»   » 25 ಕೋಟಿಗೆ ಮಾರಾಟವಾಗ್ತಿದೆ ಖ್ಯಾತ ನಟನ ಮನೆ.!

25 ಕೋಟಿಗೆ ಮಾರಾಟವಾಗ್ತಿದೆ ಖ್ಯಾತ ನಟನ ಮನೆ.!

Posted By:
Subscribe to Filmibeat Kannada

ತೆಲುಗು ಚಿತ್ರರಂಗದ ಖ್ಯಾತ ನಟ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ.ಆರ್ ಅವರು ಮನೆ ಮಾರಾಟ ಮಾಡಲು ಮನೆಯವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಅಂದು ಚೆನ್ನೈನಲ್ಲಿ ಹೆಚ್ಚು ಚಟುವಟಿಕೆಗಳು ನಡೆಯುತ್ತಿದ್ದ ಕಾರಣ ಚೆನ್ನೈನ ಟಿ.ನಗರದಲ್ಲಿ ಎನ್.ಟಿ.ಆರ್ ಅವರು ಮನೆಯನ್ನ ಖರೀದಿಸಿದ್ದರು. ಹಲವು ವರ್ಷಗಳ ಕಾಲ ಅಲ್ಲೇ ನೆಲೆಸಿದ್ದರು. ಅವರ ಸಾವಿನ ನಂತರ ಆ ಮನೆ ಅನಾಥವಾಗಿದೆ. ಹೀಗಾಗಿ, ಈ ಮನೆಯನ್ನ ಈಗ ಮಾರಾಟ ಮಾಡಲು ಮುಂದಾಗಿದ್ದು, ದುಬಾರಿ ಬೆಲೆ ನಿಗದಿಮಾಡಲಾಗಿದೆ.

ಹಾಗಿದ್ರೆ, ಎನ್.ಟಿ.ಆರ್ ಅವರ ಯಾವ ಮನೆ ಮಾರಾಟವಾಗುತ್ತಿದೆ ಮತ್ತು ಎಷ್ಟು ಬೆಲೆಗೆ ಮಾರಾಟವಾಗ್ತಿದೆ ಎಂದು ತಿಳಿದುಕೊಳ್ಳಲು ಮುಂದೆ ಓದಿ.....

1953ರಲ್ಲಿ ಖರೀದಿಸಿದ್ದರು

1953ರಲ್ಲಿ ಎನ್.ಟಿ.ಆರ್ ಅವರು ಈ ಮನೆಯನ್ನ ಕೊಂಡುಕೊಂಡಿದ್ದರು. ನಂತರ ತಮಗೆ ಬೇಕಾದ ರೀತಿಯಲ್ಲಿ ವಿನ್ಯಾಸ ಮಾಡಿಕೊಂಡರು. ಕಚೇರಿಯನ್ನ ಕೂಡ ಇಲ್ಲಿಯೇ ಸ್ಥಾಪಿಸಿಕೊಂಡಿದ್ದರು.

20ಕ್ಕೂ ಅಧಿಕ ವರ್ಷ ವಾಸವಾಗಿದ್ದರು

ಸುಮಾರು ಎರಡೂವರೆ ದಶಕಗಳ ಕಾಲ ಇದೇ ಮನೆಯಲ್ಲಿ ವಾಸವಿದ್ದರು ಎನ್.ಟಿ.ಆರ್. 1953 ರಿಂದ 1980 ರ ವರೆಗೂ ಈ ಮನೆಯಲ್ಲಿ ನೆಲೆಸಿದ್ದರು. ನಂತರ ಹೈದರಾಬಾದ್ ನಲ್ಲಿ ಸಿನಿಮಾ ಕೆಲಸಗಳು ಆರಂಭವಾದ ಮೇಲೆ ಎನ್.ಟಿ.ಆರ್ ಕೂಡ ಚೆನ್ನೈನಿಂದ ಶಿಫ್ಟ್ ಆದರು.

ಮ್ಯೂಸಿಯಂ ಮಾಡಬೇಕಿತ್ತು

ಎಲ್ಲ ಅಂದುಕೊಂಡಂತೆ ಆಗಿದ್ದರೇ, ಈ ಮನೆಯನ್ನ ಮ್ಯೂಸಿಯಂ ಮಾಡಲು ಚಿಂತಿಸಲಾಯಿತು. ಆದ್ರೆ, ಅದು ಸಾಧ್ಯವಾಗಲಿಲ್ಲ. ಹೀಗಾಗಿ, ಈಗ ಮಾರಾಟ ಮಾಡಲು ಮುಂದಾಗಿದ್ದಾರೆ.

ಮನೆಯ ಬೆಲೆ ಎಷ್ಟು ಗೊತ್ತಾ?

ಸದ್ಯ, ಈ ಮನೆಯನ್ನ ನೋಡಿಕೊಳ್ಳುವವರು ಯಾರು ಇಲ್ಲ ಎಂಬ ಕಾರಣಕ್ಕೆ ಮಾರಾಟ ಮಾಡಲು ಪ್ಲಾನ್ ಮಾಡಿದ್ದು, ಸುಮಾರು 25 ಕೋಟಿ ಬೆಲೆ ನಿಗದಿಪಡಿಸಲಾಗಿದೆಯಂತೆ. ಬಂದ ಹಣದಿಂದ ಮನೆಯ ಸದಸ್ಯರು ಸಮನಾಗಿ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

English summary
The latest buzz in the filmnagar is that the Nandamuri family has kept NTR's house in Chennai for sale.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X