ನಟಿ ಶ್ರೀಲೀಲಾ ಬಗ್ಗೆ ಮತ್ತೊಂದು ಗಾಸಿಪ್: ಸ್ಟಾರ್ ನಟನೊಂದಿಗೆ ಕಿಸ್ ಬೆಡಗಿ ಹೆಸರು!

ಕನ್ನಡದ ನಟಿ ಶ್ರೀಲೀಲಾ ಸದ್ಯ ಬೈಟು ಲವ್‌ ಸಿನಿಮಾದ ರಿಲೀಸ್‌ನಲ್ಲಿ ಬ್ಯುಸಿ ಆಗಿದ್ದಾರೆ. ಶ್ರೀಲೀಲಾ ಮತ್ತು ಧನ್ವಿರ್ ಅಭಿನಯದ ಈ ಚಿತ್ರಕ್ಕೆ ನಟ ನಿರ್ದೇಶಕ ಹರಿ ಸಂತೋಷ್ ನಿರ್ದೇಶನ ಮಾಡಿದ್ದಾರೆ. ರಿಲೀಸ್‌ಗೂ ಮುನ್ನವೇ ಬೈಟು ಲವ್ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಇಂದು ಫೆಬ್ರವರಿ 18ಕ್ಕೆ ಸಿನಿಮಾ ರಿಲೀಸ್ ಆಗಿದೆ. ತೆಲುಗಿನಲ್ಲೂ ಕೂಡ ಶ್ರೀಲೀಲಾ ಹವಾ ಜೋರಾಗಿ ಇದೆ.

ಟಾಲಿವುಡ್‌ನಲ್ಲಿ ನಟಿ ಶ್ರೀಲೀಲಾ ಬಗ್ಗೆ ಹೊಸದೊಂದು ಸುದ್ದಿ ಹಬ್ಬಿದೆ. ಶ್ರೀಲೀಲಾ ಅವರ ಹೆಸರು ಮತ್ತೊಬ್ಬ ಸ್ಟಾರ್ ನಟನ ಹೆಸರು ಕೇಳಿ ಬಂದಿದೆ. ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಇರುವ ಶ್ರೀಲೀಲಾ, ಕನ್ನಡದಲ್ಲಿ ಕಿಸ್ ಸಿನಿಮಾದ ಮೂಲಕ ನಾಯಕ ನಟಿಯಾಗಿ ಎಂಟ್ರಿ ಕೊಟ್ಟರು, ಅವರು ಮೊದಲ ಸಿನಿಮಾದ ಮೂಲಕವೇ ಸಾಕಷ್ಟು ಹೆಸರು ಗಳಿಸಿದ್ದಾರೆ.

ತೆಲುಗು ಸಿನಿಮಾ ರಂಗದಲ್ಲೂ ಕೂಡ ಗಮನ ಸೆಳೆದಿದ್ದಾರೆ. ಶ್ರೀಲೀಲಾ ಅಭಿನಯದ ಮೊದಲ ತೆಲುಗು ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಜೊತೆಗೆ ಅಲ್ಲೂ ಕೂಡ ಶ್ರೀಲೀಲಾ ಅವರಿಗೆ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಹಾಗಾಗಿ ಟಾಲಿವುಡ್‌ನಲ್ಲಿ ಶ್ರೀಲೀಲಾ ಬಗ್ಗೆ ಒಂದಲ್ಲಾ ಒಂದು ಸುದ್ದಿ ಹರಿದಾಡುತ್ತಲೇ ಇರುತ್ತದೆ.

ಪ್ರಭಾಸ್ ಸಿನಿಮಾಗೆ ಶ್ರೀಲೀಲಾ ನಾಯಕಿ?

ಪ್ರಭಾಸ್ ಸಿನಿಮಾಗೆ ಶ್ರೀಲೀಲಾ ನಾಯಕಿ?

ನಟಿ ಶ್ರೀಲೀಲಾ ಹೆಸರು ಈಗ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಜೊತೆಗೆ ಕೇಳಿಬಂದಿದೆ. ಟಾಲಿವುಡ್‌ನಲ್ಲಿ ಶ್ರೀಲೀಲಾಗೆ ದೊಡ್ಡ, ದೊಡ್ಡ ಅವಕಾಶಗಳು ಬರ್ತಿದೆ. ಮೊದಲ ತೆಲುಗು ಸಿನಿಮಾ 'ಪೆಳ್ಳಿ ಸಂದಡಿ' ಬಳಿಕ ಅಲ್ಲಿ ಶ್ರೀಲೀಲಾಗೆ ಬೇಡಿಕೆ ಹೆಚ್ಚಾಗಿದೆ. ಈಗ ಪ್ರಭಾಸ್ ಸಿನಿಮಾದಲ್ಲೂ ನಾಯಕಿಯಾಗುವ ಅವಕಾಶ ಪಡೆಡುಕೊಂಡಿದ್ದಾರೆ ಎನ್ನಲಾಗಿದೆ.

ಪ್ರಭಾಸ್ ರಾಜ ಡಿಲಕ್ಸ್'ಗೆ‌ ಶ್ರೀಲೀಲಾ ನಾಯಕಿ?

ಪ್ರಭಾಸ್ ರಾಜ ಡಿಲಕ್ಸ್'ಗೆ‌ ಶ್ರೀಲೀಲಾ ನಾಯಕಿ?

