ಕೀರ್ತಿ ಸುರೇಶ್ ಅಂದ ಹೆಚ್ಚಲು ಲಿಪ್ ಸರ್ಜರಿ ಕಾರಣ?
ನಟಿ ಕೀರ್ತಿ ಸುರೇಶ್ ಸೌತ್ ಸಿನಿಮಾರಂಗದಲ್ಲಿ ಹೆಸರಾಂತ ನಟಿಯರಲ್ಲಿ ಒಬ್ಬರು. ಸಾಲು, ಸಾಲು ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ಸಿಕ್ಕಾಪಟ್ಟೆ ಬ್ಯೂಸಿಯಗಿದ್ದಾರೆ. ಸದ್ಯ ಮಹೇಶ್ ಬಾಬು ಜೊತೆಗೆ 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಅಭಿನಿಸಿದ್ದು, ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರಶಂಸೆ ಗಿಟ್ಟಿಸಿಕೊಂಡಿದೆ.
ಆದರೆ ಸಿನಿಮಾ ಬಿಟ್ಟು ನಟಿ ಕೀರ್ತಿ ಸುರೇಶ್ ಹಲವು ವಿಚಾರಗಳಿಗೆ ಆಗಾಗ ಸುದ್ದಿ ಆಗುತ್ತಾರೆ. ಹಲವು ಬಾರಿ ತಮ್ಮ ಲುಕ್ ಮೂಲಕವೇ ಸುದ್ದಿ ಆಗಿದ್ದಾರೆ. ಈಗ ಮತ್ತೆ ಕೀರ್ತಿ ಸುರೇಶ್ ಲುಕ್ ಬಗ್ಗೆ ಚರ್ಚೆ ಎದ್ದಿದೆ. ಕೀರ್ತಿ ಸುರೇಶ್ ಲುಕ್‌ನಲ್ಲಿ ಆದ ಬದಲಾವಣೆಯನ್ನು ಜನ ಬೆಟ್ಟು ಮಾಡಿ ತೋರಿಸುತ್ತಾ ಇದ್ದಾರೆ.
ಹೌದು ಈಗ ನಟಿ ಕೀರ್ತಿ ಸುರೇಶ್ ಲುಕ್ ಬಗ್ಗೆಯೇ ಮಾತು. ಟಾಲಿವುಡ್‌ನಲ್ಲಿ ಕೀರ್ತಿ ಸುರೇಶ್ ತಮ್ಮ ತುಟಿಯನ್ನು ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಾ ಇದೆ. ಹಾಗಾಗಿ ಆಕೆಯ ಮುಖ ಮೊದಲಿಗಿಂತಲೂ ಭಿನ್ನವಾಗಿ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ.

ಕೀರ್ತಿ ಬಬ್ಲಿ ಲುಕ್ ಮೆಚ್ಚಿದ್ದ ಅಭಿಮಾನಿಗಳು!
ನಟಿ ಕೀರ್ತಿ ಸುರೇಶ್ ಮೊದಲು ಸಿನಿಮಾರಂಗಕ್ಕೆ ಬಂದಾಗ ಬಬ್ಲಿ ನಟಿ ಎನಿಸಿಕೊಂಡಿದ್ದರು. ಅಂದರೆ ದುಂಡು ಮೊಗದ ಚೆಲುವೆ ಅಂತನೇ ಫೇಮಸ್ ಆದರು. ಕೀರ್ತಿ ಕೊಂಚ ದಪ್ಪ ಎನಿಸಿದರು ಅಂದವಾಗಿ ಕಾಣುತಿದ್ದರು. ಎಲ್ಲಾ ನಟಿಯರಂತೆ ಸ್ಕಿನ್ನಿ ಬಾಡಿ ಬೇಕೆಂದು ಸಣ್ಣ ಆಗದ ಈ ನಟಿಯ ಚಬ್ಬಿ ಲುಕ್‌ಗೆ ಸಾಕಷ್ಟು ಅಭಿಮಾನಿಗಳು ಇದ್ದರು. ಅದರಲ್ಲೂ ಮಹಾ ನಟಿ ಸಿನಿಮಾಗಾಗಿ ಕೀರ್ತಿ ಸುರೇಶ್ ಮತ್ತಷ್ಟು ತೂಕ ಹೆಚ್ಚಿಸಿಕೊಂಡು ದಪ್ಪ ಆಗಿ ಬಿಟ್ಟಿದ್ದರು.

