»   » 'ಸಾಹೋ'ಗೆ ಅನುಷ್ಕಾ ಬದಲು ಮೊದಲು ಅಪ್ರೋಚ್ ಮಾಡಿದ್ದ ನಟಿಯೇ ನಾಯಕಿ?

'ಸಾಹೋ'ಗೆ ಅನುಷ್ಕಾ ಬದಲು ಮೊದಲು ಅಪ್ರೋಚ್ ಮಾಡಿದ್ದ ನಟಿಯೇ ನಾಯಕಿ?

Posted By:
Subscribe to Filmibeat Kannada

'ಬಾಹುಬಲಿ' ಚಿತ್ರದ ನಂತರ ಈಗ ಪ್ರಭಾಸ್ ಅಭಿಮಾನಿಗಳು ಅವರ ಮುಂದಿನ ಸಿನಿಮಾ 'ಸಾಹೋ'ಗಾಗಿ ಮುನ್ನೋಡುತ್ತಿದ್ದಾರೆ. ಜೊತೆಗೆ 'ಡಾರ್ಲಿಂಗ್' ನಟನ ಜೊತೆ 'ಸಾಹೋ'ದಲ್ಲಿ ರೊಮ್ಯಾನ್ಸ್ ಮಾಡಲಿರುವ ನಟಿ ಯಾರಿರಬಹುದು ಎಂಬ ಕುತೂಹಲವು ಅವರ ಫ್ಯಾನ್ಸ್‌ಗಳಲ್ಲಿ ಕಾಡುತ್ತಿದೆ.

ಅಯ್ಯೋ ಪಾಪ.....ಅನುಷ್ಕಾ ಶೆಟ್ಟಿಗೆ ಹೀಗೆ ಆಗಬಾರದಿತ್ತು.!

'ಸಾಹೋ' ಚಿತ್ರತಂಡ ಇತ್ತೀಚೆಗೆ 'ಬಾಹುಬಲಿ'ಯಲ್ಲಿ ಅಭಿನಯಿಸಿದ್ದ ಅನುಷ್ಕಾ ಶೆಟ್ಟಿಯವರಿಗೆ ಅಡ್ವಾನ್ಸ್ ಕೊಟ್ಟು, ಕಾಲ್ ಶೀಟ್ ಪಡೆದಿತ್ತು. ಆದರೆ ಕಾರಣಾಂತರಗಳಿಂದ ಅವರಿಗೆ ಕೋಕ್ ನೀಡಿತ್ತು ಎಂಬುದನ್ನು ನಾವೇ ಹೇಳಿದ್ವಿ. ಈಗ ಕೊನೆಗೂ 'ಸಾಹೋ' ಚಿತ್ರಕ್ಕೆ ಮೊಟ್ಟ ಮೊದಲು ಅಪ್ರೋಚ್ ಮಾಡಿದ್ದ ನಟಿಯೇ ನಾಯಕಿ ಆಗಿ ನಟಿಸಲು ಸಹಿ ಮಾಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಆ ನಟಿ ಯಾರು? ತಿಳಿಯಲು ಮುಂದೆ ಓದಿರಿ..

ಪ್ರಭಾಸ್ ಜೊತೆ ಬಾಲಿವುಡ್ ಹಾಟ್ ಬೆಡಗಿ ರೊಮ್ಯಾನ್ಸ್

ಬಾಲಿವುಡ್ ಲೈಫ್ ಪ್ರಕಾರ, 'ಸಾಹೋ' ಚಿತ್ರಕ್ಕೆ ಮೊಟ್ಟ ಮೊದಲ ಬಾರಿಗೆ ಚಿತ್ರತಂಡ ಅಪ್ರೋಚ್ ಮಾಡಿದ್ದ ಶ್ರದ್ಧಾ ಕಪೂರ್ ಅವರೇ ನಾಯಕಿ ಆಗಿ ನಟಿಸುವುದು ಪಕ್ಕಾ ಆಗಿದ್ದು, ಅವರು ಸಹಿ ಮಾಡಿದ್ದಾರೆ ಎಂದು ತಿಳಿದಿದೆ.