ಪ್ರಭಾಸ್ ಅವರ ಮುಂದಿನ ಸಿನಿಮಾ ಇತ್ತೀಚಿಗೆ ಪ್ರಕಟ ಆಗಿದೆ. ಯಶಸ್ವಿ ನಿರ್ದೇಶಕ ಮಾರುತಿ ಪ್ರಭಾಶ್‌ಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ 'ರಾಜ ಡೀಲಕ್ಸ್' ಎಂದು ಹೆಸರಿಡಲಾಗಿದೆ. ಈ‌ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಅವಕಾಶವನ್ನು ಮಾರುತಿ ಪಡೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಾರೆ ಎನ್ನುವ ಸುದ್ದಿ ಬಂದಿದೆ. ಶ್ರೀಲೀಲಾ ಮಾತ್ರ ಅಲ್ಲ ಇನ್ನು ಇಬ್ಬರು ನಟಿಯರು ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ತೆರೆಹಂಚಿಕೊಳ್ಳುತ್ತಲಿದ್ದಾರೆ.

ಪ್ರಭಾಸ್‌ಗೆ ಶ್ರೀಲೀಲಾ, ಮೆಹ್ರಿನ್, ಮಾಳವಿಕ ನಾಯಕಿಯರು!

ಪ್ರಭಾಸ್‌ಗೆ ಶ್ರೀಲೀಲಾ, ಮೆಹ್ರಿನ್, ಮಾಳವಿಕ ನಾಯಕಿಯರು!

ಈ ಸಿನಿಮಾದಲ್ಲಿ ಪ್ರಭಾಸ್‌ಗೆ ಮೂವರು ನಟಿಯರು‌. ಶ್ರೀಲೀಲಾ ಜೊತೆಗೆ ಮಾಳವಿಕಾ ಮೋಹನನ್, ಮೆಹ್ರೀನ್ ಪಿರ್ಜಾದಾ ಕೂಡ ಇರಲಿದ್ದಾರೆ ಎನ್ನಲಾಗಿದೆ. ಈ ಮೂವರು ನಾಯಕಿಯರು ಜೊತೆಗೆ ಪ್ರಭಾಸ್ ನಟಿಸಲಿದ್ದಾರಂತೆ. ಈಗಾಗಲೇ ಈ ಚಿತ್ರದಲ್ಲಿ ಮಾಳವಿಕ ಮೋಹನ್ ನಟಿಸುವುದು ಪಕ್ಕಾ ಆಗಿದೆ. ಈ ಸಿನಿಮಾ ಇದೇ ವರ್ಷ ಮಾರ್ಚ್ 18ರಂದು ಅಧಿಕೃತವಾಗಿ ಆರಂಭ ಆಗುವ ಸಾಧ್ಯತೆ ಇದೆ.‌ ಅಗ ಚಿತ್ರದಲ್ಲಿ ಕನ್ನಡದ ಹುಡುಗಿ ಶ್ರೀಲೀಲಾ ಇರುತ್ತಾರಾ ಇಲ್ಲವಾ ಎನ್ನುವುದು ತಿಳಿಯಲಿದೆ.

ರವಿತೇಜಾ, ಮಹೇಶ್‌ ಬಾಬು ಚಿತ್ರಕ್ಕೂ ಶ್ರೀಲೀಲಾ ಹೆಸರು!

ರವಿತೇಜಾ, ಮಹೇಶ್‌ ಬಾಬು ಚಿತ್ರಕ್ಕೂ ಶ್ರೀಲೀಲಾ ಹೆಸರು!

ಇನ್ನು ಶ್ರೀಲೀಲಾ ಮೊದಲ ತೆಲುಗು ಸಿನಿಮಾದ ಬಳಿಕ ತೆಲುಗಿನಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದಾರೆ. 'ಜಾತಿರತ್ನಾಲು' ಖ್ಯಾತಿಯ ನವೀನ್‌ ಪೊಲಿಶೆಟ್ಟಿ, ರವಿ ತೇಜ ನಟನೆಯ 'ಧಮಾಕಾ' ಚಿತ್ರಕ್ಕೂ ಶ್ರೀಲೀಲಾ ಅವರೇ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. 'ಉಪ್ಪೆನ' ಹೀರೋ ವೈಷ್ಣವ್ ತೇಜ್ ಜೊತೆಗೂ ಕೂಡ ನಟಿ ಶ್ರೀಲೀಲಾ ಹೆಸರು ಕೇಳಿ ಬಂದಿದೆ. ನಿರ್ಮಾಪಕ ದಿಲ್ ರಾಜು ನಿರ್ಮಿಸಲಿರುವ ಮುಂದಿನ ಸಿನಿಮಾಕ್ಕೂ ಶ್ರೀಲೀಲಾ ಕಾಲ್ ಶೀಟ್ ಕೇಳಲಾಗಿದೆಯಂತೆ. ಈ ಮಧ್ಯೆ ಮಹೇಶ್ ಬಾಬು ಅವರ ಹೊಸ ಸಿನಿಮಾಕ್ಕೆ ಎರಡನೇ ನಾಯಕಿಯಾಗಿ ಶ್ರೀಲೀಲಾಗೆ ಆಫರ್ ನೀಡಲಾಗಿದೆ ಎನ್ನುವ ಸುದ್ದಿ ಕೂಡ ಹರಿದಾಡಿತ್ತು.

More from Filmibeat

English summary
New Gossip About Actress Sreeleela Her Next Movie With Prabhas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X