ಲಿ ನಯನತಾರಾ ಮತ್ತು ಅವರ ಪತಿ, ನಿರ್ದೇಶಕ ವಿಘ್ನೇಶ್ ಶಿವನ್, ಸಂಜಯ್ ಲೀಲಾ ಬನ್ಸಾಲಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೇ ಮೂವರು ಘಟಾನುಘಟಿ ಕಲಾವಿದರನ್ನು ಒಂದೇ ಸಿನಿಮಾದಲ್ಲಿ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.

ಸಂಜಯ್ ಲೀಲಾ ಬನ್ಸಾಲಿಯ ಬೈಜು ಬಾವ್ರಾ

1950 ರ ದಶಕದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರ ಜೀವನದ ಸುತ್ತ ಸುತ್ತುವ ಕತೆ. ವಿಜಯ್ ಭಟ್ ನಿರ್ದೇಶಿಸಿದ 1952 ರಲ್ಲಿ ಬಿಡುಗಡೆಯಾದ ಬೈಜು ಬಾವ್ರಾ ಸೂಪರ್ ಹಿಟ್ ಸಿನಿಮಾ. ಪ್ರಕಾಶ್ ಪಿಕ್ಚರ್ಸ್ ನಿರ್ಮಿಸಿದ್ದ ಸಿನಿಮಾಗೆ ರಾಮಚಂದ್ರ ಠಾಕೂರ್ ಅವರ ಕಥೆ ಮತ್ತು ಜಿಯಾ ಸರಹದಿ ಅವರ ಸಂಭಾಷಣೆಯಿತ್ತು. ಈಗ ಇದೇ ಹೆಸರಿನ ಸಿನಿಮಾದಲ್ಲಿ ನಟ ರಣವೀರ್ ಸಿಂಗ್ ಬೈಜು ಬಾವ್ರಾ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾ 2024ರಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.

More from Filmibeat

English summary
Nayanthara to join Ranveer Singh, Alia Bhatt and Sanjay Leela Bhansali’s Baiju Bawra?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X