ಯಶ್ ಹಿಂದೆ ಬಿದ್ದ ಬಾಲಿವುಡ್ ನಿರ್ದೇಶಕ! ರಣ್ಬೀರ್ ಕಪೂರ್ ಎದುರು ಅಬ್ಬರಿಸ್ತಾರಾ 'ರಾಕಿಭಾಯ್'

By ಫಿಲ್ಮಿಬೀಟ್ ಡೆಸ್ಕ್

'ಕೆಜಿಎಫ್ 2' ಸಿನಿಮಾದ ಗ್ರ್ಯಾಂಡ್ ಸಕ್ಸಸ್ ಬಳಿಕ ನಟ ಯಶ್‌ಗೆ ಅವರದ್ದೇ ಆದ ಬ್ರ್ಯಾಂಡ್ ಸೃಷ್ಟಿಯಾಗಿದೆ. ಆ ಬ್ರ್ಯಾಂಡ್‌ ಅನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ಕಾರಣದಿಂದ ಮತ್ತೊಂದು ಮೆಗಾ ಬ್ಲಾಕ್ ಬಸ್ಟರ್ ಸಿನಿಮಾವನ್ನೇ ನೀಡುವ ಅಚಲ ಗುರಿಯಿಂದ ಯಶ್ ಕತೆಗಾಗಿ ಹುಡುಕಾಟ ನಡೆಸಿದ್ದಾರೆ.

'ಕೆಜಿಎಫ್' ಸಿನಿಮಾದ ಬಳಿಕ ಹಲವಾರು ಅವಕಾಶಗಳು ಯಶ್ ಅನ್ನು ಅರಸಿ ಬಂದಿವೆ. ಆದರೆ ಯಾವುದನ್ನೂ ಒಪ್ಪಿಕೊಳ್ಳದ ಯಶ್, ಹೊಸ ಹುಡುಕಾಟದಲ್ಲಿ ತೊಡಗಿದ್ದಾರೆ.

ಆದರೆ ಇದೀಗ ಬಾಲಿವುಡ್ ನಿರ್ದೇಶಕರೊಬ್ಬರು ಬಾರಿ ಬಜೆಟ್ ಸಿನಿಮಾ ಒಂದನ್ನು ಕೈಯಲ್ಲಿ ಹಿಡಿದುಕೊಂಡು ಯಶ್ ಬೆನ್ನು ಬಿದ್ದಿದ್ದಾರೆ. ಆದರೆ ಯಶ್ ಬಾಲಿವುಡ್ ಆಫರ್ ಅನ್ನು ಒಪ್ಪಿಕೊಳ್ಳುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ಬಾಲಿವುಡ್‌ನಿಂದ ಮತ್ತೊಂದು ರಾಮಾಯಣ ಆಧರಿತ ಸಿನಿಮಾ

ಬಾಲಿವುಡ್‌ನಿಂದ ಮತ್ತೊಂದು ರಾಮಾಯಣ ಆಧರಿತ ಸಿನಿಮಾ

ದಕ್ಷಿಣ ಭಾರತದ ಸಿನಿಮಾಗಳಿಂದ ಸ್ಪೂರ್ತಿ ಪಡೆದು ಬಾಲಿವುಡ್‌ನಲ್ಲಿ ಸಹ ಪೌರಾಣಿಕ, ಐತಿಹಾಸಿಕ ಸಿನಿಮಾಗಳು ಸಾಲು-ಸಾಲಾಗಿ ಸೆಟ್ಟೇರುತ್ತಿದ್ದು, ಈಗಾಗಲೇ ರಾಮಾಯಣ ಕತೆ ಆಧರಿಸಿದ 'ಆದಿಪುರುಷ್' ಸಿನಿಮಾ ನಿರ್ಮಾಣವಾಗಿದ್ದು, ಬಿಡುಗಡೆಗೆ ಕಾಯುತ್ತಿದೆ. 'ಆದಿಪುರುಷ್' ನ ಮೇಕಿಂಗ್ ಬಗ್ಗೆ ಋಣಾತ್ಮಕ ವಿಮರ್ಶೆಗಳು ಹರಿದಾಡುತ್ತಿರುವ ಹೊತ್ತಿನಲ್ಲಿಯೇ ಮತ್ತೊಂದು ರಾಮಾಯಣ ಆಧರಿಸಿದ ಸಿನಿಮಾ ಸೆಟ್ಟೇರಲು ತಯಾರಾಗಿದ್ದು, ಈ ಸಿನಿಮಾದ ಪ್ರಮುಖ ಪಾತ್ರ ನಿರ್ವಹಿಸವಂತೆ ಯಶ್ ಅವರನ್ನು ಕೇಳಲಾಗಿದೆ.

