'ರಿಚರ್ಡ್ ಆಂಟನಿ' ಚಿತ್ರದಿಂದ ಹೊರಬಂದ ಹೊಂಬಾಳೆ? ಆ ಸಂಸ್ಥೆ ಜೊತೆ ಕೈ ಜೋಡಿಸುತ್ತಾರಾ ರಕ್ಷಿತ್?

ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಲಿರುವ 'ರಿಚರ್ಡ್ ಆಂಟನಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಸಿನಿಮಾ ಕತೆ, ಚಿತ್ರಕತೆ ಸಿದ್ಧವಾಗಿದೆ. ಸಣ್ಣ ಟೀಸರ್ ಸಮೇತ ಬಹಳ ಹಿಂದೆಯೇ ಸಿನಿಮಾ ಘೋಷಣೆ ಆಗಿತ್ತು. ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುವುದು ಖಚಿತವಾಗಿತ್ತು. ಆದರೆ ಇತ್ತೀಚೆಗೆ ಈ ಬಗ್ಗೆ ಅನುಮಾನ ಶುರುವಾಗಿದೆ.

ಹೊಂಬಾಳೆ ಸಂಸ್ಥೆ 'ರಿಚರ್ಡ್ ಆಂಟನಿ' ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದಿದೆ, ರಕ್ಷಿತ್ ಶೆಟ್ಟಿ ಖುದ್ದು ಸಿನಿಮಾ ನಿರ್ಮಾಣ ಮಾಡುತ್ತಾರೆ? ಎನ್ನುವ ವದಂತಿ ಹರಿದಾಡುತ್ತಿದೆ. ಈ ಬಗ್ಗೆ ಯಾರೊಬ್ಬರು ಪ್ರತಿಕ್ರಿಯಿಸದ ಕಾರಣ ಗಾಳಿಸುದ್ದಿಯನ್ನೇ ಕೆಲವರು ನಿಜವೆಂದು ನಂಬಿದ್ದಾರೆ. ಕೆಲ ಅಭಿಮಾನಿಗಳು ರಕ್ಷಿತ್ ಶೆಟ್ಟಿ ಪರ ನಿಂತು ಒಳ್ಳೆ ನಿರ್ಧಾರ, ನೀವೇ ಸಿನಿಮಾ ಮಾಡಿ ಎನ್ನುತ್ತಿದ್ದಾರೆ.

 noted banner join hands with Rakshit shetty for Richard Anthony

10 ವರ್ಷಗಳ ಹಿಂದೆ 'ಉಳಿದವರು ಕಂಡಂತೆ' ಸಿನಿಮಾ ಬಂದು ಹೋಗಿತ್ತು. ರಕ್ಷಿತ್ ಶೆಟ್ಟಿ ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದರು. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಆದರೆ ಒಂದು ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಬಳಿಕ ಕಲ್ಟ್ ಕ್ಲಾಸಿಕ್ ಸ್ಟೇಟಸ್ ಪಡೆದುಕೊಂಡಿತ್ತು. ಅದರಲ್ಲೂ ರಿಚರ್ಡ್ ಆಂಟನಿ ಆಗಿ ರಕ್ಷಿತ್ ಪರ್ಫಾರ್ಮನ್ಸ್ ಪ್ರೇಕ್ಷಕರಿಗೆ ಮಜಾ ಕೊಟ್ಟಿತ್ತು.

ರಿಚರ್ಡ್ ಆಂಟನಿ ಕುರಿತು ಒಂದು ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ಕೇಳಿದ್ದರು. ಅದೇ ಕಾರಣಕ್ಕೆ 'ಉಳಿದವರು ಕಂಡಂತೆ' ಸೀಕ್ವೆಲ್ ಘೋಷಣೆ ಆಗಿತ್ತು. ರಕ್ಷಿತ್ ಬಹಳ ವರ್ಷಗಳ ಬಳಿಕ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಹೊಂಬಾಳೆ ಸಂಸ್ಥೆ ಕೂಡ ಜೊತೆಯಾಗಿದ್ದರಿಂದ ದೊಡ್ಡಮಟ್ಟದಲ್ಲಿ ಸಿನಿಮಾ ಮೂಡಿ ಬರುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಈಗ ಹೊಂಬಾಳೆ ಹಾಗೂ ರಕ್ಷಿತ್ ನಡುವೆ ವೈಮನಸ್ಸು ಮೂಡಿದೆ. 'ರಿಚರ್ಡ್ ಆಂಟನಿ' ಚಿತ್ರವನ್ನು ಹೊಂಬಾಳೆ ನಿರ್ಮಾಣ ಮಾಡಲ್ಲ. ಹಾಗಾಗಿ ರಕ್ಷಿತ್ ಶೆಟ್ಟಿ ತಮ್ಮ ಪರಂವಃ ಸ್ಟುಡಿಯೋಸ್ ಸಂಸ್ಥೆ ಅಡಿಯಲ್ಲೇ ಸಿನಿಮಾ ನಿರ್ಮಾಣ ಮಾಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

