ಆಲಿಯಾ ಭಟ್ ನಟಿಸಬೇಕಿದ್ದ ಪಾತ್ರ ಕನ್ನಡತಿ ರಶ್ಮಿಕಾ ಮಂದಣ್ಣ ಪಾಲು!

ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಚಿತ್ರರಂಗದಲ್ಲಿ ಕಡಿಮೆ ಸಮಯದಲ್ಲಿಯೇ ಏರಿರುವ ಎತ್ತರ ಸಾಮಾನ್ಯದ್ದಲ್ಲ. 'ಕಿರಿಕ್ ಪಾರ್ಟಿ' ಕನ್ನಡ ಸಿನಿಮಾದಿಂದ ಬೆಳಕಿಗೆ ಬಂದ ಈ ಚೆಲುವೆ ಈಗ ಬಹುಭಾಷಾ ತಾರೆ!

ತೆಲುಗು ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿರುವ ರಶ್ಮಿಕಾ ಮಂದಣ್ಣ, ಬಾಲಿವುಡ್‌ನಲ್ಲಿಯೂ ತಮ್ಮ ಕಮಾಲ್ ಪ್ರದರ್ಶಿಸಿದ್ದಾರೆ. ಬಾಲಿವುಡ್‌ನಲ್ಲಿ ಸತತ ಎರಡು ಸಿನಿಮಾ ಮಾಡಿರುವ ರಶ್ಮಿಕಾ ಮಂದಣ್ಣ ಮೂರನೇ ಸಿನಿಮಾಕ್ಕೂ ಸಹಿ ಹಾಕಿದ್ದಾರೆ ಎನ್ನಲಾಗುತ್ತಿದೆ.

ತಮ್ಮ ಚೆಲುವು ಹಾಗೂ ಪ್ರತಿಭೆಯಿಂದ ದೊಡ್ಡ ದೊಡ್ಡ ಹೀರೋಯಿನ್‌ಗಳಿಗೂ ಸ್ಪರ್ಧೆ ನೀಡುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ, ನಟಿ ಪೂಜಾ ಹೆಗ್ಡೆ ಪಾಲಾಗಬೇಕಿದ್ದ ಹಲವು ಸಿನಿಮಾಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ರಶ್ಮಿಕಾ, ಇದೀಗ ಬಾಲಿವುಡ್‌ನ ಆಲಿಯಾ ಭಟ್‌ ಸಿಗಬೇಕಿದ್ದ ಪಾತ್ರವನ್ನೂ ತಮ್ಮತ್ತ ಸೆಳೆದುಕೊಂಡಿದ್ದಾರೆ.

ಆಲಿಯಾ ಪಾತ್ರ ರಶ್ಮಿಕಾ ತೆಕ್ಕೆಗೆ

ಆಲಿಯಾ ಪಾತ್ರ ರಶ್ಮಿಕಾ ತೆಕ್ಕೆಗೆ

ಇತ್ತೀಚೆಗಷ್ಟೆ ವಿವಾಹವಾದ ನಟಿ ಆಲಿಯಾ ಭಟ್ ಈಗಾಗಲೇ ಒಂದು ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ, ಅದುವೇ ಸೂಪರ್ ಹಿಟ್ 'RRR'. ಅದಾದ ಬಳಿಕ ಮತ್ತೆ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುವ ಆಸೆಯನ್ನು ಆಲಿಯಾ ವ್ಯಕ್ತಪಡಿಸಿದ್ದರು. ಅದಕ್ಕೆ ಸರಿಯಾಗಿ, ಜೂ ಎನ್‌ಟಿಆರ್ ಜೊತೆಗೆ ಹೊಸ ಸಿನಿಮಾವೊಂದಕ್ಕೆ ಆಲಿಯಾರನ್ನು ಆಯ್ಕೆ ಸಹ ಮಾಡಲಾಗಿತ್ತು. ಆದರೆ ಈಗ ಆ ಪಾತ್ರ ರಶ್ಮಿಕಾ ಮಂದಣ್ಣಾ ಪಾಲಾಗಿದೆ.

