For Quick Alerts
  ALLOW NOTIFICATIONS  
  For Daily Alerts

  50ನೇ, 100ನೇ ಚಿತ್ರದ ನಿರ್ದೇಶಕರಿಗೆ ಶಿವಣ್ಣ ಸಾಥ್.!

  By Bharath Kumar
  |

  ಚಿತ್ರರಂಗದಲ್ಲಿ ನೂರು ಸಿನಿಮಾ ಮಾಡಿರುವ ಕಲಾವಿದರು ಸಿಕ್ತಾರೆ. ಆದ್ರೆ, ನೂರು ಸಿನಿಮಾ ನಿರ್ದೇಶನ ಮಾಡಿದವರು ಸಿಗೋದು ಬಹಳ ಅಪರೂಪ. ಇದೀಗ, ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಇಂತಹ ಸಾಧನೆ ಮಾಡುವ ಹಾದಿಯಲ್ಲಿ ಹಿರಿಯ ನಿರ್ದೇಶಕರೊಬ್ಬರು ಸಾಗಿದ್ದಾರೆ.

  ನೂರು ಸಿನಿಮಾ ಗಡಿದಾಟಲು ಸಿದ್ದತೆ ಮಾಡಿಕೊಳ್ಳುತ್ತಿರುವ ನಿರ್ದೇಶಕರ ಜೊತೆ ವೃತ್ತಿ ಜೀವನದ 50ನೇ ಸಿನಿಮಾ ಮಾಡಲು ಇನ್ನೊಬ್ಬ ಡೈರೆಕ್ಟರ್ ಅಣಿಯಾಗಿದ್ದಾರೆ.

  ವಿಶೇಷ ಅಂದ್ರೆ ಈ ಇಬ್ಬರು ನಿರ್ದೇಶಕರಿಗೆ ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಸಾಥ ಕೊಡಲಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಒಬ್ಬ ನಿರ್ದೇಶಕನ 50ನೇ ಸಿನಿಮಾ ಮತ್ತು ಇನ್ನೊಬ್ಬ ನಿರ್ದೇಶಕನ 100ನೇ ಸಿನಿಮಾವನ್ನ ಹ್ಯಾಟ್ರಿಕ್ ಹೀರೋ ಮಾಡಲಿದ್ದಾರಂತೆ. ಅಷ್ಟಕ್ಕೂ, ಈ ನಿರ್ದೇಶಕರು ಯಾರು.? ಮುಂದೆ ಓದಿ.....

  ಓಂ ಪ್ರಕಾಶ್ ರಾವ್ ಹಾಫ್ 'ಸೆಂಚುರಿ'

  ಓಂ ಪ್ರಕಾಶ್ ರಾವ್ ಹಾಫ್ 'ಸೆಂಚುರಿ'

  'ಎಕೆ.47', 'ಲಾಕಪ್ ಡೆತ್', 'ಹುಚ್ಚ', 'ಸಿಂಹದ ಮರಿ', 'ಕಲಾಸಿಪಾಳ್ಯ', 'ಮಂಡ್ಯ', 'ಪಾರ್ಥ', ಹೀಗೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿರುವ ಓಂ ಪ್ರಕಾಶ್ ರಾವ್ ತಮ್ಮ 50ನೇ ಚಿತ್ರವನ್ನ ವಿಶೇಷವಾಗಿರಿಸಲು ಸಿದ್ದತೆ ನಡೆಸಿದ್ದಾರೆ. ಹೌದು, ತಮ್ಮ ಹಾಫ್ ಸೆಂಚುರಿ ಚಿತ್ರಕ್ಕೆ ಶಿವಣ್ಣನನ್ನ ನಾಯಕನನ್ನಾಗಿಸಲು ಮುಂದಾಗಿದ್ದಾರೆ.

  ತೆಲುಗು ನಾಡಲ್ಲಿ ಶಿವಣ್ಣನಿಗೆ ಗೌರವ: ಅಲ್ಲಿಯೂ ಅಬ್ಬರಿಸಿದ 'ಟಗರು'ತೆಲುಗು ನಾಡಲ್ಲಿ ಶಿವಣ್ಣನಿಗೆ ಗೌರವ: ಅಲ್ಲಿಯೂ ಅಬ್ಬರಿಸಿದ 'ಟಗರು'

  50ನೇ ಚಿತ್ರಕ್ಕೆ ಶಿವಣ್ಣ ನಾಯಕ.!

  50ನೇ ಚಿತ್ರಕ್ಕೆ ಶಿವಣ್ಣ ನಾಯಕ.!