'ಸಾಹೋ' ರಿಜೆಕ್ಟ್ ಮಾಡಿದ್ದ ಶ್ರದ್ಧಾ

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಈ ಹಿಂದೆಯೇ 'ಸಾಹೋ' ಚಿತ್ರದಲ್ಲಿ ಅಭಿನಯಿಸಲು ಸಂಭಾವನೆ ವಿಚಾರವಾಗಿ ರಿಜೆಕ್ಟ್ ಮಾಡಿದ್ದರು. ಶ್ರದ್ಧಾ ಕೇಳಿದ್ದ 8 ಕೋಟಿ ರೂ ಸಂಭಾವನೆ ನೀಡಲು ಆಗುವುದಿಲ್ಲ. ತೆಲುಗು ಚಿತ್ರರಂಗದಲ್ಲಿ ನಟಿಯರಿಗೆ ಇಷ್ಟೊಂದು ಹಣ ನೀಡುವುದಿಲ್ಲ ಎಂದು ಚಿತ್ರತಂಡ ಹೇಳಿದ್ದ ಕಾರಣ ನಟಿ ಈ ಚಿತ್ರದಲ್ಲಿ ಆಕ್ಟ್ ಮಾಡಲು ನಿರಾಕರಿಸಿದ್ದರು. ಈಗ ಕೊನೆಗೂ ಮತ್ತೆ ಚಿತ್ರದಲ್ಲಿ ಅಭಿನಯಿಸಲು ಮುಂದಾಗಿದ್ದು ಸಹಿ ಹಾಕಿದ್ದಾರೆ ಎನ್ನಲಾಗಿದೆ.

ಅನುಷ್ಕಾ ಹಾರ್ಡ್‌ ವರ್ಕ್‌ ಪ್ರಯೋಜನವಾಗಿಲ್ಲ

'ಸಾಹೋ' ಚಿತ್ರದಲ್ಲಿ ನಾಯಕಿಯದ್ದು ತುಂಬಾ ಬೋಲ್ಡ್ ಕ್ಯಾರೆಕ್ಟರ್. ಚಿತ್ರತಂಡ ಈ ಹಿಂದೆ ಅನುಷ್ಕಾ ಶೆಟ್ಟಿ ರವರನ್ನು ಸೆಲೆಕ್ಟ್ ಮಾಡಿ ಕಾಲ್ ಶೀಟ್ ಸಹ ಪಡೆದಿತ್ತು. ಆದರೆ 'ಬಾಹುಬಲಿ'ಗಾಗಿ ತೂಕ ಹೆಚ್ಚಿಸಿಕೊಂಡಿದ್ದ ಅನುಷ್ಕಾ ಶೆಟ್ಟಿ ಅವರು ಹಾರ್ಡ್ ವರ್ಕ್ ಮಾಡಿದರು 'ಸಾಹೋ' ನಾಯಕಿಯ ಪಾತ್ರಕ್ಕೆ ಬೇಕಾದಷ್ಟು ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ವಿಫಲರಾದ ಹಿನ್ನೆಲೆ ಅವರನ್ನು ಚಿತ್ರದಿಂದ ಕೈಬಿಡಲಾಗಿತ್ತು.

ಪ್ರಭಾಸ್ ಚಿತ್ರದಿಂದ ಅನುಷ್ಕಾ ಶೆಟ್ಟಿಗೆ ಕೋಕ್.!

ರಕುಲ್ ಪ್ರೀತ್ ಸಿಂಗ್ ಹೆಸರು ಸಹ ಕೇಳಿಬಂದಿತ್ತು

ಇತ್ತೀಚೆಗೆ ಅನುಷ್ಕಾ ಶೆಟ್ಟಿ ರವರ ಡೇಟ್ ಹೊಂದಾಣಿಕೆ ಸಮಸ್ಯೆ ಹಿನ್ನೆಲೆ 'ಸಾಹೋ'ದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಸೌತ್ ಸುಂದರಿ ರಕುಲ್ ಪ್ರೀತ್ ಸಿಂಗ್ ರನ್ನು ಚಿತ್ರತಂಡ ಆಯ್ಕೆ ಮಾಡಿದೆ ಎಂಬ ಸುದ್ದಿಯೂ ಕೇಳಿಬಂದಿತ್ತು.

ಮೂರು ಭಾಷೆಗಳಲ್ಲಿ 'ಸಾಹೋ'

ಸುಜೀತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆಕ್ಷನ್ ಚಿತ್ರ 'ಸಾಹೋ' ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ.

English summary
Now This Bollywood Actress Will Take Anushka Shetty's Place In Prabhas's 'Saaho' movie. This Movie is directs by Sujeeth.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada