Niharika Konidela: 2ನೇ ಮದುವೆಗೆ ನಿಹಾರಿಕಾ ಮಾಜಿ ಪತಿ ಚೈತನ್ಯಾ ತಯಾರಿ? ಹುಡ್ಗಿ ಯಾರು?

ತೆಲುಗು ನಟ ಚಿರಂಜೀವಿ ಸಹೋದರ ನಾಗಬಾಬು ಮಗಳುಪುತ್ರಿ ನಿಹಾರಿಕಾ ಮತ್ತು ಚೈತನ್ಯ ಜೊನ್ನಲಗಡ್ಡ ಇತ್ತೀಚೆಗೆ ಡಿವೋರ್ಸ್ ಪಡೆದಿದ್ದರು. ಮೂರು ವರ್ಷಗಳ ಹಿಂದೆ ಇಬ್ಬರು ಅರೇಂಜ್ಡ್ ಮ್ಯಾರೇಜ್ ಮಾಡಿಕೊಂಡಿದ್ದರು. ಮದುವೆಯಾದ ಎರಡು ವರ್ಷಕ್ಕೆ ದಂಪತಿ ದೂರಾದರು. ಇದೀಗ ಚೈತನ್ಯ ಜೊನ್ನಲಗಡ್ಡ 2ನೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ.

ಜೈಪುರದ ಉದಯಪುರ ಅರಮನೆಯಲ್ಲಿ ಬಹಳ ನಿಹಾರಿಕಾ ಚೈತನ್ಯಾ ಮದುವೆ ನಡೆದಿತ್ತು. ಈ ವರ್ಷದ ಆರಂಭದಲ್ಲೇ ಇಬ್ಬರು ಡಿವೋರ್ಸ್ ಪಡೆಯುತ್ತಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಬಳಿಕ ಇಬ್ಬರು ಅಧಿಕೃತವಾಗಿ ಈ ವಿಚಾರವನ್ನು ಘೋಷಿಸಿದರು. ಸದ್ಯ ನಿಹಾರಿಕಾ ಮತ್ತು ಚೈತನ್ಯ ಇಬ್ಬರೂ ತಮ್ಮ ವೈಯಕ್ತಿಕ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದಾರೆ. ನಿಹಾರಿಕಾ ಸಿನಿಮಾಗಳತ್ತ ಗಮನ ಹರಿಸಿದ್ದಾರೆ.

Chaitanya -jonnalagadda-2nd-marriage

ತಮ್ಮದೇ ಬ್ಯಾನರ್‌ನಲ್ಲಿ ನಿಹಾರಿಕಾ ವೆಬ್ ಸೀರಿಸ್ ನಿರ್ಮಿಸುತ್ತಿದ್ದಾರೆ. ನಟಿಯಾಗಿಯೂ ರೀ ಎಂಟ್ರಿ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಜಿಮ್, ವರ್ಕೌಟ್, ಟ್ರಿಪ್, ಫೋಟೊಶೋಟ್‌ ಫೋಟೊಗಳನ್ನುಇ ಶೇರ್ ಮಾಡುತ್ತಿರುತ್ತಾರೆ. ಡಿವೋರ್ಸ್ ಬಳಿಕ ಆ ನೋವಿನಿಂದ ಹೊರ ಬರಲು ಪ್ರವಾಸ ಕೈಗೊಂಡಿದ್ದರು. ಇದೀಗ ಮತ್ತೆ ಕರಿಯರ್‌ ಕಡೆ ಮುಖ ಮಾಡಿದ್ದಾರೆ.

ಇದೀಗ ನಿಹಾರಿಕಾ ಮಾಜಿ ಪತಿ ಚೈತನ್ಯ ಬಗ್ಗೆ ಕ್ರೇಜಿ ಸುದ್ದಿಯೊಂದು ಹರಿದಾಡುತ್ತಿದೆ. ಅವರು ಶೀಘ್ರದಲ್ಲೇ ಮತ್ತೊಂದು ಮದುವೆ ಆಗುತ್ತಾರೆ ಎನ್ನಲಾಗ್ತಿದೆ. ಮದುವೆ ಮುರಿದು ಬಿದ್ದ ಕಾರಣ ಚೈತನ್ಯಾ ಸಾಕಷ್ಟು ನೊಂದಿದ್ದರು. ಅದರಿಂದ ಹೊರಬರಲು ಪ್ರವಾಸ ಕೈಗೊಂಡಿದ್ದರು. ಮತ್ತೆ ಮದುವೆ ಬೇಡ ಎಂದುಕೊಂಡಿದ್ದರಂತೆ. ಆದರೆ ಮನೆಯವರ ಒತ್ತಾಯದ ಮೇರೆಗೆ 2ನೇ ಮದುವೆಗೆ ಸಿದ್ಧರಾಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಬೇರೆ ವಿಧಿ ಇಲ್ಲದೇ ಎರಡನೇ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ಶುರುವಾಗಿದೆ.