  'ಶಿವ' ಚಿತ್ರದ ನಂತರ ಶಿವರಾಜ್ ಕುಮಾರ್ ಜೊತೆ ಇನ್ನೊಂದು ಸಿನಿಮಾ ಮಾಡುವುದಾಗಿ ಹಲವು ದಿನಗಳಿಂದ ಓಂ ಪ್ರಕಾಶ್ ರಾವ್ ಹೇಳುತ್ತಲೇ ಬಂದಿದ್ದರು. ಆದ್ರೆ, ಅದು ಯಾವಾಗ ಎನ್ನುವುದು ಮಾತ್ರ ಅಂತಿಮವಾಗಿರಲಿಲ್ಲ. ಇದೀಗ, ಆ ಚಿತ್ರಕ್ಕೆ ಸಮಯ ಕೂಡಿ ಬಂದಿದ್ದು, ತಮ್ಮದೇ ನಿರ್ದೇಶನದ 50ನೇ ಸಿನಿಮಾ ಸೆಂಚುರಿ ಸ್ಟಾರ್ ಸಾಥ್ ಕೊಡಲಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ 'ತ್ರಿವಿಕ್ರಮ' ಎಂದು ಟೈಟಲ್ ಕೂಡ ಇಡಲಾಗಿದೆ.

  ಸಂಜಯ್ ದತ್ ವಿಲನ್.!

  ಸಂಜಯ್ ದತ್ ವಿಲನ್.!

  ಅಂದ್ಹಾಗೆ, ಈ ಸಿನಿಮಾ ಬಹುಭಾಷೆಗಳಲ್ಲಿ ಮೂಡಿ ಬರಲಿದೆ ಎಂಬ ಮಾಹಿತಿ ಇದೆ. ಕನ್ನಡದಲ್ಲಿ ಶಿವಣ್ಣ ನಟಿಸಿದ್ರೆ, ಬೇರೆ ಭಾಷೆಗಳಲ್ಲಿ ಆಯಾ ಭಾಷೆಯ ಸ್ಟಾರ್ ನಟರು ನಟಿಸುವ ಸಾಧ್ಯತೆ ಇದೆ. ವಿಶೇಷ ಅಂದ್ರೆ, ಶಿವಣ್ಣ ಮತ್ತು ಓಂ ಪ್ರಕಾಶ್ ಜೋಡಿಯ ಈ ಚಿತ್ರದಲ್ಲಿ ಬಾಲಿವುಡ್ ನಡ ಸಂಜಯ್ ದತ್ ಅವರನ್ನ ವಿಲನ್ ಆಗಿಸಲು ತಯಾರಿ ನಡೆಸಿದ್ದಾರಂತೆ.

  ಕನ್ನಡದ ಬಿಗ್ ಸ್ಟಾರ್ ಚಿತ್ರದಲ್ಲಿ ಚಾನ್ಸ್ ಪಡೆದ ಮಯೂರಿಕನ್ನಡದ ಬಿಗ್ ಸ್ಟಾರ್ ಚಿತ್ರದಲ್ಲಿ ಚಾನ್ಸ್ ಪಡೆದ ಮಯೂರಿ

  ಸಾಯಿ ಪ್ರಕಾಶ್ 'ಸೆಂಚುರಿ'

  ಸಾಯಿ ಪ್ರಕಾಶ್ 'ಸೆಂಚುರಿ'

  ಇನ್ನು ಮತ್ತೊಂದೆಡೆ ಸಾಯಿ ಪ್ರಕಾಶ್ ಅವರ 100ನೇ ಚಿತ್ರದಲ್ಲೂ ಹ್ಯಾಟ್ರಿಕ್ ಹೀರೋ ನಾಯಕರಾಗಲಿದ್ದಾರಂತೆ. 'ತವರಿಗೆ ಬಾ ತಂಗಿ', 'ಅಣ್ಣ ತಂಗಿ', 'ದೇವರು ಕೊಟ್ಟ ತಂಗಿ', 'ಭಾಗ್ಯದ ಬಳೇಗಾರ', ಅಂತ ಸೂಪರ್ ಹಿಟ್ ಸಿನಿಮಾದ ನಂತರ ಮತ್ತೆ ಅದೇ ರೀತಿ ಕಥೆ ಮಾಡಲಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಸಿನಿಮಾ ಯಾವಾಗ ಆರಂಭವಾಗುತ್ತೆ ಎಂಬ ಮಾಹಿತಿ ಸದ್ಯಕ್ಕಿಲ್ಲ.

  English summary
  Kannada director om prakash rao to direct hatrick hero shiva rajkumar movie again. the titled called as a trivikram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X