 noted banner join hands with Rakshit shetty for Richard Anthony

ಇದೀಗ KVN ಪ್ರೊಡಕ್ಷನ್ಸ್ ಸಂಸ್ಥೆ ರಿಚರ್ಡ್ ಆಂಟನಿ ಸಿನಿಮಾ ನಿರ್ಮಾಣಕ್ಕೆ ರಕ್ಷಿತ್ ಶೆಟ್ಟಿ ಜೊತೆ ಕೈ ಜೋಡಿಸುತ್ತದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. KVN ಹಾಗೂ ರಕ್ಷಿತ್ ನಡುವೆ ಇತ್ತೀವೆಗೆ ಒಳ್ಳೆ ಬಾಂಧವ್ಯ ಇದೆ. ರಕ್ಷಿತ್ ನಿರ್ಮಿಸಿ ನಟಿಸಿದ 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳನ್ನು KVN ಪ್ರೊಡಕ್ಷನ್ಸ್ ವಿತರಣೆ ಮಾಡಿತ್ತು. 'ಟಾಕ್ಸಿಕ್' ಹಾಗೂ 'KD' ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಿಸುತ್ತಿದೆ. ದರ್ಶನ್-ಪ್ರೇಮ್ ಕಾಂಬಿನೇಷನ್‌ ಸಿನಿಮಾ ಕೂಡ ಘೋಷಣೆ ಆಗಿದೆ. ಇದೀಗ 'ರಿಚರ್ಡ್ ಆಂಟನಿ' ಸಿನಿಮಾ ನಿರ್ಮಾಣಕ್ಕೂ ಸಿಂಪಲ್ ಸ್ಟಾರ್ ಜೊತೆ ಕೈಜೋಡಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.

KVN ಹಾಗೂ ಪರಂವಃ ಜಂಟಿಯಾಗಿ 'ರಿಚರ್ಡ್ ಆಂಟನಿ' ಸಿನಿಮಾ ನಿರ್ಮಿಸಬಹುದು ಎನ್ನುವುದು ಕೆಲವರ ಲೆಕ್ಕಾಚಾರ. 'ರಿಚರ್ಡ್ ಆಂಟನಿ' ಚಿತ್ರದಿಂದ ಹೊಂಬಾಳೆ ಸಂಸ್ಥೆ ಹೊರಬಂದಿದೆ ಎನ್ನುವ ವದಂತಿ ಹೇಗಿ ಶುರುವಾಯಿತು ಎನ್ನುವುದು ಗೊತ್ತಿಲ್ಲ. ಆದರೆ ಇದೇ ವಿಚಾರದ ಬಗ್ಗೆ ಮಾಹಿತಿ ಇದ್ದ ಯೂಟ್ಯೂಬ್ ವಿಡಿಯೋಗೆ ಟ್ವಿಟ್ಟರ್‌ನಲ್ಲಿ ರಕ್ಷಿತ್ ಲೈಕ್ ಕೊಟ್ಟಿದ್ದರು ಎನ್ನಲಾಗ್ತಿದೆ. ಇದನ್ನು ನೋಡಿ ನೋಡಿ ಅಂತೆ ಕಂತೆ ಎಲ್ಲಾ ನಿಜ ಆಗುತ್ತದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬಹುದು ಎನ್ನುವ ಮಾತುಗಳು ಕೇಳಿಬರ್ತಿದೆ.

ಒಂದಲ್ಲ ಎರಡಲ್ಲ 4 ಬೇರೆ ಬೇರೆ ಸಿನಿಮಾಗಳನ್ನು ಮಾಡಲು ರಕ್ಷಿತ್ ಶೆಟ್ಟಿ ಕತೆ ಚಿತ್ರಕತೆ ಸಿದ್ಧಪಡಿಸಿದ್ದಾರೆ. 'ರಿಚರ್ಡ್ ಆಂಟನಿ' ಬಳಿಕ ಪುಣ್ಯಕೋಟಿ ಸರಣಿ ಹಾಗೂ 'ಮಿಡ್‌ನೈಟ್ ಮೋಕ್ಷ' ಸಿನಿಮಾಗಳನ್ನು ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಇನ್ನು ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೋ' ಸರಣಿ ಒಂದು ಹಂತಕ್ಕೆ ಸಕ್ಸಸ್ ಕಂಡಿತ್ತು.

More from Filmibeat

English summary
Is Hombale films out of Rakshit shetty's Richard Anthony;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X