ದರ್ಶನ್ 'ಚಕ್ರವರ್ತಿ' ಅಡ್ಡದಿಂದ ಬಂದ ಲೇಟೆಸ್ಟ್ ಸುದ್ದಿ ಇದು

By Suneetha

ಇವರು ಶುದ್ಧ ಪಂಜಾಬಿ ಹುಡುಗಿ ಆದ್ರೂ ಬೆಳೆದಿದ್ದು, ಕೇರಳದ ಸುಂದರವಾದ ಪರಿಸರದಲ್ಲಿ. ಕನ್ನಡದ ಬಗ್ಗೆ ಅಷ್ಟಾಗಿ ಏನೂ ಗೊತ್ತಿಲ್ಲದಿದ್ದರೂ, ಕೈ ಹಿಡಿದಿದ್ದು, ಖ್ಯಾತಿ ತಂದು ಕೊಟ್ಟಿದ್ದು ಕನ್ನಡ ಚಿತ್ರರಂಗ.

ಮಾಡೆಲಿಂಗ್ ಮಾಡುತ್ತಿದ್ದ ಈ ಚೆಲುವೆ ಕನ್ನಡದ 'ಓ ಮಲ್ಲಿಗೆ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ನಾವು 'ಓ ಮಲ್ಲಿಗೆ' ಅಂದಾಗಲೇ ನಿಮಗೆ ಗೊತ್ತಾಗಿರಬೇಕು ನಾವು ಯಾರ ಬಗ್ಗೆ ಮಾತಾಡ್ತಾ ಇದ್ದೀವಿ ಅಂತ.

ಹೌದು ನಾವು ಇಷ್ಟೆಲ್ಲಾ ಪೀಠಿಕೆ ಹಾಕಿದ್ದು, ಖ್ಯಾತ ನಟಿ ಚಾರುಲತಾ ಬಗ್ಗೆ. ರಮೇಶ್ ಅರವಿಂದ್, ಶಿವಣ್ಣನಂತಹ ದೊಡ್ಡ-ದೊಡ್ಡ ನಟರ ಜೊತೆ ತೆರೆ ಹಂಚಿಕೊಂಡಿದ್ದ ನಟಿ ನಂತರ ಸ್ಯಾಂಡಲ್ ವುಡ್ ನಿಂದ ನಾಪತ್ತೆಯಾಗಿದ್ದರು. ಚಾರುಲತಾ ಅವರ ನಟನೆ, ಹಾಗೂ ಅವರನ್ನು ಬಹಳ ಇಷ್ಟಪಡುತ್ತಿದ್ದ ಅಭಿಮಾನಿಗಳು, ಅವರನ್ನು ಬಹಳ ಮಿಸ್ ಮಾಡಿಕೊಂಡಿದ್ದರು.['ಚಕ್ರವರ್ತಿ' ಚಿತ್ರತಂಡ ಸೇರಿಕೊಂಡ ಹೊಸ ಅತಿಥಿ ಯಾರು ?]

ಆದ್ರೆ ಅಭಿಮಾನಿಗಳು ನಿರಾಸೆ ಪಡೋದು ಬೇಡ, ಯಾಕೆಂದರೆ ಎಲ್ಲರ ಮೆಚ್ಚಿನ ಚಾರು ಅಲಿಯಾಸ್ ಚಾರುಲತಾ ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸಾಗಿದ್ದಾರೆ. ಯಾವ ಚಿತ್ರದಲ್ಲಿ?, ಏನ್ಕತೆ?, ನೋಡಲು ಮುಂದೆ ಓದಿ....

ದರ್ಶನ್ ಜೊತೆ ಚಾರುಲತಾ

ದರ್ಶನ್ ಜೊತೆ ಚಾರುಲತಾ

ಹಲವು ಸ್ಟಾರ್ ಗಳು ತುಂಬಿಕೊಂಡಿರುವ 'ಚಕ್ರವರ್ತಿ' ಚಿತ್ರತಂಡಕ್ಕೆ ಇದೀಗ ನಟಿ ಚಾರುಲತಾ ಅವರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಇಲ್ಲಿಯವರೆಗೆ 'ಚಕ್ರವರ್ತಿ' ಚಿತ್ರದಲ್ಲಿ ಬರೀ ಸ್ಟಾರ್ ನಟರ ಹೆಸರು ಮಾತ್ರ ಕೇಳಿ ಬರುತ್ತಿತ್ತು. ಸ್ಟಾರ್ ನಟಿ ಅಂತ ದೀಪಾ ಸನ್ನಿಧಿ ಅವರು ಮಾತ್ರ ಇದ್ದರು. ಇದೀಗ ಚಾರುಲತಾ ಅವರು ಈ ಚಿತ್ರತಂಡಕ್ಕೆ ಸೇರಿದ್ದಾರೆ.[ದರ್ಶನ್ 'ಚಕ್ರವರ್ತಿ'ಯಲ್ಲಿ 'ಡೆಡ್ಲಿ' ಆದಿತ್ಯ ಪಾತ್ರ ಏನು.?]

ಚಾರುಲತಾ ಪಾತ್ರ ಏನು?

ಚಾರುಲತಾ ಪಾತ್ರ ಏನು?

ಸಖತ್ ಪವರ್ ಫುಲ್ ಪಾತ್ರವೊಂದರಲ್ಲಿ ನಟಿ ಚಾರುಲತಾ ಅವರು ಕಾಣಿಸಿಕೊಳ್ಳಲಿದ್ದಾರೆ ಅಂತಷ್ಟೇ ಬಿಟ್ಟರೆ, ಯಾವ ಪಾತ್ರ ಅಂತ ಚಿತ್ರತಂಡದವರು ಗುಟ್ಟು ಬಿಟ್ಟು ಕೊಡುತ್ತಿಲ್ಲ. ಆದ್ರೆ ಅವರು ಇಡೀ ಚಿತ್ರದ ಪ್ರಮುಖ ಭಾಗ ಅನ್ನೋದು ಪಕ್ಕಾ.[ಇಲ್ಲ್ ಕೇಳಿ, 'ಇದು' ದರ್ಶನ್ ಅವರ ಆಜ್ಞೆ ಯಾರೂ ಮೀರಬೇಡಿ]

ಚಿತ್ರೀಕರಣ ನಡೆಯುತ್ತಿದೆ

ಚಿತ್ರೀಕರಣ ನಡೆಯುತ್ತಿದೆ

ಸ್ನಿಗ್ದ ಸುಂದರಿ ನಟಿ ಚಾರುಲತಾ ಅವರ ಭಾಗದ ಚಿತ್ರೀಕರಣ ಈಗಾಗಲೇ ಭರದಿಂದ ಸಾಗುತ್ತಿದ್ದು, ಬೆಂಗಳೂರಿನ ಕೋಣನಕುಂಟೆ ಬಳಿಯ ಬಂಗಲೆ ಒಂದರಲ್ಲಿ ನಡೆಯುತ್ತಿದೆ. ಬಹಳ ಕುತೂಹಲ ಹುಟ್ಟಿಸಿರುವ 'ಚಕ್ರವರ್ತಿ' ಚಿತ್ರಕ್ಕೆ ಇದೀಗ ನಟಿ ಚಾರುಲತಾ ಅವರು ಸೇರಿಕೊಂಡಿದ್ದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

'ಮಹಾವೀರ ಮಾಚಿದೇವ' ಕೊನೆಯ ಸಿನಿಮಾ

'ಮಹಾವೀರ ಮಾಚಿದೇವ' ಕೊನೆಯ ಸಿನಿಮಾ

ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ನಟಿ ಚಾರುಲತಾ ಅವರು ಚಿತ್ರರಂಗದ ಕಡೆ ಹೆಚ್ಚಾಗಿ ಗಮನ ಹರಿಸಲಿಲ್ಲ. ಪ್ರಸ್ತುತ ವಿದೇಶದಲ್ಲಿ ನೆಲೆಸಿರುವ ಚಾರುಲತಾ ಅವರು ಆಗೊಮ್ಮೆ-ಈಗೊಮ್ಮೆ ಚಿತ್ರರಂಗದ ಕಡೆ ಬಂದು ಬಣ್ಣ ಹಚ್ಚಿ ವಾಪಸಾಗುತ್ತಿದ್ದರು. ಅವರು ನಟಿಸಿದ ಕೊನೆಯ ಸಿನಿಮಾ 'ಮಹಾವೀರ ಮಾಚಿದೇವ'. ಇದೀಗ ದರ್ಶನ್ 'ಚಕ್ರವರ್ತಿ' ಚಿತ್ರದ ಮೂಲಕ ಮತ್ತೆ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ.[ದರ್ಶನ್ 'ಚಕ್ರವರ್ತಿ'ಯಲ್ಲಿ 'ಡೆಡ್ಲಿ' ಆದಿತ್ಯ ಪಾತ್ರ ಏನು.?]

ಹಲವು ಸ್ಟಾರ್ ಗಳಿಂದ ತುಂಬಿ ತುಳುಕುತ್ತಿರುವ 'ಚಕ್ರವರ್ತಿ'

ಹಲವು ಸ್ಟಾರ್ ಗಳಿಂದ ತುಂಬಿ ತುಳುಕುತ್ತಿರುವ 'ಚಕ್ರವರ್ತಿ'

ನವ ನಿರ್ದೇಶಕ ಚಿಂತನ್ ಆಕ್ಷನ್-ಕಟ್ ಹೇಳುತ್ತಿರುವ 'ಚಕ್ರವರ್ತಿ' ಚಿತ್ರದಲ್ಲಿ ಹಲವು ಘಟಾನುಘಟಿಗಳು ಪಾತ್ರ ವಹಿಸಿದ್ದಾರೆ. ಅದ್ರಲ್ಲೂ ವಿಶೇಷವಾಗಿ ದಿನಕರ ತೂಗುದೀಪ ಅವರು ತಮ್ಮ ಸಹೋದರ ದರ್ಶನ್ ಅವರಿಗೆ ವಿಲನ್ ಗಿರಿ ತೋರಲು ತಯಾರಾಗಿದ್ದಾರೆ. ನಟ ಆದಿತ್ಯ ಅವರು ಸೂಪರ್ ಕಾಪ್ ಆಗಿ ಕಾಣಿಸಿಕೊಂಡಿದ್ದು, ಸೃಜನ್ ಲೋಕೇಶ್, ದೀಪಾ ಸನ್ನಿಧಿ ಮುಂತಾದವರು ಕಾಣಿಸಿಕೊಂಡಿದ್ದಾರೆ.

More from Filmibeat

English summary
Shooting of Kannada Movie 'Chakravarthy' starring Actor Darshan and Actress Deepa Sannidhi is on track. Another interesting piece of news coming from the sets of 'Chakravarthy' is that the 'O Mallige' fame Actress Charulatha will be doing a important role in this movie. The movie is directed by Chintan, who is making his directorial debut.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X