ಪಾಕಿಸ್ತಾನಿ ನಟಿ ಜೊತೆ ತೆಲುಗು ನಟ ಪ್ರಭಾಸ್ ರೊಮ್ಯಾನ್ಸ್?
'ಕಲ್ಕಿ 2898 AD' ಸಿನಿಮಾ ಸಕ್ಸಸ್ ಅಲೆಯಲ್ಲಿ ಪ್ರಭಾಸ್ ತೇಲುತ್ತಿದ್ದಾರೆ. ಈ ಸಿನಿಮಾ ಈಗಾಗಲೇ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಮುಂದೆ 'ರಾಜಾ ಸಾಬ್' ಸಿನಿಮಾ ಮೂಲಕ ಪ್ರಭಾಸ್ ಪ್ರೇಕ್ಷಕರ ಮುಂದೆ ಬರಲಿದ್ದಾರೆ. 'ಸಲಾರ್- 2' ಹಾಗೂ 'ಕಲ್ಕಿ 2898 AD' ಸೀಕ್ವೆಲ್‌ನಲ್ಲಿ ಕೂಡ ನಟಿಸಲಿದ್ದಾರೆ.
ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರೂ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಮೂರ್ನಾಲ್ಕು ಸಿನಿಮಾಗಳು ಅಭಿಮಾನಿಗಳ ನೆಚ್ಚಿನ ಡಾರ್ಲಿಂಗ್ ಕೈಯಲ್ಲಿದೆ. 'ಅನಿಮಲ್' ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ಮುಂದಿನ ಚಿತ್ರದಲ್ಲಿ ಕೂಡ ಪ್ರಭಾಸ್ ನಟಿಸಲಿದ್ದಾರೆ. ಇನ್ನು ಹನು ರಾಘವಪೂಡಿ ನಿರ್ದೇಶನದ ಚಿತ್ರಕ್ಕೂ ಯಂಗ್ ರೆಬಲ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

'ಸೀತಾರಾಮಂ' ಸಿನಿಮಾ ಮಾಡಿ ಹನು ರಾಘವಪೂಡಿ ಸಕ್ಸಸ್ ಕಂಡಿದ್ದಾರೆ. ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಪೀರಿಯಡ್ ಆಕ್ಷನ್ ಡ್ರಾಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಅದೇ ಕಾರಣಕ್ಕೆ ಹನು ಮುಂದಿನ ಚಿತ್ರಕ್ಕೆ ಪ್ರಭಾಸ್ ಸೈ ಎಂದಿದ್ದಾರೆ. ಇದೀಗ ಈ ಚಿತ್ರದ ನಾಯಕಿ ಯಾರು ಎನ್ನುವ ಬಗ್ಗೆ ಗುಸುಗುಸು ಶುರುವಾಗಿದೆ. ಇನ್ನು ಚಿತ್ರಕ್ಕೆ 'ಫೌಜಿ' ಎಂದು ಹೆಸರಿಟ್ಟಿದ್ದಾರೆ ಎನ್ನಲಾಗ್ತಿದೆ.
'ಫೌಜಿ' ಚಿತ್ರದಲ್ಲಿ ಪಾಕಿಸ್ತಾನಿ ನಟಿ ಸಜಲ್ ಅಲಿ ಜೊತೆ ಪ್ರಭಾಸ್ ರೊಮ್ಯಾನ್ಸ್ ಮಾಡುತ್ತಾರೆ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಜಲ್ ಅಲಿ ಬಹಳ ಜನಪ್ರಿಯರಾಗಿದ್ದಾರೆ. ಸಾಕಷ್ಟು ಜನ ಆಕೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಆಕೆಗೆ ಕೆಲ ಸಿನಿಮಾಗಳು, ಧಾರಾವಾಹಿಗಳು, ವೆಬ್ ಸರಣಿಗಳಲ್ಲಿ ನಟಿಸಿದ ಅನುಭವವಿದೆ.
ಈ ಹಿಂದೆ ಬಾಲಿವುಡ್‌ನಲ್ಲಿ ಶ್ರೀದೇವಿ ನಟನೆಯ 'ಮಾಮ್' ಚಿತ್ರದಲ್ಲಿ ಸಜಲ್ ಅಲಿ ಕಾಣಿಸಿಕೊಂಡಿದ್ದರು. ಎಲ್ಲಾ ಸರಿ ತೆಲುಗು ಚಿತ್ರಕ್ಕೆ ಪಾಕಿಸ್ತಾನಿ ನಟಿಯನ್ನು ಕರೆದುಕೊಂಡು ಬರುವ ಅವಶ್ಯಕತೆ ಏನಿದೆ? ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ ಬಾಲಿವುಡ್‌ನ ಕೆಲ ಸಿನಿಮಾಗಳಲ್ಲಿ ಪಾಕಿಸ್ತಾನ ನಟ-ನಟಿಯರು, ಗಾಯಕರು ಕೆಲಸ ಮಾಡಿದ್ದರು.

'ರಾಜಾಸಾಬ್' ಬಳಿಕ ಪ್ರಭಾಸ್ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಆಗಸ್ಟ್‌ನಲ್ಲೇ 'ಸಲಾರ್-2' ಚಿತ್ರೀಕರಣ ಶುರುವಾಗುತ್ತದೆ ಎನ್ನಲಾಗ್ತಿದೆ. ಮತ್ತೊಂದು ಕಡೆ ಆಗಸ್ಟ್‌ನಲ್ಲಿ ಜ್ಯೂ. ಎನ್‌ಟಿಆರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಆರಂಭಿಸುವುದಾಗಿ ಚಿತ್ರತಂಡ ಹೇಳಿದೆ. ಹಾಗಾಗಿ 'ಸಲಾರ್'-2 ಶುರುವಾಗಿದಿದ್ದರೆ 'ಫೌಜಿ' ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.
ಮತ್ತೊಂದು ಕಡೆ 'ಫೌಜಿ' ಚಿತ್ರದಲ್ಲಿ ಸಜಲ್ ಅಲಿ ಅಲ್ಲ ಇಮಾನ್ ಎಸ್ಮೇಲ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇಮಾನ್ ಎಸ್ಮೇಲ್ ಜೊತೆ ಮೃಣಾಲ್ ಮತ್ತೊಬ್ಬ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಕೆಲವು ಊಹಿಸುತ್ತಿದ್ದಾರೆ. ನಿರ್ದೇಶಕ ಹನು ರಾಘವಪೂಡಿ ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಯನ್ನು ಫಾಲೋ ಮಾಡುತ್ತಿರುವುದು ಇಂತಾದೊಂದು ಊಹಾಪೋಹಕ್ಕೆ ಕಾರಣವಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.


Click it and Unblock the Notifications











