ಹೆಚ್ಚು ಸಂಭಾವನೆ: 2ನೇ ಸ್ಥಾನಕ್ಕೇರಿದ ನಟಿ ಸಮಂತಾ

ನಟಿ ಸಮಂತಾ ಸದ್ಯ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಅದರಲ್ಲೂ ಸಮಂತಾ ವಿಚ್ಛೇದನದ ಬಳಿಕ ಹೆಚ್ಚಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಈಗ ಸಮಂತಾ ತಮ್ಮ ಸಂಭಾವನೆ ವಿಚಾರದ ಮೂಲಕ ಗಮನ ಸೆಳೆದಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್ 2'ನಲ್ಲಿ ಯಶಸ್ಸು ಪಡೆದ ಬಳಿಕ ಸಮಂತಾ ನಾನಾ ಪಾತ್ರಗಳ ಪ್ರಯೋಗಕ್ಕೆ ಇಳಿದಿದ್ದಾರೆ.

ಸಮಂತಾ ಸಂಭಾವನೆ ಎಷ್ಟು ಎನ್ನುವ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ. ಟಾಲಿವುಡ್ ವರದಿಯ ಪ್ರಕಾರ ಸಮಂತಾ ಸೌತ್‌ ನಟಿಯರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರಲ್ಲಿ ಎರಡೇ ಸ್ಥಾನದಲ್ಲಿ ಇದ್ದಾರೆ. ರಶ್ಮಿಕಾ, ಪೂಜಾ ಹೆಗ್ಡೆ, ಸಾಯಿ ಪಲ್ಲವಿ, ಕೀರ್ತಿ ಸುರೇಶ್ ಸೇರಿದಂತೆ ಹಲವು ನಟಿಯನ್ನು ಸಮಂತಾ ಹಿಂದಿಕ್ಕಿದ್ದಾರೆ.

ನಟಿ ಸಮಂತಾ ಈ ಹಿಂದೆ ಸಂಭಾವನೆ ವಿಚಾರಕ್ಕೆ ಹೆಚ್ಚು ಸದ್ದು ಮಾಡಿದ್ದು ಅಂದರೆ ಅದು ಪುಷ್ಪ ಚಿತ್ರದ ಹಾಡಿನ ಮೂಲಕ. ಪುಷ್ಪ ಚಿತ್ರದ 'ಊ ಅಂಟಾವ' ಹಾಡಿನಲ್ಲಿ ಡ್ಯಾನ್ಸ್ ಮಾಡಲು ಸಮಂತಾ ಅತಿ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನುವ ವಿಚಾರಕ್ಕೆ ಸಿಕ್ಕಾಪ್ಟೆ ಸುದ್ದಿ ಆಗಿದ್ದರು. ಈಗ ಅವರ ಸಿನಿಮಾ ಸಂಭಾವನೆ ಎಷ್ಟು ಎನ್ನುವುದು ರಿವೀಲ್ ಆಗಿದೆ.

ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಸಮಂತಾಗೆ 2ನೇ ಸ್ಥಾನ!

ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಸಮಂತಾಗೆ 2ನೇ ಸ್ಥಾನ!

ವರದಿಗಳ ಪ್ರಕಾರ ಪ್ರಸ್ತುತ ಸಮಂತಾ ಪ್ರತಿ ಪ್ರಾಜೆಕ್ಟ್‌ಗೆ 3 ಕೋಟಿ ರೂ. ಪಡೆಯುತ್ತಾರಂತೆ. ಈ ಮೂಲಕ ಸಮಂತಾ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿದ್ದಾರೆ. ಪ್ರತಿ ಸಿನಿಮಾಗೂ ಈಗ 3 ಕೋಟಿಗಿಂತಲೂ ಕಡಿಮೆ ಸಂಭಾವನೆ ಪಡೆಯುದಿಲ್ಲವಂತೆ. ಸಮಂತಾಗಿಂತಲೂ ಹೆಚ್ಚು ಸಂಭಾವನೆ ಪಡೆದು ಸೌತ್ ನಟಿಯರ ಪೈಕಿ ಮೊದಲ ಸ್ಥಾನದಲ್ಲಿ ಇರುವುದು ನಟಿ ನಯನ್ ತಾರಾ.

5ರಿಂದ 6 ಕೋಟಿ ನಯನ್ ತಾರ ಸಂಭಾವನೆ!

5ರಿಂದ 6 ಕೋಟಿ ನಯನ್ ತಾರ ಸಂಭಾವನೆ!

ಲೇಡಿ ಸೂಪರ್ ಸ್ಟಾರ್ ಅಂತಲೇ ಕರೆಸಿಕೊಳ್ಳುವ ನಟಿ ನಯನ್ ತಾರಾ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಂಬರ್ ಒನ್ ನಟಿ. ತಮಿಳು ತೆಲುಗು ಚಿತ್ರಗಳಲ್ಲಿ ಹೆಚ್ಚಿನ ಬೇಡಿಕೆ ಇರುವ ನಟಿ. ಹಾಗಾಗಿ ಸಮಂತಾಗಿಂತಲೂ ದುಪ್ಪಟ್ಟು ಸಂಭಾವನೆ ಪಡೆಯುತ್ತಾರೆ ನಯನ್ ತಾರ. ಈ ನಟಿ ಒಂದು ಚಿತ್ರಕ್ಕೆ ಸುಮಾರು 5-6 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ. ಹೆಚ್ಚಿನ ಸಂಭಾವನೆ ಇದ್ದರು ಈಕೆಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ.

