ಒಂದು ದಿನದಲ್ಲಿ 'ಒಡೆಯ' ಸಿನಿಮಾ ಗಳಿಸಿದ ಹಣ ಎಷ್ಟು?

Recommended Video

Odeya :ಒಂದು ದಿನದಲ್ಲಿ 'ಒಡೆಯ' ಸಿನಿಮಾ ಗಳಿಸಿದ ಹಣ ಎಷ್ಟು? | FILMIBEAT KANNADA

ಡಿ ಬಾಸ್ ದರ್ಶನ್ ಅಭಿನಯದ ಈ ವರ್ಷದ ಮೂರನೇ ಸಿನಿಮಾ 'ಒಡೆಯ' ಬಿಡುಗಡೆಯಾಗಿದೆ. ನಿನ್ನೆ (ಡಿಸೆಂಬರ್ 12) ರಾಜ್ಯಾದಂತ್ಯ ಸಿನಿಮಾ ರಿಲೀಸ್ ಆಗಿದೆ.

ಬಹು ನಿರೀಕ್ಷಿತ ಸ್ಟಾರ್ ಸಿನಿಮಾಗಳು, ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿತು ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿ ಇರುತ್ತದೆ ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಬಿರುದು ಪಡೆದಿರುವ ದರ್ಶನ್ ಸಿನಿಮಾ ಕಲೆಕ್ಷನ್ ಮೇಲೆ ಎಲ್ಲರ ಕಣ್ಣು ಇದೆ. 'ಒಡೆಯ' ಸಿನಿಮಾ ಮೊದಲ ದಿನದ ಲೆಕ್ಕಾಚಾರ ಹೇಗಿದೆ ಎನ್ನುವ ಪ್ರಶ್ನೆ ಮೂಡಿದೆ.

ಸಿನಿಮಾ ಇಷ್ಟೇ ಹಣ ಮಾಡಿದೆ ಎಂದು ಚಿತ್ರತಂಡ ಸದ್ಯದವರೆ 'ಒಡೆಯ' ತಂಡ ಘೋಷಣೆ ಮಾಡಿಲ್ಲ. ಆದರೆ, ಸಿನಿಮಾದ ಕೆಲೆಕ್ಷನ್ ಬಗ್ಗೆ ಹೀಗೊಂದು ಸುದ್ದಿ ಹರಿದಾಡುತ್ತಿದೆ. ಆ ಮೊತ್ತ ಈ ಕೆಳಗಿನಂತೆ ಇದೆ.

ಮೊದಲ ದಿನ 3 ಕೋಟಿ?

ಮೊದಲ ದಿನ 3 ಕೋಟಿ?

'ಒಡೆಯ' ಸಿನಿಮಾ ಮೊದಲ ದಿನ 3 ಕೋಟಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಫಸ್ಟ್ ಡೇ ಬಹುತೇಕ ಎಲ್ಲ ಕಡೆ ಹೌಸ್ ಫುಲ್ ಪ್ರದರ್ಶನ ಆಗಿದೆ. ಸಿನಿಮಾದ ಕ್ರೇಜ್ ಕಡಿಮೆ ಇದ್ದ ಕಾರಣ ಶೋಗಳ ಸಂಖ್ಯೆ ದಾಖಲೆಯ ಮಟ್ಟದಲ್ಲಿ ಇರಲಿಲ್ಲ. ದರ್ಶನ್ ಸಿನಿಮಾ ಎನ್ನುವ ಕಾರಣಕ್ಕೆ ಅಭಿಮಾನಿಗಳು ಮೊದಲ ದಿನ ಮಿಸ್ ಇಲ್ಲದೆ ಸಿನಿಮಾ ನೋಡಿದ್ದಾರೆ. ಹೀಗಾಗಿ ಸಿನಿಮಾ ಮೂರು ಕೋಟಿ ಗಳಿಸಲು ಮಾತ್ರ ಸಾಧ್ಯವಾಗಿದೆ.

