3 ದಿನದ ಕಲೆಕ್ಷನ್ ಎಷ್ಟು?: ಬಾಕ್ಸ್ ಆಫೀಸ್ ನಲ್ಲಿ ಗೆದ್ನಾ 'ಒಡೆಯ'?
Recommended Video
'ಒಡೆಯ' ಸಿನಿಮಾ ಬಿಡುಗಡೆಯಾಗಿ ಮೂರು ದಿನಗಳು ಕಳೆದಿದೆ. ಸಿನಿಮಾದ ಕಲೆಕ್ಷನ್ ಎಷ್ಟಾಯ್ತು ಎನ್ನುವ ನಿರೀಕ್ಷೆ ಎಲ್ಲರಿಗೂ ಇದೆ.
ಸಿನಿಮಾದ ಕಲೆಕ್ಷನ್ ಎಷ್ಟು ಎನ್ನುವುದನ್ನು ನಿರ್ಮಾಪಕರು ತಿಳಿಸಿಲ್ಲ. ಆದರೆ, ಗಾಂಧಿನಗರದ ಮೂಲಗಳಿಂದ ಬಾಕ್ಸ್ ಆಫೀಸ್ ಲೆಕ್ಕಾಚಾರ ಬಹಿರಂಗವಾಗಿದೆ. ದಿನದಿಂದ ದಿನಕ್ಕೆ ಸಿನಿಮಾದ ಗಳಿಕೆಯಲ್ಲಿ ಮೇಲ್ಮುಖ ಕಾಣುತ್ತಿದೆ.
ಈ ವರ್ಷ 'ಕುರುಕ್ಷೇತ್ರ' ಹಾಗೂ 'ಯಜಮಾನ' ಸಿನಿಮಾಗಳು ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಇವೆ. 'ಒಡೆಯ' ಸಿನಿಮಾ ಗೆದ್ದರೆ, ಚಾಲೆಂಜಿಂಗ್ ಸ್ಟಾರ್ ಹ್ಯಾಟ್ರಿಕ್ ಬಾರಿಸುತ್ತಾರೆ.
ಮೊದಲ ದಿನ 3 ಕೋಟಿ ಗಳಿಕೆ ಮಾಡಿದ್ದ 'ಒಡೆಯ' ವಾರಾಂತ್ಯದಲ್ಲಿ ಇನ್ನೂ ಹೆಚ್ಚು ಜನರಿಗೆ ತಲುಪಿದೆ. ಸಿನಿಮಾದ ಕಲೆಕ್ಷನ್ ಹೀಗಿದೆ.

ಶನಿವಾರ 4 ಕೋಟಿ, ಭಾನುವಾರ 5 ಕೋಟಿ
'ಒಡೆಯ' ಸಿನಿಮಾ ಶನಿವಾರ 4 ಕೋಟಿ ಗಳಿಕೆ ಮಾಡಿದೆ. ಭಾನುವಾರ 5 ಕೋಟಿ ಕಲೆಕ್ಷನ್ ಆಗಿದೆ. ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ, ಶನಿವಾರದ ಕಲೆಕ್ಷನ್ ಹೆಚ್ಚಾಗಿದೆ. ಶನಿವಾರಕ್ಕೆ ಹೋಲಿಕೆ ಮಾಡಿದರೆ ಭಾನುವಾರದ ಕಲೆಕ್ಷನ್ ಏರಿಕೆಯಾಗಿದೆ. ವಾರಾಂತ್ಯ ಆಗಿರುವ ಕಾರಣ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆ ಜಾಸ್ತಿಯಾಗಿದೆ.

ಮೊದಲ ದಿನ ಬರೀ 3 ಕೋಟಿ
'ಒಡೆಯ' ಮೊದಲ ದಿನ ಬರೀ 3 ಕೋಟಿ ಗಳಿಕೆ ಮಾಡಿತ್ತು. ದರ್ಶನ್ ಸ್ಟಾರ್ ಡಮ್ ಗೆ ಈ ಕಲೆಕ್ಷನ್ ಕಡಿಮೆ ಎನ್ನುವ ಹಾಗಿತ್ತು. ಅಲ್ಲಿದೆ ಈ ಸಿನಿಮಾಗೂ ಹಿಂದೆ ಬಂದ 'ಕುರುಕ್ಷೇತ್ರ' ಮೊದಲ ದಿನ 8 ರಿಂದ 10 ಕೋಟಿ ಕಲೆಕ್ಷನ್ ಮಾಡಿತ್ತು. 'ಯಜಮಾನ' ಸಿನಿಮಾ 7 ರಿಂದ 8 ಕೋಟಿ ಗಳಿಕೆ ಮಾಡಿತ್ತು. 'ಒಡೆಯ' ಈ ಚಿತ್ರಗಳ ದಾಖಲೆ ಮುರಿಯುವಲ್ಲಿ ಹಿಂದೆ ಇದೆ.

ರಿಮೇಕ್ ಸಿನಿಮಾ ಎನ್ನುವ ಕಾರಣ ಇರಬಹುದೇ
'ಒಡೆಯ' ಸಿನಿಮಾ ತಮಿಳಿನ 'ವೀರಂ' ಚಿತ್ರದ ರಿಮೇಕ್. ಆ ಸಿನಿಮಾ ಐದು ವರ್ಷಗಳ ಹಿಂದೆ ಬಂದಿತ್ತು. ಅದೇ ಸಿನಿಮಾವನ್ನು ಈಗ ಕನ್ನಡಿಗರ ಮುಂದೆ ತರಲಾಗಿದೆ. ಈಗಾಗಲೇ ಕಥೆ, ಸಿನಿಮಾ ಎಲ್ಲರಿಗೆ ತಿಳಿದಿದ್ದು, ಇದೇ ಕಾರಣದಿಂದ ಸಿನಿಮಾ ನೋಡಲು ಪ್ರೇಕ್ಷಕರಿಗೆ ಆಸಕ್ತಿ ಕಡಿಮೆ ಆಗಿರಬಹುದು.

ಹೇಗಿದೆ ಸಿನಿಮಾ?
'ಒಡೆಯ' ಮಾಸ್ ಹಾಗೂ ಕ್ಲಾಸ್ ಸಿನಿಮಾ. ಕಾಮಿಡಿ, ಲವ್, ಅಣ್ಣತಮ್ಮಂದಿರ ಸಂಬಂಧ ತುಂಬಿರುವದ ಕಮರ್ಷಿಯಲ್ ಪ್ಯಾಕೇಜ್. ದರ್ಶನ್ ಅಭಿಮಾನಿಗಳು, ಕಮರ್ಷಿಯಲ್ ಸಿನಿಮಾ ಇಷ್ಟ ಪಡುವವರು, ಹೊಡೆದಾಟ ನೋಡಬೇಕು ಎನ್ನುವವರು 'ಒಡೆಯ'ನ ದರ್ಶನ ಮಾಡಬಹುದು. ಹೊಸತನದ ನಿರೀಕ್ಷೆ ಇಲ್ಲದೆ ಚಿತ್ರಮಂದಿರಕ್ಕೆ ಹೋದರೆ ನಿಮಗೆ ಮನರಂಜನೆ ಸಿಗಬಹುದು.


Click it and Unblock the Notifications











