'ರಾಧೆ ಶ್ಯಾಮ್' ಚಿತ್ರದಲ್ಲಿ ವಿಲನ್ ಇಲ್ಲ, ಈ ಹಿಂದೆಯೂ ಪ್ರಭಾಸ್ ಚಿತ್ರಕ್ಕೆ ವಿಲನ್ ಇರಲಿಲ್ಲ!

ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದ ರಿಲೀಸ್ ದಿನಾಂಕವನ್ನೂ ಕೂಡ ಚಿತ್ರತಂಡ ಈಗಾಗಲೇ ಪ್ರಕಟ ಮಾಡಿದೆ. ಮಾರ್ಚ್ 11ಕ್ಕೆ ರಾಧೆ ಶ್ಯಾಮ್ ಚಿತ್ರದ ಮೂಲಕ ಪ್ರಭಾಸ್ ತೆರೆಗಪ್ಪಳಿಸಲಿದ್ದಾರೆ.

ರಾಧೆ ಶ್ಯಾಮ್ ಚಿತ್ರದ ಟೀಸರ್, ಹಾಡುಗಳು ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಹುಟ್ಟು ಹಾಕಿವೆ. ಅಷ್ಟೇ ಅಲ್ಲ ಈ ಚಿತ್ರವನ್ನು ಪ್ರಭಾಸ್ ಕೊಂಚ ಬ್ರೇಕ್‌ ಬಳಿಕ ಮಾಡುತ್ತಿದ್ದಾರೆ. ಹಾಗಾಗಿ ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಸದ್ಯ ಈ ಚಿತ್ರದ ಬಗ್ಗೆ ಒಂದು ವಿಶೇಷವಾದ ವಿಚಾರ ಹೊರ ಬಂದಿದೆ.

ರಾಧೆ ಶ್ಯಾಮ್ ಚಿತ್ರದಲ್ಲಿ ನಟ ಪ್ರಭಾಸ್‌ಗೆ ವಿಲನ್‌ಗಳು ಇಲ್ಲವಂತೆ. ಹಾಗಾಗಿ ಈ ಚಿತ್ರದಲ್ಲಿ ಪ್ರಭಾಸ್ ಆವರ ಫೈಟನ್ನು ನೀವು ಮಿಸ್ ಮಾಡಿಕೊಳ್ಳ ಬಹುದು. ಇಲ್ಲಿ ತನಕ ರಿಲೀಸ್ ಆದ, ಪೋಸ್ಟರ್, ಟೀಸರ್‌ಗಳಲ್ಲಿ ಖಳನಾಯಕನ ಪಾತ್ರದ ಬಗ್ಗೆ ಎಲ್ಲೂ ಹೇಳಲಾಗಿಲ್ಲ. ಪರಿಚಯವೂ ಆಗಿಲ್ಲ.

No Villain In Prabhas Starrer Radhe Shyam

ಈ ಚಿತ್ರದಲ್ಲಿ ನಾಯಕ, ನಾಯಕಿಯ ಬಾಳಿನಲ್ಲಿ ಎದುರಾಗುವ ಸನ್ನಿವೇಶಗಳೇ ವಿಲನ್ ಆಗಿರಲಿವೆಯಂತೆ. ಹಾಗಾಗಿ ಬೇರೆ ಸಿನಿಮಾಗಳ ರೀತಿ ಇಲ್ಲಿ ನಾಯಕ ಫೈಟ್ ಮಾಡಲು, ಸವಾಲು ಹಾಕಲು ಖಳನಾಯಕರಿಲ್ಲ. ಹಾಗಾಗಿ ಈ ಚಿತ್ರದಲ್ಲಿ ಪ್ರಭಾಸ್ ಅವರ ಭರ್ಜರಿ ಆ್ಯಕ್ಷನ್ ದೃಶ್ಯಗಳು ಇರುವುದಿಲ್ಲ.

ಈ ಹಿಂದೆ ಪ್ರಭಾಸ್ ಮಾಡಿದ್ದ 'ಮಿಸ್ಟರ್ ಪರ್ಫೆಕ್ಟ್' ಚಿತ್ರದಲ್ಲಿ ವಿಲನ್ ಇರಲಿಲ್ಲ. ಅದಾದ ಬಳಿಕ ಬಹಳ ಸಮಯದ ನಂತರ, ಪ್ರಭಾಸ್ ವಿಲನ್ ರಹಿತ ಚಿತ್ರ ಮಾಡುತ್ತಾರೆ. ಅದುವೆ 'ರಾಧೆ ಶ್ಯಾಮ್'. ಈ ವಿಚಾರ ಕೂಡ ಚಿತ್ರದ ಕತೆಯ ಮೇಲೆ ನಿರೀಕ್ಷೆ ಹುಟ್ಟು ಹಾಕಿದೆ.

ಈ ಚಿತ್ರ 1970ರ ಯುರೋಪ್‌ನಲ್ಲಿ ನಡೆಯುವ ಕಥೆ ಎಂದು ಹೇಳಲಾಗಿದೆ. ರಾಧಾ ಕೃಷ್ಣ ಕುಮಾರ್ ಬರೆದು ನಿರ್ದೇಶಿಸಿದ ಚಿತ್ರದಲ್ಲಿ ಭಾಗ್ಯಶ್ರೀ, ಸಚಿನ್ ಖೇಡೇಕರ್, ಸತ್ಯರಾಜ್, ಪ್ರಿಯದರ್ಶಿ ಪುಲಿಕೊಂಡ, ಮುರಳಿ ಶರ್ಮಾ, ಕುನಾಲ್ ರಾಯ್ ಕಪೂರ್, ರಿದ್ಧಿ ಕುಮಾರ್, ಸತ್ಯನ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ರೊಮ್ಯಾಂಟಿಕ್ ಡ್ರಾಮಾದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಕಮಾಲ್ ಮಾಡಲಿದ್ದಾರೆ.

ನಟ ಪ್ರಭಾಸ್ ಭವಿಷ್ಯ ಹೇಳುವ ವಿಕ್ರಮಾದಿತ್ಯನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಪ್ರೇರಣಾ ಎಂಬ ಹುಡುಗಿಯ ಪ್ರೀತಿಯ ಬಲೆಗೆ ನಾಯಕ ಬೀಳುತ್ತಾನೆ. ಆದರೆ ಮುಂದೆ ಅವರ ಲವ್ ಸ್ಟೋರಿಯಲ್ಲಿ ನಡೆಯುವುದೆಲ್ಲವೂ ಮ್ಯಾಜಿಕ್. ಇಡೀ ಚಿತ್ರವೇ ಒಂದು ರೀತಿ ಮ್ಯಾಜಿಕ್ ಸೃಷ್ಟಿಸಲಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ.

More from Filmibeat

English summary
No Villain In Prabhas And Pooja Hegde Starrer Radhe Shyam, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X