Nayanthara: ಬಿಕಿನಿ ತೊಡಲು ₹10 ಕೋಟಿ? ಕಾಲಿವುಡ್ ಶಾಕ್!

By ಫಿಲ್ಮಿಬೀಟ್ ಡೆಸ್ಕ್

ಲೇಡಿ ಸೂಪರ್ ಸ್ಟಾರ್ ನಯನತಾರ ಕುರಿತು ಕ್ರೇಜಿ ನ್ಯೂಸ್‌ವೊಂದು ಕಾಲಿವುಡ್‌ನಲ್ಲಿ ಚಕ್ಕರ್ ಹೊಡೀತಿದೆ. ಇದನ್ನು ಕೇಳಿ ಆಕೆಯ ಅಭಿಮಾನಿಗಳು ಶಾಕ್ ಆಗಿದ್ದಾರೆ. ಮದುವೆ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಯನತಾರ ಬಾಲಿವುಡ್‌ಗೂ ಎಂಟ್ರಿ ಕೊಡ್ತಿದ್ದಾರೆ. ಅಟ್ಲಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಜವಾನ್' ಚಿತ್ರದಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಜೋಡಿಯಾಗಿ ನಟಿಸುತ್ತಾರೆ.

'ಇರೈವನ್' ಎನ್ನುವ ಮತ್ತೊಂದು ಚಿತ್ರದಲ್ಲೂ ನಯನತಾರ ನಾಯಕಿಯಾಗಿ ನಟಿಸುತ್ತಿದ್ದಾರೆ. ಮದುವೆಯಾದ ಕೆಲವೇ ತಿಂಗಳಲ್ಲಿ ಸಾರೋಗಸಿ ವಿಧಾನದಲ್ಲಿ ನಯನ್- ವಿಘ್ನೇಶ್ ದಂಪತಿ ಅವಳಿ ಮಕ್ಕಳನ್ನು ದತ್ತು ಪಡೆದಿದ್ದರು. ಮಕ್ಕಳ ಲಾಲನೆ ಪಾಲನೆ ಜೊತೆ ಜೊತೆಗೆ ಇಬ್ಬರು ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಯನತಾರ ನಟನೆಯ 'ಜವಾನ್' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿದೆ. ಜೂನ್‌ನಲ್ಲಿ ರಿಲೀಸ್ ಆಗಬೇಕಿರುವ ಸಿನಿಮಾ 4 ತಿಂಗಳು ತಡವಾಗಿ ಪ್ರೇಕ್ಷಕರ ಮುಂದೆ ಬರುತ್ತೆ ಎನ್ನಲಾಗ್ತಿದೆ.

Nayanthara will be seen sporting a bikini in her forthcoming film Jawan?

'ಜವಾನ್' ಚಿತ್ರದಲ್ಲಿ ನಯನತಾರ ಬಿಕಿನಿ ತೊಡಲಿದ್ದಾರೆ ಎನ್ನುವ ಗುಸುಗುಸು ಕಾಲಿವುಡ್‌ನಲ್ಲಿ ಶುರುವಾಗಿದೆ. ಈ ಚಿತ್ರಕ್ಕಾಗಿ ನಯನ್ ಬರೋಬ್ಬರಿ 10 ಕೋಟಿ ರೂ. ಸಂಭಾವನೆ ಪಡೀತಿದ್ದಾರಂತೆ. ಸಾಮಾನ್ಯವಾಗಿ ಸೌತ್ ಸಿನಿಮಾಗಳಿಗೆ 4ರಿಂದ 5 ಕೋಟಿ ರೂ. ಚಾರ್ಜ್ ಮಾಡುವ ಚೆಲುವೆ ಬಾಲಿವುಡ್ ಚಿತ್ರಕ್ಕೆ ಅದರ ಎರಡರಷ್ಟು ಬ್ಯಾಗಿಗೆ ಇಳಿಸಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ನಯನ್ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದರು. ನಂತರ ಸ್ಕಿನ್‌ ಶೋಗೆ ಒಪ್ಪಲಿಲ್ಲ.

Nayanthara will be seen sporting a bikini in her forthcoming film Jawan?