ಜೀರೋ ಸೈಸ್ ಬಳಿಕ ಕೀರ್ತಿ ಸುರೇಶ್ ಟ್ರೋಲ್!
ಆದರೆ 'ಮಹಾನಟಿ' ಸಿನಿಮಾದ ಬಳಿಕ ಕೀರ್ತಿ ಸುರೇಶ್ ಕೊಂಚ ಗ್ಯಾಪ್ ತೆಗೆದುಕೊಂಡು ಸ್ಲಿಮ್ ಆಗಿ ಬಂದರು. ಅದು ಯಾವ ಮಟ್ಟಿಗೆ ಎಂದರೆ ಕೀರ್ತಿ ಜೀರೋ ಸೈಜ್ ಆಗಿ ಫೋಟೋ ಶೂಟ್ ಮಾಡಿಸಿ ಎಲ್ಲರಿಗೂ ಸರ್ಪ್ರೈಸ್ ಕೊಟ್ಟಿದ್ದರು. ಆದರೆ ಕೀರ್ತಿಯ ಜೀರೊ ಸೈಜ್ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿರಲಿಲ್ಲ. ಅಗ ಕೀರ್ತಿ ಸುರೇಶ್ ತಮ್ಮ ಸಫೂರ ಕಾಯದ ಲುಕ್‌ನಿಂದಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.

ತುಟಿಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಕೀರ್ತಿ ಸುರೇಶ್?
ಈಗ ಗುಟ್ಟಾಗಿ ಲಿಪ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. 'ಸರ್ಕಾರು ವಾರಿ ಪಾಟ' ಮತ್ತು 'ಸಾನಿ ಕೈದಂ' ಚಿತ್ರಗಳ ಹಲವು ದೃಶ್ಯಗಳಲ್ಲಿ ಕೀರ್ತಿ ತುಟಿಯ ಆಕಾರ ಬದಲಾಗಿರುವು ಗೊತ್ತಾಗುತ್ತೆ. ಇನ್ನು ಇತ್ತೀಚೆಗಿನ ಫೋಟೋ ಶೂಟ್ ಒಂದರಲ್ಲಿ ಆಕೆಯ ತುಟಿಯ ಆಕಾರ ಬದಲಾಗಿರುವಂತೆ ಎದ್ದು ಕಾಣುತ್ತೆ. ಇದನ್ನು ಹಳೇ ಫೋಟೊ ಹೋಲಿಸಿ ಜನ ಕಮೆಂಟ್ ಮಾಡುತ್ತಿದ್ದಾರೆ.

ಲಿಪ್ ಸರ್ಜರಿ ಮಾಡಿಸಿದ ತೆಲುಗು ತಾರೆಯರು!
ಇನ್ನು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ನಟಿ ಮಣಿಯರ ಸಾಲು ದೊಡ್ಡದಾಗಿಯೇ ಇದೆ. ನಟಿ ಸಮಂತಾ ಕೂಡ ಲಿಪ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಸಮಂತ ಹಳೆಯ ಫೋಟೊಗಳನ್ನು ನೋಡಿದರೆ ಸುಲಭವಾಗಿ ಹೇಳಬಹುದು. ಇನ್ನು ಶೃತಿ ಹಾಸನ್, ರಕುಲ್ ಪ್ರೀತ್ ಸಿಂಗ್, ನಯನತಾರ, ತ್ರಿಶಾ ಮತ್ತು ಕಾಜಲ್ ಅಗರ್‌ವಾಲ್ ಕೂಡ ಮತ್ತಷ್ಟು ಸುಂದರವಾಗಿ ಕಾಣಲು ತುಟಿಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.


Click it and Unblock the Notifications











