For Quick Alerts
  ALLOW NOTIFICATIONS  
  For Daily Alerts

  ಸಾವಿರ ಕೋಟಿ ಸರದಾರ ಯಶ್ 'Y19' ಸಂಭಾವನೆ ಬಗ್ಗೆ ಹೊಸ ಗಾಳಿ ಸುದ್ದಿ!

  |

  ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಇರುವುದು ಒಂದೇ ಚರ್ಚೆ. ‌ಅದು ಯಶ್ ಮುಂದಿನ ಚಿತ್ರ ಯಾವುದು ಎಂಬುದು. ನಟ ಯಶ್ ಮುಂದಿನ ಸಿನಿಮಾ ಯಾವಾಗ ಮತ್ತು ಯಾರ ಜೊತೆಗೆ ಯಶ್ ಸಿನಿಮಾ ಮಾಡುತ್ತಾರೆ ಎನ್ನುವ ಬಗ್ಗೆ ದಿನೇ, ದಿನೇ ಕುತೂಹಲ ಹೆಚ್ಚಾಗುತ್ತಲೇ ಇದೆ.

  ಆದರೆ ನಟ ಯಶ್ ಮಾತ್ರ ತಮ್ಮ ಮುಂದಿನ ಹೆಜ್ಜೆಯನ್ನು ಹುಷಾರಾಗಿ ಇಡಲು ಯೋಚಿಸುತ್ತಿದ್ದಾರೆ. ತೆರೆ ಮರೆಯಲ್ಲಿ ಮುಂದಿನ ಸಿನಿಮಾಗಾಗಿ ಎಲ್ಲಾ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ರೀತಿಯ ಸುಳಿವು ಬಿಟ್ಟು ಕೊಟ್ಟಿಲ್ಲ.

  Exclusive: ನರ್ತನ್-ಯಶ್ ಸಿನಿಮಾ ಪೋಸ್ಟ್‌ಪೋನ್: ರಾಕಿ ಭಾಯ್ 19ನೇ ಸಿನಿಮಾದ ಕಥೆಯೇನು?Exclusive: ನರ್ತನ್-ಯಶ್ ಸಿನಿಮಾ ಪೋಸ್ಟ್‌ಪೋನ್: ರಾಕಿ ಭಾಯ್ 19ನೇ ಸಿನಿಮಾದ ಕಥೆಯೇನು?

  ಇನ್ನು ಯಶ್ 19ನೇ ಸಿನಿಮಾವನ್ನು ನರ್ತನ್ ನಿರ್ದೇಶನ ಮಾಡುವುದಿಲ್ಲ ಎನ್ನುವುದನ್ನು, ಫಿಲ್ಮೀ ಬೀಟ್ ಈಗಾಗಲೇ ಖಚಿತಪಡಿಸಿದೆ. ಈಗ ಯಶ್ ಸಂಭಾವನೆ ಬಗ್ಗೆ ಗಾಳಿ ಸುದ್ದಿ ಒಂದು ಹಬ್ಬಿದೆ. ಯಶ್ ಮುಂದಿನ ಸಿನಿಮಾಗೆ ಸಂಭಾವನೆ ಪಡೆದುಕೊಂಡಿದ್ದಾರ ಎನ್ನುವ ಬಗ್ಗೆ ಮುಂದೆ ಓದಿ....

  ನರ್ತನ್- ಯಶ್ ಸಿನಿಮಾ ಪೋಸ್ಟ್ ಪೋನ್!

  ನರ್ತನ್- ಯಶ್ ಸಿನಿಮಾ ಪೋಸ್ಟ್ ಪೋನ್!

  'ಕೆಜಿಎಫ್ 2' ಸಿನಿಮಾದ ಬಳಿಕ ಯಶ್ 19ನೇ ಸಿನಿಮಾ ಪ್ರಕಟವಾಗಲು ತಡವಾಗುತ್ತಿದೆ. ಯಶ್ 19ನೇ ಸಿನಿಮಾವನ್ನು 'ಮಫ್ತಿ' ಚಿತ್ರದ ನಿರ್ದೇಶಕ ನರ್ತನ್ ಕಥೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಈಗ ನರ್ತನ್ ಜೊತೆಗಿನ ಸಿನಿಮಾ ಪೋಸ್ಟ್ ಪೋನ್ ಮಾಡಲಾಗಿದೆ. ಯಶ್ ಮತ್ತು ನರ್ತನ್ ಒಮ್ಮತದ ತೀರ್ಮಾನದ ಮೇರೆಗೆ ಸಿನಿಮಾವನ್ನು ಮುಂದೂಡಿದ್ದಾರೆ. ಆದರೆ ಮುಂದೆ ಯಶ್ ಜೊತೆಗೆ ನರ್ತನ್ ಕೆಲಸ ಮಾಡಲಿದ್ದಾರೆ.