ದುಬಾರಿ ನಟಿ ಆಲಿಯಾ ಭಟ್

ದುಬಾರಿ ನಟಿ ಆಲಿಯಾ ಭಟ್

ಆಲಿಯಾ ಭಟ್‌ ಈಗಷ್ಟೆ ವಿವಾಹವಾಗಿದ್ದು, ಅವರ ಬತ್ತಳಿಕೆಯಲ್ಲಿ ಸಾಲು-ಸಾಲು ಸಿನಿಮಾಗಳು ಈಗಾಗಲೇ ಇವೆ. ಅಲ್ಲದೆ, ಆಲಿಯಾ ಭಟ್ ಬಹಳ ದುಬಾರಿ ನಟಿ ಸಹ ಹೌದು, ಅದೇ ಕಾರಣಕ್ಕೆ ಆಲಿಯಾ ಭಟ್ ಬದಲಿಗೆ ಜೂ ಎನ್‌ಟಿಆರ್ ಜೊತೆ ನಾಯಕಿಯಾಗಿ ರಶ್ಮಿಕಾ ಮಂದಣ್ಣರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಚಿತ್ರತಂಡ ಅಂದುಕೊಂಡತೆಯೇ ಆದರೆ ಜೂ.ಎನ್‌ಟಿಆರ್‌ರ 30 ನೇ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಆಗಲಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ

ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ

ಇನ್ನು ರಶ್ಮಿಕಾ ಮಂದಣ್ಣ ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ನಟಿಸಿರುವ ಬಾಲಿವುಡ್‌ನ 'ಮಿಷನ್ ಮಜ್ನು' ಹಾಗೂ ಅಮಿತಾಬ್ ಬಚ್ಚನ್ ಜೊತೆ ನಟಿಸಿರುವ 'ಗುಡ್ ಬೈ' ಸಿನಿಮಾಗಳು ಬಿಡುಗಡೆ ಆಗಬೇಕಿದೆ. ಇದರ ಜೊತೆಗೆ ಸೂಪರ್ ಹಿಟ್ ಸಿನಿಮಾ 'ಪುಷ್ಪ'ದ ಮುಂದಿನ ಭಾಗದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಜೊತೆಗೆ ತಮಿಳಿನ ಸ್ಟಾರ್ ನಟ ವಿಜಯ್‌ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ನೆರವೇರಿದೆ. ರಣ್ಬೀರ್ ಕಪೂರ್ ಜೊತೆ 'ಅನಿಮಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದುಲ್ಕರ್ ಸಲ್ಮಾನ್ ಜೊತೆ 'ರಾಮ-ಸೀತ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂ ಚಿತ್ರರಂಗದಿಂದಲೂ ರಶ್ಮಿಕಾಗೆ ಬುಲಾವ್ ಬಂದಿದೆ.

ಜೂ ಎನ್‌ಟಿಆರ್ ಬಹಳ ಬ್ಯುಸಿ

ಜೂ ಎನ್‌ಟಿಆರ್ ಬಹಳ ಬ್ಯುಸಿ

ಇನ್ನು ನಟ ಜೂ.ಎನ್‌ಟಿಆರ್, 'RRR' ಸಿನಿಮಾದ ಯಶಸ್ಸಿನ ಅಲೆಯ ಮೇಲೆ ತೇಲುತ್ತಿದ್ದು, ತಮ್ಮ ಮೂವತ್ತನೇ ಸಿನಿಮಾವನ್ನು ಅವರು ಕೊರಟಾಲ ಶಿವ ಜೊತೆ ಮಾಡುತ್ತಿದ್ದಾರೆ. ಆ ಸಿನಿಮಾದ ಬಳಿಕ ಕನ್ನಡಿಗ ಪ್ರಶಾಂತ್ ನೀಲ್ ಜೊತೆಗೆ 'ನ್ಯೂಕ್ಲಿಯರ್' ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ನಂತರ ನಟ ಬಾಲಕೃಷ್ಣ ಜೊತೆಗೆ ಹೊಸ ಸಿನಿಮಾದಲ್ಲಿ ಜೂ ಎನ್‌ಟಿಆರ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

More from Filmibeat

English summary
Rashmika Mandanna will act with Jr NTR in his next movie. Earlier Alia Bhatt was the first choice for the role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X