'ಜವಾನ್' ಚಿತ್ರಕ್ಕಾಗಿ ನಯನತಾರ ಟೂ ಪೀಸ್ ಬಿಕಿನಿ ತೊಡಲಿದ್ದಾರೆ ಎನ್ನುವ ನ್ಯೂಸ್ ವೈರಲ್ ಆಗಿದೆ. ಈ ಹಿಂದೆ ಅಜಿತ್ ಜೊತೆ ನಟಿಸಿದ 'ಬಿಲ್ಲಾ' ಚಿತ್ರದಲ್ಲಿ ಬಿಕಿನಿ ತೊಟ್ಟು ಸೆಕ್ಸಿಯಾಗಿ ನಯನ್ ದರ್ಶನ ಕೊಟ್ಟಿದ್ದರು. ಸಿಂಬು ಜೊತೆ 'ವಲ್ಲಭ' ಚಿತ್ರದಲ್ಲಿ ಲಿಪ್‌ಲಾಕ್ ಸೀನ್‌ನಲ್ಲೂ ಕಾಣಿಸಿಕೊಂಡಿದ್ದರು. ಇದೀಗ 'ಜವಾನ್' ಚಿತ್ರದ ದೃಶ್ಯವೊಂದರಲ್ಲಿ ಕಾಲಿವುಡ್ ಬ್ಯೂಟಿ ಮತ್ತೆ ಈಜುಡುಗೆ ತೊಡುತ್ತಾರಂತೆ. ಮದುವೆ ನಂತರ ಬಿಕಿನಿ ತೊಡಲು ನಯನ್ ಒಪ್ಪಿರೋದು ನಿಜಾನಾ? ಎನ್ನುವ ಅನುಮಾನವೂ ಕೆಲವರನ್ನು ಕಾಡುತ್ತಿದೆ.

ಶಾರುಖ್ ಖಾನ್ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಸೀನ್‌ಗಳು ಕಾಮನ್. ಇತ್ತೀಚೆಗೆ ಬಂದ 'ಪಠಾಣ್' ಚಿತ್ರದ ಸಾಂಗೊಂದರಲ್ಲಿ ದೀಪಿಕಾ ಪಡುಕೋಣೆ ಬಿಕಿನಿ ತೊಟ್ಟಿದ್ದು ಗೊತ್ತೇಯಿದೆ. ಇದು ದೊಡ್ಡಮಟ್ಟದ ವಿವಾದಕ್ಕೂ ಕಾರಣವಾಗಿತ್ತು. ಇದೇ ರೀತಿ 'ಜವಾನ್' ಚಿತ್ರದಲ್ಲೂ ಹಾಟ್ ಸೀನ್‌ಗಳು ಇರುತ್ತವೆ ಎನ್ನುವ ಚರ್ಚೆ ನಡೀತಿದೆ. ಬಿಕಿನಿ ಸೀನ್‌ ಇರುವ ಕಾರಣಕ್ಕೆ ನಯನ್ ಭಾರೀ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ. ನಯನ್ 'ಜವಾನ್' ಚಿತ್ರದಲ್ಲಿ ನಿಜಕ್ಕೂ ಬಿಕಿನಿ ತೊಟ್ಟಿದ್ದಾರಾ ಎನ್ನುವುದಕ್ಕೆ ಶೀಘ್ರದಲ್ಲೇ ಕ್ಲಾರಿಟಿ ಸಿಗಲಿದೆ.

ಮುದುವೆ ನಂತರ ನಯನತಾರ ನಟಿಸಿದ 'ಗಾಡ್‌ಫಾದರ್', 'ಗೋಲ್ಡ್', 'ಕನೆಕ್ಟ್' ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಇದೀಗ 'ಜವಾನ್' ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇದೆ. ಚಿತ್ರದಲ್ಲಿ ವಿಜಯ್ ಸೇತುಪತಿ ಮುಖ್ಯವಾದ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಪ್ರಿಯಾಮಣಿ, ಯೋಗಿ ಬಾಬು, ಸಾನ್ಯಾ ಮಲ್ಹೋತ್ರಾ, ಮನ್ಸೂರ್ ಅಲಿಖಾನ್, ಅಸ್ತಾ ಅಗರ್‌ವಾಲ್, ಸುನಿಲ್ ಗ್ರೋವರ್, ರಿದ್ದಿ ಡೊಗ್ರ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ದಳಪತಿ ವಿಜಯ್, ಸಂಜಯ್ ದತ್, ದೀಪಿಕಾ ಪಡುಕೋಣೆ ಗೆಸ್ಟ್ ಅಪಿಯರೆನ್ಸ್ ಇದೆ. ಶಾರುಕ್ ಖಾನ್ ತಮ್ಮದೇ ರೆಡ್ ಚಿಲ್ಲೀಸ್ ಬ್ಯಾನರ್‌ನಲ್ಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜಿ. ಕೆ ವಿಷ್ಣು ಸಿನಿಮಾಟೋಗ್ರಫಿ, ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ.

More from Filmibeat

English summary
Nayanthara will be seen sporting a bikini in her forthcoming film Jawan? Atlee Directed action thriller film scheduled for theatrical release on 2 June 2023. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X