'KGF-2' ಬಗ್ಗೆ ಹೀಗೊಂದು ಸುದ್ದಿ: ರಾಕಿ ಭಾಯ್ ಜೊತೆ ಹೆಜ್ಜೆ ಹಾಕಿದ ಖ್ಯಾತ ಡ್ಯಾನ್ಸರ್

By ಫಿಲ್ಮ್ ಡೆಸ್ಕ್

ಇಡೀ ಭಾರತೀಯ ಸಿನಿಮಾರಂಗ ಕಾತರದಿಂದ ಕಾಯುತ್ತಿರುವ ಕೆಜಿಎಫ್-2 ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ಸುದ್ದಿಯೊಂದು ಕೇಳಿಬರುತ್ತಿದೆ. ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನೃತ್ಯಗಾರ್ತಿ ಮತ್ತು ನಟಿ ಕೆಜಿಎಫ್-2ನಲ್ಲಿ ರಾಕಿ ಭಾಯ್ ಜೊತೆ ಹೆಜ್ಜೆ ಹಾಕಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ರಾಕಿ ಭಾಯ್ ಯಶ್ ಜೊತೆ ಸೊಂಟ ಬಳುಕಿಸಿದ ಸುಂದರಿ ಮತ್ಯಾರು ಅಲ್ಲ ಸದ್ಯ ಬಾಲಿವುಡ್ ನಲ್ಲಿ ಡಾನ್ಸ್ ಕ್ರೇಜ್ ಕ್ರಿಯೇಟ್ ಮಾಡಿರುವ ಡಾನ್ಸರ್ ನೋರಾ ಫತೇಹಿ. ಚಿತ್ರದ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಇಂಗ್ಲಿಷ್ ನ ಕೆಲವು ವೆಬ್ ಸೈಟ್ ಗಳಲ್ಲಿ ವರದಿಯಾಗಿದೆ. ಮುಂದೆ ಓದಿ..

ಕೆಜಿಎಫ್-2ನಲ್ಲಿದೆ 'ಶೋಲೆ'ಯ ಮೆಹಬೂಬಾ ಹಾಡು

ಕೆಜಿಎಫ್-2ನಲ್ಲಿದೆ 'ಶೋಲೆ'ಯ ಮೆಹಬೂಬಾ ಹಾಡು

ಈ ಬಗ್ಗೆ ನೋರಾ ಆಗಲಿ ಅಥವಾ ಕೆಜಿಎಪ್-2 ಟೀಂ ತುಟಿಬಿಟ್ಟುತ್ತಿಲ್ಲ. ಈ ಬಗ್ಗೆ ಯಾವುದೇ ಸುಳಿವು ಕೂಡ ನೀಡಿಲ್ಲ. ವರದಿ ಪ್ರಕಾರ ಕೆಜಿಎಫ್-2ನಲ್ಲಿ ಅಮಿತಾಬ್ ಬಚ್ಚನ್ ನಟನೆಯ ಸೂಪರ್ ಹಿಟ್ ಶೋಲೆ ಸಿನಿಮಾದ ಮೆಹಬೂಬಾ ಮೆಹಬೂಬಾ...ಹಾಡನ್ನು ರಿ ಕ್ರಿಯೇಟ್ ಮಾಡಿದ್ದು, ಈ ಹಾಡಿಗೆ ನೋರಾ ಫತೇಹಿ ಮತ್ತು ಯಶ್ ಹೆಜ್ಜೆ ಹಾಕಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಹೈದರಾಬಾದ್ ನಲ್ಲಿ ಹಾಡಿನ ಚಿತ್ರೀಕರಣ

ಹೈದರಾಬಾದ್ ನಲ್ಲಿ ಹಾಡಿನ ಚಿತ್ರೀಕರಣ

ಈಗಾಗಲೇ ಹಾಡಿನ ಚಿತ್ರೀಕರಣ ಮಾಡಲಾಗಿದ್ದು ಫೆಬ್ರವರಿಯಲ್ಲೇ ಈ ಅದ್ಭುತ ಹಾಡನ್ನು ಸೆರೆಹಿಡಿಯಲಾಗಿದೆಯಂತೆ. ಈ ಹಾಡಿನ ಚಿತ್ರೀಕರಣಕ್ಕಾಗಿ ನೋರಾ ಫತೇಹಿ ಹೈದರಾಬಾದ್ ಗೆ ಆಗಮಿಸಿದ್ದರು ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಅಧಿಕೃತ ಮಾಹಿತಿ ಇನ್ನು ಬಹಿರಂಗವಾಗಿಲ್ಲ.

ಮೊದಲ ಭಾಗದಲ್ಲಿ ತಮನ್ನಾ-ಮೌನಿ ರಾಯ್ ಹೆಜ್ಜೆ ಹಾಕಿದ್ದರು

ಮೊದಲ ಭಾಗದಲ್ಲಿ ತಮನ್ನಾ-ಮೌನಿ ರಾಯ್ ಹೆಜ್ಜೆ ಹಾಕಿದ್ದರು

ಅಂದಹಾಗೆ ಕೆಜಿಎಫ್ ಮೊದಲ ಭಾಗದಲ್ಲಿ ನಟಿ ತಮನ್ನಾ ಮತ್ತು ಹಿಂದಿ ವರ್ಷನ್ ಗೆ ಮೌನಿ ರಾಯ್ ಹೆಜ್ಜೆ ಹಾಕಿದ್ದರು. ಅಲ್ಲೂ ಕೂಡ ಹಳೆಯ ಹಾಡನ್ನೇ ರಿ ಕ್ರಿಯೇಟ್ ಮಾಡಲಾಗಿತ್ತು. ಗಲೀ ಗಲೀ ಮತ್ತು ಕನ್ನಡದ ಜೋಕೆ ಹಾಡನ್ನು ಬಳಸಿಕೊಳ್ಳಲಾಗಿತ್ತು. ಪಾರ್ಟ್-2ನಲ್ಲೂ ಅದೇ ಪ್ಲಾನ್ ಮಾಡಲಾಗಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಜುಲೈ 16ಕ್ಕೆ ರಿಲೀಸ್ ಆಗುತ್ತಾ?

ಜುಲೈ 16ಕ್ಕೆ ರಿಲೀಸ್ ಆಗುತ್ತಾ?

ಈಗಾಗಲೇ ಚಿತ್ರೀಕರಣ ಮುಗಿಸಿರುವ ಕೆಜಿಎಫ್-2 ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಈಗಾಗಲೇ ಸಿನಿಮಾತಂಡ ಜುವೈ 16ಕ್ಕೆ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿತ್ತು. ಆದರೀಗ ಕೊರೊನಾ ಹಾವಳಿ ಹೆಚ್ಚಾದ ಕಾರಣ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

More from Filmibeat

English summary
Famous Dancaer Nora Fatehi likely to dance with Rocking Star Yash in KGF-2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X