ರಕ್ಷಿತ್ ಶೆಟ್ಟಿಗೆ ಶ್ರೀನಿಧಿ ಶೆಟ್ಟಿ ಮಾಡಿದ ರಿಪ್ಲೈ ವೈರಲ್: ಇದು ಪಕ್ಕಾ ಲವ್ ಎಂದ ಫ್ಯಾನ್ಸ್; ಕಥೆ ಬೇರೆನೇ ಇದೆ?

ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಈ ಹಿಂದಿನಿಂದಲೂ ರಕ್ಷಿತ್ ಶೆಟ್ಟಿ ಪ್ರೀತಿ, ಪ್ರೇಮ, ಮದುವೆ ಹಾಗೂ ಎಂಗೇಜ್‌ಮೆಂಟ್ ವಿಷಯಗಳ ಕುರಿತಾಗಿ ಸಾಕಷ್ಟು ಸುದ್ದಿಗೀಡಾಗಿ ಚರ್ಚೆಗೆ ಒಳಗಾದವರೇ. ಹೌದು, ಕಿರಿಕ್ ಪಾರ್ಟಿ ಸಿನಿಮಾ ಬಳಿಕ ಅದೇ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ರಶ್ಮಿಕಾ ಮಂದಣ್ಣ ಜತೆ ರಕ್ಷಿತ್ ಶೆಟ್ಟಿ ಪ್ರೀತಿಯಲ್ಲಿ ಬಿದ್ದದ್ದು, ಇಬ್ಬರೂ ಪರಸ್ಪರ ಒಪ್ಪಿಕೊಂಡು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಸಿದ್ಧವಾದದ್ದು ಹಾಗೂ ಆ ಬಳಿಕ ಮದುವೆ ಮುರಿದು ಬಿದ್ದದ್ದರ ಬಗ್ಗೆ ನಿಮಗೆ ಚೆನ್ನಾಗಿ ಪ್ರತಿ ಮಾಹಿತಿಯೂ ತಿಳಿದೇ ಇದೆ.

ಹೀಗೆ ರಶ್ಮಿಕಾ ಮಂದಣ್ಣ ಜತೆ ಮದುವೆ ಮುರಿದು ಬಿದ್ದ ಬಳಿಕ ಮತ್ತೆ ಸಿಂಗಲ್ ಆದ ರಕ್ಷಿತ್ ಶೆಟ್ಟಿ ಜತೆ ಕೆಲವೊಂದಷ್ಟು ನಟಿಯರ ಹೆಸರೂ ಸಹ ಸೇರಿ ಗಾಸಿಪ್ ಆಗಿ ಸುದ್ದಿಗಳು ಹರಿದಾಡಿದ್ದವು. ಹೌದು. ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ನಟಿಸಿದ್ದ ಸಾನ್ವಿ ಶ್ರೀವಾಸ್ತವ ಹೆಸರೂ ಸಹ ರಕ್ಷಿತ್ ಶೆಟ್ಟಿ ಜತೆ ತಳುಕಿ ಹಾಕಿಕೊಂಡಿತ್ತು. ಇಬ್ಬರೂ ಒಟ್ಟಿಗೆ ಹಂಚಿಕೊಂಡಿದ್ದ ಸೆಲ್ಫೀ ಫೊಟೊ ಕಂಡು ಪ್ರತಿಕ್ರಿಯಿಸಿದ್ದ ನೆಟ್ಟಿಗರು ಒಳ್ಳೆ ಜೋಡಿ ಮದುವೆಯಾಗಿಬಿಡಿ ಶೆಟ್ರೇ ಎಂದಿದ್ದರು ಹಾಗೂ ಇನ್ನೂ ಕೆಲವರು ಇಬ್ಬರ ನಡುವೆ ಲವ್ ಇದೆ ಎಂದೂ ಸಹ ಕಾಮೆಂಟ್ ಮಾಡಿದ್ದರು. ಆ ಬಳಿಕ ಇದೆಲ್ಲಾ ಕೇವಲ ವದಂತಿ ಎಂಬುದೂ ಸಹ ಬಹಿರಂಗವಾಯಿತು.

Netizens suspect love between Rakshit Shetty and Srinidhi Shetty after saw their latest tweets