ಹಳೆಯ ಸಿನಿಮಾಗಿಂತ ಕಡಿಮೆ

ಹಳೆಯ ಸಿನಿಮಾಗಿಂತ ಕಡಿಮೆ

ದರ್ಶನ್ ಅವರ ಹಿಂದಿನ ಸಿನಿಮಾಗಳು ಅಂದರೆ, 'ಕುರುಕ್ಷೇತ್ರ' ಹಾಗೂ 'ಯಜಮಾನ' ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ ಕಡಿಮೆ ಆಗಿದೆ. 3 ಕೋಟಿ ಸಣ್ಣ ಮೊತ್ತ ಅಲ್ಲದೆ ಇದ್ದರೂ ದರ್ಶನ್ ಸ್ಟಾರ್ ಪಟ್ಟಕ್ಕೆ, ಅವರ ಹಿಂದಿನ ಸಿನಿಮಾಗಳ ದಾಖಲೆಗೆ ಹೋಲಿಸಿ ನೋಡಿದರೆ, ಕಲೆಕ್ಷನ್ ಪ್ರಮಾಣ ಇಳಿದಿದೆ ಎನ್ನುವುದು ಕಾಣುತ್ತಿದೆ.

'ಯಜಮಾನ', 'ಕುರುಕ್ಷೇತ್ರ' ಕಲೆಕ್ಷೆನ್ ಏನು?

'ಯಜಮಾನ', 'ಕುರುಕ್ಷೇತ್ರ' ಕಲೆಕ್ಷೆನ್ ಏನು?

ದರ್ಶನ್ ನಟಿಸಿದ್ದ ಪೌರಾಣಿಕ ಸಿನಿಮಾ 'ಕುರುಕ್ಷೇತ್ರ' ಮೊದಲ ದಿನ 8 ರಿಂದ 10 ಕೋಟಿ ಗಳಿಕೆ ಮಾಡಿತ್ತು. 'ಯಜಮಾನ' ಸಿನಿಮಾ 7 ರಿಂದ 8 ಕೋಟಿ ಕಲೆಕ್ಷನ್ ಮಾಡಿತ್ತು. ಈ ಎರಡು ಸಿನಿಮಾಗಳು ಈ ವರ್ಷದ ದೊಡ್ಡ ಹಿಟ್ ಸಿನಿಮಾಗಳಿಗಿವೆ. 'ಕುರುಕ್ಷೇತ್ರ' ಹಾಗೂ 'ಯಜಮಾನ' ಸಿನಿಮಾಗಳು ನೂರು ದಿನ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿವೆ.

'ಒಡೆಯ' ಸಿನಿಮಾ ಹೇಗಿದೆ?

'ಒಡೆಯ' ಸಿನಿಮಾ ಹೇಗಿದೆ?

'ಒಡೆಯ' ಮಾಸ್ ಹಾಗೂ ಕ್ಲಾಸ್ ಸಿನಿಮಾ. ಇದು 'ವೀರಂ' ಸಿನಿಮಾ ರಿಮೇಕ್ ಆಗಿದ್ದು, ಬೇರೆ ಅಂಶಗಳನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಕಾಮಿಡಿ, ಲವ್, ಅಣ್ಣತಮ್ಮಂದಿರ ಸಂಬಂಧ ತುಂಬಿರುವದ ಕಮರ್ಷಿಯಲ್ ಪ್ಯಾಕೇಜ್ 'ಒಡೆಯ'.ದರ್ಶನ್ ಅಭಿಮಾನಿಗಳು, ಕಮರ್ಷಿಯಲ್ ಸಿನಿಮಾ ಇಷ್ಟ ಪಡುವವರು, ಹೊಡೆದಾಟ ನೋಡಬೇಕು ಎನ್ನುವವರು 'ಒಡೆಯ'ನ ದರ್ಶನ ಮಾಡಬಹುದು. ಹೊಸತನದ ನಿರೀಕ್ಷೆ ಇಲ್ಲದೆ ಚಿತ್ರಮಂದಿರಕ್ಕೆ ಹೋದರೆ ನಿಮಗೆ ಮನರಂಜನೆ ಸಿಗಬಹುದು.

More from Filmibeat

English summary
Odeya kannada movie 1st day box office collection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X