»   » ಕಠ್ಮಂಡು : ಗೋಲಿಬಾರ್‌ನಲ್ಲಿ ಸತ್ತ ವಿದ್ಯಾರ್ಥಿಗಳ ಸಂಖ್ಯೆ ನಾಲ್ಕಕ್ಕೆ ಏರಿಕೆ

ಕಠ್ಮಂಡು : ಗೋಲಿಬಾರ್‌ನಲ್ಲಿ ಸತ್ತ ವಿದ್ಯಾರ್ಥಿಗಳ ಸಂಖ್ಯೆ ನಾಲ್ಕಕ್ಕೆ ಏರಿಕೆ

Subscribe to Filmibeat Kannada

ಕಠ್ಮಂಡು : ಭಾರತೀಯ ನಟನ ನೇಪಾಳ ಕುರಿತ ಹೇಳಿಕೆಗಳನ್ನು ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ದೊಂಬಿಗೆ ತಿರುಗಿದಾಗ, ಅದನ್ನು ಹತ್ತಿಕ್ಕಲು ಪೊಲೀಸರು ನಡೆಸಿರುವ ಗೋಲಿಬಾರ್‌ನಲ್ಲಿ ಸತ್ತ ವಿದ್ಯಾರ್ಥಿಗಳ ಸಂಖ್ಯೆ ನಾಲ್ಕಕ್ಕೇರಿದೆ ಎಂದು ನೇಪಾಳಿ ಪತ್ರಿಕೆಗಳು ವರದಿ ಮಾಡಿವೆ.

ಪ್ರಸ್ತುತ ನೇಪಾಳಿ ರಾಜಧಾನಿ ಕಠ್ಮಂಡುವಿನಲ್ಲಿ ಶಾಂತ ವಾತಾವರಣವಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಪೊಲೀಸರ ಗೋಲಿಬಾರ್‌ನಲ್ಲಿ ಸತ್ತವರಲ್ಲಿ 13 ವರ್ಷದ ಬಾಲಕಿಯೂ ಸೇರಿದ್ದಾಳೆ. ಮನೆಯಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಈ ಬಾಲಕಿಗೆ ಯದ್ವಾ ತದ್ವಾ ನಡೆದ ದಾಳಿಯಲ್ಲಿ ಗುಂಡು ತಗುಲಿದೆ.

ಮಂಗಳವಾರ ಮಧ್ಯಾಹ್ನದಿಂದ ನೇಪಾಳದ ಎಲ್ಲಾ ಕೇಬಲ್‌ ಆಪರೇಟರ್‌ಗಳು ಎಲ್ಲಾ ಭಾರತೀಯ ಹಾಗೂ ಹಿಂದಿ ಭಾಷೆಯ ಟೀವಿ ಚಾನಲ್‌ಗಳ ಪ್ರಸಾರವನ್ನು ನಿಲ್ಲಿಸಿದ್ದಾರೆ. ನಾವು ಯಾವುದೇ ಒತ್ತಡದಿಂದ ಈ ಚಾನಲ್‌ಗಳ ಪ್ರಸಾರವನ್ನು ನಿಲ್ಲಿಸಿಲ್ಲ . ಹೃತಿಕ್‌ ರೋಷನ್‌ನ ನೇಪಾಳಿ ವಿರೋಧಿ ಹೇಳಿಕೆಗಳನ್ನು ಪ್ರತಿಭಟಿಸಲು ಸ್ವ ಪ್ರೇರಣೆಯಿಂದ ಭಾರತೀಯ ಚಾನಲ್‌ಗಳ ಪ್ರಸಾರವನ್ನು ನಿಲ್ಲಿಸಿದ್ದೇವೆ ಎಂದು ಜನಪ್ರಿಯ ಕೇಬಲ್‌ ಟೀವಿಯಾಂದರ ಮುಖ್ಯಸ್ಥ ನೀರ್‌ ಶಾ ತಿಳಿಸಿದ್ದಾರೆ.

(ಡಿಪಿಎ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada