For Quick Alerts
  ALLOW NOTIFICATIONS  
  For Daily Alerts

  ಪ್ರಶಾಂತ್ ನೀಲ್ ಚಿತ್ರದಲ್ಲಿ ಎನ್‌ಟಿಆರ್ ಪಾತ್ರ ಏನೆಂದು ಬಹಿರಂಗ

  |

  ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡ್ತಿರುವ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಮುಂದಿನ ಚಿತ್ರವನ್ನು ಜೂನಿಯರ್ ಎನ್‌ಟಿಆರ್ ಜೊತೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

  Junior NTR ಗಾಗಿ ಪ್ರಶಾಂತ್ ನೀಲ್ ಮಾಡಿದ್ದಾರೆ ಭಯಂಕರ ಕಥೆ | Filmibeat Kannada

  ಯಂಗ್ ಟೈಗರ್ ಎನ್‌ಟಿಆರ್ ಹುಟ್ಟುಹಬ್ಬದ ಪ್ರಯುಕ್ತ ಮೇ 20 ರಂದು ಈ ಸಿನಿಮಾ ಪ್ರಕಟಿಸಿದರು. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರ ನಿರ್ಮಾಣ ಮಾಡ್ತಿದ್ದು, ದೊಡ್ಡ ಬಜೆಟ್‌ನಲ್ಲಿ ಸಿನಿಮಾ ತಯಾರಾಗಲಿದೆ.

  ಎನ್‌ಟಿಆರ್ 31ನೇ ಚಿತ್ರಕ್ಕಾಗಿ ಪ್ರಶಾಂತ್ ನೀಲ್ ಪಡೆದ ಸಂಭಾವನೆ ಇಷ್ಟೇನಾ?ಎನ್‌ಟಿಆರ್ 31ನೇ ಚಿತ್ರಕ್ಕಾಗಿ ಪ್ರಶಾಂತ್ ನೀಲ್ ಪಡೆದ ಸಂಭಾವನೆ ಇಷ್ಟೇನಾ?

  ಈ ಚಿತ್ರದ ಕಥೆ ಏನು, ಎನ್‌ಟಿಆರ್ ಪಾತ್ರವೇನು ಎನ್ನುವುದು ಸದ್ಯ ಇಂಡಸ್ಟ್ರಿಯಲ್ಲಿ ಕುತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ಎನ್‌ಟಿಆರ್ ಡ್ಯಾನ್ಸರ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬಂತು. ಇದೀಗ, ಎನ್‌ಟಿಆರ್ 31ನೇ ಚಿತ್ರದಲ್ಲಿ ರಾಜಕಾರಣಿ ಪಾತ್ರ ನಿಭಾಯಿಸಲಿದ್ದಾರೆ ಎಂಬ ಹೊಸ ವಿಚಾರ ಚರ್ಚೆಗೆ ಬಂದಿದೆ.

  ಎನ್‌ಟಿಆರ್‌ಗಾಗಿ ಪ್ರಶಾಂತ್ ನೀಲ್ ಸೂಪರ್ ಆಗಿರುವ ಕಥೆ ಮಾಡಿದ್ದು, ಈವರೆಗೂ ನೋಡಿರದ ತಾರಕ್ ತೋರಿಸಲು ಪ್ಲಾನ್ ಮಾಡಿದ್ದಾರಂತೆ. ಎನ್‌ಟಿಆರ್ ಫ್ಯಾನ್ಸ್ ಗಮನದಲ್ಲಿಟ್ಟುಕೊಂಡು ಔಟ್ ಅಂಡ್ ಔಟ್ ಆಕ್ಷನ್ ಥ್ರಿಲ್ಲರ್ ಸಬ್ಜೆಕ್ಟ್ ಜೊತೆ ರಂಜಿಸಲು ಬರ್ತಿದ್ದಾರೆ.

  ವರದಿಗಳ ಪ್ರಕಾರ 2022ರಲ್ಲಿ ಈ ಸಿನಿಮಾ ಅಧಿಕೃತವಾಗಿ ಸೆಟ್ಟೇರಲಿದೆ.

  ಅದಕ್ಕೂ ಮುಂಚೆ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದಲ್ಲಿ ಎನ್‌ಟಿಆರ್ ನಟಿಸುತ್ತಿದ್ದಾರೆ. ಇದಾದ ಮೇಲೆ ಕೊರಟಾಲ ಶಿವ ನಿರ್ದೇಶನದಲ್ಲಿ 30ನೇ ಸಿನಿಮಾ ಮಾಡ್ತಿದ್ದಾರೆ.

  ಆ ಕಡೆ ಕೆಜಿಎಫ್ ಚಾಪ್ಟರ್ 2 ಮುಗಿಸಿ, ಸಲಾರ್ ಆರಂಭಿಸಿರುವ ಪ್ರಶಾಂತ್ ನೀಲ್, ಮುಂದಿನ ವರ್ಷ ಎನ್‌ಟಿಆರ್ ಜೊತೆ ಚಿತ್ರೀಕರಣಕ್ಕೆ ಹೋಗಲಿದ್ದಾರೆ. ಇನ್ನುಳಿದಂತೆ ಚಿತ್ರದ ನಾಯಕಿ, ಇತರೆ ಪಾತ್ರವರ್ಗದ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

  English summary
  KGF Director Prashanth Neel direct Jr Ntr. latest report now, Ntr role leaked in 31st Project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X