ಸದ್ಯ ಸಾನ್ವಿ ರೀತಿಯೇ ಮತ್ತೋರ್ವ ನಟಿ ಜತೆ ರಕ್ಷಿತ್ ಶೆಟ್ಟಿ ಹೆಸರು ಕೇಳಿಬರುತ್ತಿದೆ. ಹೌದು, ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳಲ್ಲಿ ರಾಕಿಂಗ್ ಸ್ಟಾರ್ ಯಶ್‌ಗೆ ನಾಯಕಿಯಾಗಿ ನಟಿಸಿದ್ದ ಶ್ರೀನಿಧಿ ಶೆಟ್ಟಿ ಹೆಸರು ಸದ್ಯ ರಕ್ಷಿತ್ ಶೆಟ್ಟಿ ಹೆಸರಿನ ಜತೆ ತಳುಕಿ ಹಾಕಿಕೊಂಡಿದೆ. ಶ್ರೀನಿಧಿ ಶೆಟ್ಟಿ ಟ್ವಿಟರ್‌ನಲ್ಲಿ ತನ್ನ ಹೊಸ ಫೋಟೊಗಳನ್ನು ಹಂಚಿಕೊಂಡು 'ಹಾಗೆ ಸುಮ್ಮನೆ' ಎಂದು ಬರೆದುಕೊಂಡಿದ್ದರು. ಈ ಟ್ವೀಟ್‌ಗೆ ರಕ್ಷಿತ್ ಶೆಟ್ಟಿ ಕಾಮೆಂಟ್ ಮಾಡಿದ್ದು, 'ಓಹ್ ಗೊತ್ತಾಯಿತು ಶೆಟ್ರೇ' ಎಂದು ತುಳುವಿನಲ್ಲಿ ಕಾಮೆಂಟ್ ಮಾಡಿದ್ದರು.

ಹೀಗೆ ಶ್ರೀನಿಧಿ ಶೆಟ್ಟಿ ಟ್ವೀಟ್‌ಗೆ ರಕ್ಷಿತ್ ಶೆಟ್ಟಿ ಮಾಡಿದ ಕಾಮೆಂಟ್ ಕಂಡು ನೆಟ್ಟಿಗರು ಓಹೋ ಇಬ್ಬರ ನಡುವೆ ಏನಿದು ಸುದ್ದಿ, ಅಣ್ಣಂಗೆ ಲವ್ ಆಗಿದೆ, ಯಾವಾಗ ಘೋಷಣೆ ಮಾಡ್ತೀರ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಹೀಗೆ ಇಬ್ಬರ ಬಗ್ಗೆ ಕಾಮೆಂಟ್‌ಗಳು ಬರುತ್ತಿದ್ದ ವೇಳೆಯೇ ಶ್ರೀನಿಧಿ ಸಹ ರಕ್ಷಿತ್ ಶೆಟ್ಟಿಗೆ ರಿಪ್ಲೈಯೊಂದನ್ನು ಮಾಡಿದ್ದಾರೆ. 'ಆಹಾಹಾ.. ಗೊತ್ತಾಯಿತಾ ಶೆಟ್ರೆ, ಯಾರಿಗೂ ಹೇಳಬೇಡಿ' ಎಂದು ಶ್ರೀನಿಧಿ ರಿಪ್ಲೈ ಮಾಡಿದ್ದಾರೆ.

Netizens suspect love between Rakshit Shetty and Srinidhi Shetty after saw their latest tweets

ಶ್ರೀನಿಧಿ ಶೆಟ್ಟಿ ಅವರ ಕಡೆಯಿಂದ ಈ ರಿಪ್ಲೈ ಬಂದ ಮೇಲಂತೂ ನೆಟ್ಟಿಗರು ಇಬ್ಬರ ಕಾಲನ್ನು ಮತ್ತಷ್ಟು ಎಳೆದಿದ್ದಾರೆ. ಇಬ್ಬರ ಈ ಟ್ವೀಟ್‌ಗಳು ನೆಟ್ಟಿಗರಲ್ಲಿ ಪ್ರಶ್ನೆ, ಕುತೂಹಲ ಹಾಗೂ ಗೊಂದಲವನ್ನು ಮೂಡಿಸಿವೆ. ಆದರೆ ಶ್ರೀನಿಧಿ ಶೆಟ್ಟಿ ರಕ್ಷಿತ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಮುಂದಿನ ಚಿತ್ರ ರಿಚರ್ಡ್ ಆಂಟನಿಗೆ ನಾಯಕಿಯಾಗಿ ಆಯ್ಕೆಯಾಗಿರಬಹುದಾ ಹಾಗೂ ಆ ವಿಷಯದ ಬಗ್ಗೆಯೇ ಈ ಇಬ್ಬರೂ ಇಲ್ಲಿ ಪರೋಕ್ಷವಾಗಿ ಚರ್ಚಿಸಿರಬಹುದಾ ಎಂಬ ಪ್ರಶ್ನೆಯೂ ಇದೇ ವೇಳೆ ಮೂಡಿದೆ. ಹೌದು, ರಿಚರ್ಡ್ ಆಂಟನಿ ಚಿತ್ರಕ್ಕೆ ನಾಯಕಿ ಆಯ್ಕೆ ಇನ್ನೂ ಸಹ ಆಗಿಲ್ಲ, ಹೀಗಾಗಿ ಇಬ್ಬರ ನಡುವಿನ ಈ ಟ್ವೀಟ್ ಆ ಕುರಿತ ಬಗ್ಗೆಯೇ ಇರಬಹುದು ಎಂಬ ನಮ್ಮ ಅನಿಸಿಕೆ.

More from Filmibeat

English summary
Netizens suspect love between Rakshit Shetty and Srinidhi Shetty after saw their latest tweets. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X