'ಕೆಜಿಎಫ್‌ 2'ಗೆ ನೂರಾರು ಕೋಟಿ ಆಫರ್ ನೀಡಿದ ಒಟಿಟಿ

'ಕೆಜಿಎಫ್ 2' ಸಿನಿಮಾಕ್ಕಾಗಿ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವೇ ಅಲ್ಲ ಸಿನಿಮಾ ಉದ್ಯಮವೇ 'ಕೆಜಿಎಫ್ 2'ಗಾಗಿ ಕಾಯುತ್ತಿದೆ.

ಕೊರೊನಾದಿಂದ ತತ್ತರಿಸಿ ಹೋಗಿರುವ ಚಿತ್ರಮಂದಿರಗಳಂತೂ 'ಕೆಜಿಎಫ್ 2' ಸಿನಿಮಾ ಯಾವಾಗ ಬಿಡುಗಡೆ ಮಾಡೇವೊ ಚಿತ್ರಮಂದಿರಗಳಿಗೆ ಹಳೆಯ ಕಳೆ ಯಾವಾಗ ಕೂಡಿಬರುತ್ತದೋ, ಕಳೆದೊಂದು ವರ್ಷದಿಂದ ಲಾಭವೇ ಕಾಣದಿದ್ದ ಚಿತ್ರಮಂದಿರ ಮಾಲೀಕರು, ವಿತರಕರು 'ಕೆಜಿಎಫ್ 2' ಸಿನಿಮಾದಿಂದ ಒಂದಷ್ಟು ಹಣ ನೋಡುವ ಉಮೇದಿನಲ್ಲಿದ್ದಾರೆ.

ಆದರೆ ಇದೇ ಸಮಯಕ್ಕೆ ಒಟಿಟಿಯೊಂದು 'ಕೆಜಿಎಫ್ 2' ಸಿನಿಮಾವನ್ನು ಕೊಂಡುಕೊಳ್ಳಲು ಯೋಜನೆ ಹಾಕಿದೆ. ದೊಡ್ಡ ಒಟಿಟಿಯೊಂದು 'ಕೆಜಿಎಫ್ 2' ಸಿನಿಮಾದ ಮೇಲೆ ಕಣ್ಣು ಹಾಕಿದ್ದು, ಸಿನಿಮಾಕ್ಕೆ ನೂರಾರು ಕೋಟಿ ಮೊತ್ತದ ಆಫರ್ ನೀಡಿದೆ.

ಬರೋಬ್ಬರಿ 225 ಕೋಟಿ ರುಪಾಯಿಗಳನ್ನು 'ಕೆಜಿಎಫ್ 2' ಸಿನಿಮಾಕ್ಕೆ ಒಟಿಟಿಯೊಂದು ಆಫರ್ ನೀಡಿದೆ. ಸಲ್ಮಾನ್ ಖಾನ್ ನಟನೆಯ 'ರಾಧೆ' ಸಿನಿಮಾಕ್ಕಿಂತಲೂ ದೊಡ್ಡ ಡೀಲ್ ಇದಾಗಿದ್ದು, ಒಂದೊಮ್ಮೆ ಈ ಡೀಲ್ ಖಾಯಂ ಆದರೆ ಭಾರತದ ಅತಿದೊಡ್ಡ ಒಟಿಟಿ ಡೀಲ್ ಇದೆನಿಸಿಕೊಳ್ಳಲಿದೆ. ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಸಿನಿಮಾ ಎಂಬ ಖ್ಯಾತಿ 'ಕೆಜಿಎಫ್ 2' ಪಾಲಾಗಲಿದೆ.

ಚಿತ್ರಮಂದಿರದಲ್ಲಿಯೇ ಬಿಡುಗಡೆ ಆಗಬೇಕೆಂಬ ಇಂಗಿತ

ಚಿತ್ರಮಂದಿರದಲ್ಲಿಯೇ ಬಿಡುಗಡೆ ಆಗಬೇಕೆಂಬ ಇಂಗಿತ

ಆದರೆ 'ಕೆಜಿಎಫ್ 2' ಅನ್ನು ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಮಾಡಬೇಕು ಎಂಬುದು ಚಿತ್ರತಂಡದ ಆಸೆ. ನಟ ಯಶ್ ಅಂತೂ 'ಕೆಜಿಎಫ್ 2' ಸಿನಿಮಾ ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಆಗಬೇಕು ಎಂದು ಮೊದಲೇ ಹೇಳಿಬಿಟ್ಟಿದ್ದಾರೆ ಎನ್ನಲಾಗಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೂ 'ಕೆಜಿಎಫ್ 2' ಸಿನಿಮಾವನ್ನು ಒಟಿಟಿಗೆ ನೀಡಲು ಸುತಾರಾಂ ಇಷ್ಟವಿಲ್ಲ. ಯಶ್ ಅಭಿಮಾನಿಗಳಿಗೂ 'ಕೆಜಿಎಫ್ 2' ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುವುದು ಸುತಾರಾಂ ಇಷ್ಟವಿಲ್ಲ. 'ಕೆಜಿಎಫ್ 2' ಅಬ್ಬರವನ್ನು ಚಿತ್ರಮಂದಿರದಲ್ಲಿಯೇ ಕಣ್ತುಂಬಿಕೊಳ್ಳುವ ಆಸೆ ಅವರದ್ದು.