  ಯಶ್ ಸಂಭಾವನೆ ಬಗ್ಗೆ ಹೊಸ ಗಾಸಿಪ್!

  ನಟ ಯಶ್ ಮುಂದಿನ ಸಿನಿಮಾ ಯಾವುದು ಎಂದು ಇನ್ನು ಪ್ರಕಟವಾಗಿಲ್ಲ, ಅದಾಗಲೇ ಅವರು 19ನೇ ಸಿನಿಮಾಗೆ ಪಡೆದ ಸಮಭಾವನೆಯ ಬಗ್ಗೆ ಚರ್ಚೆ ಆಗುತ್ತಿದೆ. 'ವೈ 19'ಗೆ ಯಶ್ ಸಂಭಾವನೆ ಪಡೆದಿದ್ದಾರೆ ಎನ್ನುವ ಗಾಸಿಪ್ ಹರಿದಾಡುತ್ತಿದೆ. ನಟ ಯಶ್ ಸುಮಾರು 60 ಕೋಟಿ ರೂ. ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ರಾಕಿಂಗ್ ಸ್ಟಾರ್ ಯಶ್ ಕನ್ನಡ ಸಿನಿಮಾರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕ ನಟರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಸೌತ್ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಲಿಸ್ಟ್ ಸೇರಿದ್ದಾರೆ ಎನ್ನಲಾಗಿದೆ.

  ಯಶ್ ಸಂಭಾವನೆ ಪಡೆಯಲ್ಲ, ಶೇರ್ ಮಾತ್ರ!

  ಯಶ್ ಸಂಭಾವನೆ ಪಡೆಯಲ್ಲ, ಶೇರ್ ಮಾತ್ರ!

  ಸಾವಿ ಕೋಟಿ ಸರದಾರ ಎನಿಸಿಕೊಂಡ ಯಶ್ 60 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎಂದರೆ ನಂಬುವುದು ಕಷ್ಟ ಸಾಧ್ಯ. ಯಾಕೆಂದರೆ ಮೂಲಗಳ ಪ್ರಕಾರ ನಟ ಯಶ್ ಸಿನಿಮಾಗಳಿಗೆ ಇಂತಿಷ್ಟು ಸಂಭಾವನೆ ಅಂತ ಪಡೆದುಕೊಳ್ಳುವುದಿಲ್ಲ. ಅವರು ಸಿನಿಮಾದಲ್ಲಿ ಶೇರ್ ಪಡೆದುಕೊಳ್ಳುತ್ತಾರೆ. ಕೆಜಿಎಫ್ 2 ಸಿನಿಮಾಗೂ ಕೂಡ ನಟ ಯಶ್ ಶೇರ್ ಪಡೆದುಕೊಂಡಿದ್ದರು. ಹಾಗೆ ಮುಂದಿನ ಸಿನಿಮಾಗಳಿಗೂ ಯಶ್ ಶೇರ್‌ ಪಡೆದುಕೊಳ್ಳುತ್ತಾರೆ.

  ಕೆಜಿಎಫ್ 3- ಶಂಕರ್ ನಿರ್ದೇಶನ!

  ಕೆಜಿಎಫ್ 3- ಶಂಕರ್ ನಿರ್ದೇಶನ!

  ನಟ ಯಶ್ 19ನೇ ಸಿನಿಮಾ ಯಾವುದು ಎನ್ನುವುದಕ್ಕೆ 3 ಉತ್ತರಗಳಿದ್ದವು. ಒಂದು ನರ್ತನ್ ನಿರ್ದೇಶನ, ಮತ್ತೊಂದು ಕೆಜಿಎಫ್ 3, ಇನ್ನುಂದು ತಮಿಳು ನಿರ್ದೇಶಕ ಶಂಕರ್. ಈಗ ನರ್ತನ್ ಸಿನಿಮಾ ಮುಂದೂಡಲಾಗಿದೆ. ಇನ್ನು 'ಕೆಜಿಎಫ್ 3' ಮತ್ತು ಶಂಕರ್ ಸಿನಿಮಾಗಳು ಮಾತ್ರ ಲಿಸ್ಟ್‌ನಲ್ಲಿ ಇವೆ. ಈ ಚಿತ್ರಗಳಲ್ಲೇ ಯಾವುದಾದರೂ ಕೈಗೆತ್ತಿಕೊಳ್ಳುತ್ತಾರ ಯಶ್ ಅಥವಾ ಬೇರೆ ಸರ್ಪ್ರೈಸ್ ಕೊಡ್ತಾರಾ ಅಂತ ಕಾದು ನೋಡಬೇಕಿದೆ.

  English summary
  New Gossip About Yash Remuneration For Y19, Yash Name In Highest Paid Actor List, know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X