ತಮ್ಮ ಫ್ಯಾಮಿಲಿಗೆ ತುಂಬಾ ಆತ್ಮೀಯರಾಗಿರುವ ಐಪಿಎಸ್ ಅಧಿಕಾರಿಯೊಬ್ಬರ ಮಗಳೊಂದಿಗೆ ಚೈತನ್ಯ ಎರಡನೇ ಮದುವೆಗೆ ರೆಡಿಯಾಗುತ್ತಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಎರಡೂ ಮನೆಯವರು ಮಾತನಾಡಿ ಓಕೆ ಅಂದುಕೊಂಡಿದ್ದು ಮದುವೆ ಮುಹೂರ್ತಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದ್ದು ಎಷ್ಟರಮಟ್ಟಿಗೆ ನಿಜ ಅನ್ನೋದು ಗೊತ್ತಾಗಬೇಕಿದೆ.

Chaitanya -jonnalagadda-2nd-marriage

ಇತ್ತೀಚೆಗೆ ನಿಹಾರಿಕಾ ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಬಳಿಕ ಅದರಲ್ಲಿ ಸುಳ್ಳುಸುದ್ದಿ ಅನ್ನೋದು ಗೊತ್ತಾಗಿತ್ತು. ನಿಹಾರಿಕಾ ಸದ್ಯಕ್ಕೆ ಮದುವೆ ಯೋಚನೆ ಮಾಡುತ್ತಿಲ್ಲ ಎನ್ನಲಾಗ್ತಿದೆ. ಸಹೋದರ ವರುಣ್ ತೇಜ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ನಾಯಕಿ ಲಾವಣ್ಯ ತ್ರಿಪಾಠಿಯನ್ನು ತೇಜ್ ಕೈ ಹಿಡಿಯುತ್ತಿದ್ದಾರೆ. ಈಗಾಗಲೇ ಮದುವೆ ಸಿದ್ಧತೆ ಶುರುವಾಗಿದೆ. ಮದುವೆ ದಿನಾಂಕ ಫಿಕ್ಸ್ ಆಗಬೇಕಿದೆ. ಸಹೋದರನ ಮದುವೆ ಬಳಿಕ ನಿಹಾರಿಕಾ ಸ್ವಲ್ಪ ಗ್ಯಾಪ್ ತೆಗೆದುಕೊಂಡು ಎರಡನೇ ಮದುವೆಯಾಗುವ ಸಾಧ್ಯತೆ ಇದೆ ಎನ್ನುವ ಚರ್ಚೆ ನಡೀತಿದೆ.

ಚಿರಂಜೀವಿ ಸಹೋದರ ನಾಗಬಾಬು ಪೋಷಕ ನಟರಾಗಿ ನಿರ್ಮಾಪಕರಾಗಿ ಗುರ್ತಿಸಿಕೊಂಡಿದ್ದಾರೆ. ಅವರ ಮುದ್ದಿನ ಮಗಳು ನಿಹಾರಿಕಾ ಕೋನಿದೇಲ 2016ರಲ್ಲಿ 'ಒಕ ಮನಸು' ಎನ್ನುವ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. 'ಹ್ಯಾಪಿ ವೆಡ್ಡಿಂಗ್', 'ಸೂರ್ಯಕಾಂತಂ' ಎನ್ನುವ ಚಿತ್ರಗಳಲ್ಲೂ ನಟಿಸಿದ್ದಾರೆ. ಬಳಿಕ ಮದುವೆ ಆಗಿ ಪರ್ಸನಲ್ ಲೈಫ್‌ನಲ್ಲಿ ಬ್ಯುಸಿ ಆಗಿದ್ದರು. ಆಗೊಮ್ಮೆ ಈಗೊಮ್ಮೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಚಿರು ನಟನೆಯ 'ಸೈರಾ' ಚಿತ್ರದ ಸಣ್ಣ ಪಾತ್ರದಲ್ಲಿ ಮಿಂಚಿದ್ದರು.

ಚೈತನ್ಯ ತಂದೆ ಪ್ರಭಾಕರ್, ಆಂಧ್ರ ಪೊಲೀಸ್ ಇಲಾಖೆಯಲ್ಲಿ ಐಜಿಪಿ. ಎಂಬಿಎ ಪದವಿ ಪಡೆದ ಬಳಿಕ ಸೂರ್ಯಾ ಎಲಿಕ್ಸೈರ್ಸ್‌ ಸಂಸ್ಥೆಯಲ್ಲಿ ಉದ್ಯೋಗ ಆರಂಭಿಸಿದ ಚೈತನ್ಯ, ಮುಂದೆ ಆಂಧ್ರ ಸರ್ಕಾರದ ಕೆಪಿಎಂಜಿ ಕಾರ್ಯಕ್ರಮದ ವ್ಯವಸ್ಥಾಪಕರಾಗಿ ಕೆಲಸ ಮಾಡಿದರು. ಟೆಕ್ ಮಹೀಂದ್ರಾದಲ್ಲಿ ಕೂಡ ಕೆಲಸ ಮಾಡಿದ್ದರು. ಆದರೆ ಚಿತ್ರರಂಗಕ್ಕೂ ಚೈತನ್ಯಾಗೂ ಯಾವುದೇ ನಂಟು ಇಲ್ಲ.

More from Filmibeat

English summary
Niharika Konidela's Ex Husband Chaitanya Jonnalagadda Is Preparing For 2nd Marriage?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X