ಒಂದೇ ತಿಂಗಳಿಗೆ ಒಟಿಟಿಗೆ ಬರಲಿದೆಯೇ?

ಒಂದೇ ತಿಂಗಳಿಗೆ ಒಟಿಟಿಗೆ ಬರಲಿದೆಯೇ?

ವಿಜಯ್ ಕಿರಗಂದೂರ್ ಅವರೇ ನಿರ್ಮಿಸಿದ್ದ 'ಯುವರತ್ನ' ಸಿನಿಮಾವನ್ನು ಬಿಡುಗಡೆ ಆದ ಒಂದು ವಾರಕ್ಕೆ ಒಟಿಟಿಗೆ ನೀಡಿದ್ದರು. ಅಂತೆಯೇ 'ಕೆಜಿಎಫ್ 2' ಅನ್ನು ಒಟಿಟಿಗೆ ನೀಡುತ್ತಾರಾ ಎಂದು ಕಾದು ನೋಡಬೇಕಿದೆ. ತಮಿಳಿನ ವಿಜಯ್ ನಟನೆಯ 'ಮಾಸ್ಟರ್', ಪವನ್ ಕಲ್ಯಾಣ್ ನಟನೆಯ 'ವಕೀಲ್ ಸಾಬ್' ಸಿನಿಮಾಗಳನ್ನು ಅವು ಬಿಡುಗಡೆ ಆದ ಒಂದು ತಿಂಗಳ ಒಳಗಾಗಿಯೇ ಒಟಿಟಿಗಳಿಗೆ ಭಾರಿ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲಾಗಿತ್ತು. 'ಕೆಜಿಎಫ್ 2' ಸಿನಿಮಾವನ್ನು ಹಾಗೆಯೇ ಮಾಡಲಾಗುತ್ತದೆ ಎನ್ನಲಾಗುತ್ತಿದೆ.

'ಕೆಜಿಎಫ್ 2' ಬಿಡುಗಡೆ ಯಾವಾಗ?

'ಕೆಜಿಎಫ್ 2' ಬಿಡುಗಡೆ ಯಾವಾಗ?

'ಕೆಜಿಎಫ್ 2' ಜುಲೈ 16ಕ್ಕೆ ಬಿಡುಗಡೆ ಆಗಲಿದೆ ಎಂದು ಈ ಹಿಂದೆ ಚಿತ್ರತಂಡ ಘೋಷಿಸಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಸಿನಿಮಾದ ಬಿಡುಗಡೆ ಮುಂದೂಡಲಾಗಿದೆ. ಹೊಸ ಬಿಡುಗಡೆ ದಿನಾಂಕವನ್ನು ಈ ವರೆಗೆ ಘೋಷಿಸಿಲ್ಲ. ಕೆಲವು ಮೂಲಗಳ ಪ್ರಕಾರ 'ಕೆಜಿಎಫ್; ಚಾಪ್ಟರ್ 1' ಬಿಡುಗಡೆ ಮಾಡಿದ್ದ ಡಿಸೆಂಬರ್ ತಿಂಗಳಿನಲ್ಲಿಯೇ 'ಕೆಜಿಎಫ್ 2' ಬಿಡುಗಡೆಯೂ ಆಗಲಿದೆ ಎನ್ನಲಾಗುತ್ತಿದೆ. ಕೊರೊನಾ ಮೂರನೇ ಅಲೆಯ ಭಯವಿರುವ ಕಾರಣ 'ಕೆಜಿಎಫ್ 2' ಸಿನಿಮಾದ ಹೊಸ ದಿನಾಂಕ ಘೋಷಿಸಲು ಚಿತ್ರತಂಡ ಹಿಂದೆ-ಮುಂದೆ ನೋಡುತ್ತಿದೆ.

ಹಲವು ಸ್ಟಾರ್ ನಟರು ಸಿನಿಮಾದಲ್ಲಿದ್ದಾರೆ

ಹಲವು ಸ್ಟಾರ್ ನಟರು ಸಿನಿಮಾದಲ್ಲಿದ್ದಾರೆ

'ಕೆಜಿಎಫ್ 1'ಗೆ ಹೋಲಿಸಿದರೆ 'ಕೆಜಿಎಫ್ 2' ಸಿನಿಮಾವು ಸಾಕಷ್ಟು ಅದ್ಧೂರಿತನ, ಭಿನ್ನತೆಗಳನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. 'ಕೆಜಿಎಫ್ 2' ನಲ್ಲಿ ಯಶ್ ಜೊತೆಗೆ ಕಾದಾಡಲು ಬಾಲಿವುಡ್‌ನ ಸ್ಟಾರ್ ಸಂಜಯ್ ದತ್ ಇದ್ದಾರೆ. ಜೊತೆಗೆ ರವೀನಾ ಟಂಡನ್ ಸಹ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಕಾಶ್ ರೈ, ತೆಲುಗಿನ ರಾವ್ ರಮೇಶ್ ಇನ್ನೂ ಹಲವು ನಟರು ಸಿನಿಮಾದಲ್ಲಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಸಿನಿಮಾವು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಆಗಲಿದೆ. ಒಡಿಯಾ ಭಾಷೆಗೂ ಡಬ್ ಮಾಡಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

More from Filmibeat

English summary
KGF 2 movie gets very big offer from a OTT. A big OTT offers 225 crore rs to KGF 2 makers to release it directly on their platform.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X