ರಾವಣನ ಪಾತ್ರದಿಂದ ಹಿಂದೆ ಸರಿದ ಹೃತಿಕ್ ರೋಷನ್

ರಾವಣನ ಪಾತ್ರದಿಂದ ಹಿಂದೆ ಸರಿದ ಹೃತಿಕ್ ರೋಷನ್

ಬಾಲಿವುಡ್‌ನ ಪ್ರತಿಭಾವಂತ ನಿರ್ದೇಶಕರಲ್ಲೊಬ್ಬರಾದ ನಿತೇಶ್ ತಿವಾರಿ ರಾಮಾಯಣವನ್ನು ಅದ್ಧೂರಿಯಾಗಿ ತೆರೆಗೆ ತರಲು ಸಿದ್ಧರಾಗಿದ್ದು, ರಣ್ಬೀರ್ ಕಪೂರ್ ರಾಮನಾಗಿಯೂ ಹೃತಿಕ್ ರೋಷನ್ ಅನ್ನು ರಾವಣನಾಗಿಯೂ ಊಹಿಸಿ ಚಿತ್ರಕತೆ ಸಿದ್ಧಪಡಿಸಿದ್ದಾರೆ. ರಣ್ಬೀರ್ ಕಪೂರ್, ರಾಮನ ಪಾತ್ರಕ್ಕೆ ಒಪ್ಪಿಗೆ ನೀಡಿದ್ದಾರಾದರೂ ಹೃತಿಕ್ ರೋಷನ್ ರಾವಣನಾಗಲು ಹಿಂದಡಿ ಇಟ್ಟಿದ್ದಾರೆ. ನಿತೇಶ್ ತಿವಾರಿ ಜೊತೆಗೆ ಹಲವು ಸುತ್ತುಗಳ ಮಾತುಕತೆ ವಿಫಲವಾದ ಬಳಿಕ ಹೃತಿಕ್ ರೋಷನ್ ಈ ಪ್ರಾಜೆಕ್ಟ್‌ನಿಂದ ಹೊರಗುಳಿದಿದ್ದಾರೆ.

ಯಶ್‌ಗೆ ದುಂಬಾಲು ಬಿದ್ದಿರುವ ನಿರ್ಮಾಪಕ

ಯಶ್‌ಗೆ ದುಂಬಾಲು ಬಿದ್ದಿರುವ ನಿರ್ಮಾಪಕ

ಇದೀಗ ರಾವಣನ ಪಾತ್ರವನ್ನು ನಿರ್ವಹಿಸುವಂತೆ ನಿತೇಶ್ ತಿವಾರಿ ಹಾಗೂ ಪ್ರಾಜೆಕ್ಟ್‌ನ ನಿರ್ಮಾಪಕರಲ್ಲಿ ಒಬ್ಬರಾದ ಮಧು ಮಂತೇನಾ ಯಶ್‌ ಬಳಿ ಮನವಿ ಮಾಡಿದ್ದು, ಯಶ್, ಚಿತ್ರಕತೆ ಹಾಗೂ ತಮ್ಮ ಪಾತ್ರದ ಪೋಷಣೆ ಕುರಿತಂತೆ ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ. ಮಧು ಮಂತೇನಾ ಒಡೆತನದ ಮ್ಯಾನೇಜ್‌ಮೆಂಟ್ ಸಂಸ್ಥೆಯೇ ಯಶ್‌ ಅವರ ಮೀಡಿಯಾ ಹಾಗೂ ಇತರ ವಿಷಯಗಳ ಮ್ಯಾನೇಜ್‌ಮೆಂಟ್ ಮಾಡುತ್ತಿದ್ದು ಇದೇ ಕಾರಣದಿಂದ ಮಧು ಮಂತೇನಾ ಯಶ್‌ ಅವರಿಗೆ ಚಿತ್ರಕತೆ ನೀಡಿ ಪಾತ್ರವನ್ನು ಒಪ್ಪಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಒಪ್ಪಿಕೊಳ್ಳುತ್ತಾರೆಯೇ ಯಶ್?

ಒಪ್ಪಿಕೊಳ್ಳುತ್ತಾರೆಯೇ ಯಶ್?

ಸಿನಿಮಾದಲ್ಲಿ ರಾವಣನ ಪಾತ್ರವನ್ನು 'ವಿಲನ್‌' ಎಂಬ ರೀತಿಯಲ್ಲಲ್ಲದೆ 'ಮಾಸ್ ನಾಯಕ' ಅಥವಾ ಆಂಟಿ ಹೀರೋ ರೀತಿಯಲ್ಲಿ ಬಿಂಬಿಸಲಾಗಿದೆ ಎನ್ನಲಾಗಿದ್ದು, ಪಾತ್ರದಲ್ಲಿ ನಟಿಸಲು ಯಶ್ ಒಪ್ಪುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಯಶ್, ಸಾರ್ವಜನಿಕವಾಗಿಯೂ, ಸಿನಿಮಾಗಳಲ್ಲಿಯೂ ತಮ್ಮ ಇಮೇಜಿನ ಹೆಚ್ಚು ಜಾಗೃತೆ ಮತ್ತು ಕಾಳಜಿ ವಹಿಸಿದ್ದಾರೆ ಹಾಗಾಗಿ ಅವರ ಆಯ್ಕೆ ಕುತೂಹಲ ಮೂಡಿಸಿದೆ.

More from Filmibeat

English summary
Nitesh Tiwari offered role to rocking star Yash in his new movie which is an adaptation of Ramayana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X