ಪೂಜಾ ಹೆಗ್ಡೆ ಹಿಂದಿಕ್ಕಿದ ಸಮಂತಾ!

ಪೂಜಾ ಹೆಗ್ಡೆ ಹಿಂದಿಕ್ಕಿದ ಸಮಂತಾ!

ಈ ಸ್ಥಾನದಲ್ಲಿ ಪೂಜಾ ಹೆಗ್ಡೆ ಇದ್ದಾರೆ ಎನ್ನಲಾಗಿತ್ತು. ಈ ಮೊದಲು ನಟಿ ಪೂಜಾ ಹೆಗ್ಡೆ ಸಿನಿಮಾ ಒಂದಕ್ಕೆ 3 ಕೋಟಿ ಹಣ ಪಡೆಯುತ್ತಾರೆ ಎನ್ನಲಾಗಿತ್ತು. ಬಳಿಕ ಪೂಜಾ ಸಂಭಾವನೆ ಕಡಿಮೆ ಆಗಿದೆ ಎಂದು ವರದಿ ಆಗಿದೆ. ಹಾಗಾಗಿ ಸೌತ್ ಚಿತ್ರರಂಗದಲ್ಲಿ ಈಗ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯ ಸಾಲಿನಲ್ಲಿ ನಯನ್ ತಾರ ಮೊದಲಿದ್ದರೆ, ಸಮಂತಾ ಎರಡನೇ ಸ್ಥಾನದಲ್ಲಿ ಇದ್ದಾರೆ. ಪೂಜಾ ಹೆಗ್ಡೆ ನಂತರ ಸಾಲಿನಲ್ಲಿ ರಶ್ಮಿಕಾ ಮಂದಣ್ಣ, ಸಾಯಿ ಪಲ್ಲವಿ, ಕೀರ್ತಿ ಸುರೇಶ್ ಇದ್ದಾರೆ.

'ಊ ಅಂಟಾವಾ' ಹಾಡಿಗೆ ಹೆಚ್ಚಿನ ಸಂಭಾವನೆ ಪಡೆದುಕೊಂಡಿದ್ದ ನಟಿ ಸಮಂತಾ!

'ಊ ಅಂಟಾವಾ' ಹಾಡಿಗೆ ಹೆಚ್ಚಿನ ಸಂಭಾವನೆ ಪಡೆದುಕೊಂಡಿದ್ದ ನಟಿ ಸಮಂತಾ!

ವಿಚ್ಛೇದನದ ಬಳಿಕ ಸಮಂತಾ ಸಿನಿಮಾ ಬಿಟ್ಟು ಕಣ್ಮರೆಯಾಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಪುಷ್ಪ ಚಿತ್ರದ 'ಊ ಅಂಟಾವಾ' ಹಾಡಿನ ಮೂಲಕ ಬೆಂಕಿ ಕಿಡಿಯಂತೆ ಸಿಡಿದಿದ್ದಾರೆ. ಸಮಂತಾ ಅಂದುಕೊಳ್ಳದಷ್ಟರ ಮಟ್ಟಿಗೆ ಈ ಹಾಡು ಈಕೆಗೆ ಕೀರ್ತಿ ತಂದು ಕೊಟ್ಟಿದೆ. ಈ ಹಾಡಿಗೆ 1.5 ಕೊಟಿ ಹಣ ಪಡೆದು ಸಮಂತಾ ಅಚ್ಚರಿಗೆ ಕಾರಣ ಆಗಿದ್ದರು. ಅಲ್ಲಿಂದ ಮುಂದೆ ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ.

ಸದ್ಯ ಸಮಂತಾ ಅವರು 'ಕಾತುವಾಕುಲ ರೆಂಡು ಕಾದಲ್' ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಈ ಚಿತ್ರದಲ್ಲಿ ನಯನ್ ತಾರಾ ಮತ್ತು ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮತ್ತೊಂದೆಡೆ, ಸಮಂತಾ ಮಹಿಳಾ ಪ್ರಧಾನ ಚಿತ್ರ 'ಯಶೋದಾ' ಚಿತ್ರೀಕರಣದಲ್ಲಿದ್ದಾರೆ. ಹಾಗೆ ಮಹಿಳಾ ಕೇಂದ್ರಿತ ಚಿತ್ರ 'ಶಾಕುಂತಲಂ' ಬಿಡುಗಡೆಗೆ ಸಜ್ಜಾಗಿದೆ.

More from Filmibeat

English summary
Samantha Is Second Highest Paid Actress In South Film Industry And Nayanthara In First Place,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X